More

    ಮತ್ತೆ ವಿಶ್ವ ನಂ. 1 ಪಟ್ಟಕ್ಕೇರಿ ಅಪರೂಪದ ದಾಖಲೆ ಬರೆದ ಮಿಥಾಲಿ ರಾಜ್

    ದುಬೈ: ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ ಮೂರು ವರ್ಷಗಳ ಬಳಿಕ ಮತ್ತೆ ವಿಶ್ವ ನಂ. 1 ಪಟ್ಟಕ್ಕೇರಿದ್ದಾರೆ. ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ತೋರಿದ ಉತ್ತಮ ನಿರ್ವಹಣೆ ಇದಕ್ಕೆ ಕಾರಣವಾಗಿದೆ.

    ಭಾರತ ತಂಡ 1-2ರಿಂದ ಸರಣಿ ಸೋಲು ಕಂಡ ನಡುವೆ 38 ವರ್ಷದ ಮಿಥಾಲಿ ರಾಜ್ ಸರಣಿಯ ಮೂರೂ ಪಂದ್ಯಗಳಲ್ಲಿ (72, 59, 75*) ಅರ್ಧಶತಕ ಬಾರಿಸಿ ಮಿಂಚಿದ್ದರು. ಇದರಿಂದ ಮಿಥಾಲಿ 4 ಸ್ಥಾನ ಬಡ್ತಿ ಪಡೆದಿದ್ದರೆ, ಅಗ್ರಸ್ಥಾನದಲ್ಲಿದ್ದ ಇಂಗ್ಲೆಂಡ್‌ನ ಟಾಮಿ ಬೆಯುಮೌಂಟ್ 4ನೇ ಸ್ಥಾನಕ್ಕಿಳಿದಿದ್ದಾರೆ.

    ಇದನ್ನೂ ಓದಿ: ಬ್ಯಾಟ್ ಪಕ್ಕದ ಮನೆಯವನ ಹೆಂಡ್ತಿ ಇದ್ದಂತೆ ಎಂದ ದಿನೇಶ್​ ಕಾರ್ತಿಕ್‌ಗೆ ತಾಯಿ-ಪತ್ನಿಯಿಂದ ಕ್ಲಾಸ್!

    2018ರ ಫೆಬ್ರವರಿಯಲ್ಲಿ ಮಿಥಾಲಿ ಕೊನೆಯದಾಗಿ ವಿಶ್ವ ನಂ. 1 ಬ್ಯಾಟುಗಾರ್ತಿ ಎನಿಸಿದ್ದರು. ಅವರು 2005ರ ಏಪ್ರಿಲ್‌ನಲ್ಲಿ ಮೊದಲ ಬಾರಿ ವಿಶ್ವ ನಂ. 1 ಪಟ್ಟಕ್ಕೇರಿದ್ದರು. ಒಟ್ಟಾರೆ 16 ವರ್ಷಗಳ ಅಂತರದಲ್ಲಿ ನಂ. 1 ಎನಿಸಿದ ವಿಶ್ವದ ಮೊದಲ ಬ್ಯಾಟುಗಾರ್ತಿ ಎಂಬ ಅಪರೂಪದ ಸಾಧನೆಯನ್ನೂ ಮಾಡಿದ್ದಾರೆ. ಇಂಗ್ಲೆಂಡ್‌ನ ಜೆನ್ನೆಟ್ ಬ್ರಿಟಿನ್ (11 ವರ್ಷ) ಮತ್ತು ನ್ಯೂಜಿಲೆಂಡ್‌ನ ಡೆಬ್ಬಿ ಹಾಕ್ಲೆ (10 ವರ್ಷ) 10ಕ್ಕಿಂತ ಹೆಚ್ಚು ವರ್ಷಗಳ ಅಂತರದಲ್ಲಿ ನಂ. 1 ಪಟ್ಟ ಅಲಂಕರಿಸಿದ್ದ ಇನ್ನಿಬ್ಬರು ಬ್ಯಾಟುಗಾರ್ತಿಯರು.

    ಭಾರತದ ಯುವ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮ 49 ಸ್ಥಾನ ಮೇಲೇರಿ 71ನೇ ಸ್ಥಾನ ಗಳಿಸಿದ್ದಾರೆ. ಸ್ಮತಿ ಮಂದನಾ 9ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಬೌಲರ್‌ಗಳ ರ‌್ಯಾಂಕಿಂಗ್‌ನಲ್ಲಿ ದೀಪ್ತಿ ಶರ್ಮ 1 ಸ್ಥಾನ ಮೇಲೇರಿ 12ನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಜೆಸ್ ಜೊನಾಸೆನ್ ವಿಶ್ವ ನಂ. 1 ಬೌಲರ್ ಪಟ್ಟ ಕಾಯ್ದುಕೊಂಡಿದ್ದರೆ, ಭಾರತದ ಜೂಲನ್ ಗೋಸ್ವಾಮಿ 5 ಮತ್ತು ಪೂನಂ ಯಾದವ್ 9ನೇ ಸ್ಥಾನದಲ್ಲಿ ಉಳಿದಿದ್ದಾರೆ.

    11ನೇ ವಿವಾಹ ವಾರ್ಷಿಕೋತ್ಸವದಂದು ಪತ್ನಿಗೆ ವಿಶೇಷ ಉಡುಗೊರೆ ನೀಡಿದ ಧೋನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts