More

    ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಗಂಗೂಲಿಗೆ ಇಂದು 49ನೇ ಜನ್ಮದಿನದ ಸಂಭ್ರಮ

    ಬೆಂಗಳೂರು: ಭಾರತೀಯ ಕ್ರಿಕೆಟ್‌ನ ಚಹರೆಯನ್ನೇ ಬದಲಿಸಿದ ನಾಯಕ ಹಾಗೂ ಬಿಸಿಸಿಐನ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ 49ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಭಾರತ ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರೇ ಗಂಗೂಲಿ. ಅಭಿಮಾನಿಗಳು ಮತ್ತು ಸಹ-ಆಟಗಾರರಿಂದ ಪ್ರೀತಿಯಿಂದ ‘ದಾದಾ’ ಎಂದು ಕರೆಸಿಕೊಳ್ಳುವ ಅವರು ಈಗ ತಮ್ಮ ನಾಯಕತ್ವ ಗುಣದಿಂದ ಬಿಸಿಸಿಐನಲ್ಲೂ ದಕ್ಷ ಆಡಳಿತದ ಮೂಲಕ ಕ್ರಿಕೆಟ್ ಅಭಿವೃದ್ಧಿಗೆ ಮತ್ತಷ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ.

    ಎಡಗೈ ಬ್ಯಾಟ್ಸ್‌ಮನ್ ಆಗಿ ಭಾರತ ಪರ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಸಿಡಿಸಿದ ಸಾಧನೆ ಮಾಡಿರುವ ಗಂಗೂಲಿ, 113 ಟೆಸ್ಟ್‌ಗಳಲ್ಲಿ 16 ಶತಕಗಳ ಸಹಿತ 7,212 ರನ್ ಮತ್ತು 311 ಏಕದಿನ ಪಂದ್ಯಗಳಲ್ಲಿ 22 ಶತಕಗಳ ಸಹಿತ 11,363 ರನ್ ಬಾರಿಸಿದ್ದಾರೆ. 2003ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಫೈನಲ್‌ಗೇರಿಸಿದ್ದ ಗಂಗೂಲಿ, 2002ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. 2002ರಲ್ಲಿ ಇಂಗ್ಲೆಂಡ್‌ನಲ್ಲಿ ದಾಖಲೆ ಚೇಸಿಂಗ್ ಮೂಲಕ ನಾಟ್‌ವೆಸ್ಟ್ ಸರಣಿ ಜಯಿಸಿದ್ದು ಮತ್ತು ಲಾರ್ಡ್ಸ್ ಬಾಲ್ಕನಿಯಲ್ಲಿ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದು ಕೂಡ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಮರಣೀಯ ಸ್ಥಾನ ಪಡೆದಿದೆ.

    ಇದನ್ನೂ ಓದಿ: ಮತ್ತೆ ವಿಶ್ವ ನಂ. 1 ಪಟ್ಟಕ್ಕೇರಿ ಅಪರೂಪದ ದಾಖಲೆ ಬರೆದ ಮಿಥಾಲಿ ರಾಜ್

    ಗಂಗೂಲಿ ನಾಯಕರಾಗಿ 49 ಟೆಸ್ಟ್‌ಗಳಲ್ಲಿ 21 ಗೆಲುವು (13 ಸೋಲು, 15 ಡ್ರಾ) ಮತ್ತು 146 ಏಕದಿನ ಪಂದ್ಯಗಳಲ್ಲಿ 76 ಗೆಲುವು (65 ಸೋಲು, 5 ರದ್ದು) ತಂದುಕೊಟ್ಟಿದ್ದಾರೆ. 1996ರಲ್ಲಿ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಅವರ ಸರಾಸರಿ ಎಂದೂ 40ಕ್ಕಿಂತ ಕಡಿಮೆಯಾಗಿದ್ದಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್, 100 ವಿಕೆಟ್ ಮತ್ತು 100 ಕ್ಯಾಚ್ ಗಳಿಸಿದ ಐವರು ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸತತ 4 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಅಪರೂಪದ ವಿಶ್ವದಾಖಲೆಯೂ ಅವರ ಹೆಸರಿನಲ್ಲಿದೆ.

    ಎಂಎಸ್ ಧೋನಿಗೆ ಇಂದು 40ನೇ ಜನ್ಮದಿನದ ಸಂಭ್ರಮ, ಅವರ 40 ದಾಖಲೆಗಳು ಹೀಗಿವೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts