More

    ಛಿದ್ರಕಾರಿ ಶಕ್ತಿ ಹಿಮ್ಮೆಟ್ಟಿಸುವುದು ನೈತಿಕ ಜವಾಬ್ದಾರಿಯಾಗಲಿ

    ಧಾರವಾಡ: ದೇಶದ ಸ್ವಾತಂತ್ರ‍್ಯ, ಐಕ್ಯತೆ, ಭಾವೈಕ್ಯತೆಗಾಗಿ ಜೀವನ ಮುಡಿಪಾಗಿಟ್ಟಿದ್ದ ಮಹಾತ್ಮಾ ಗಾಂಽಯವರನ್ನು ಬಲಿ ತೆಗೆದುಕೊಂಡ ದಿನ ಜನವರಿ ೩೦. ಅಂಥ ಹುತಾತ್ಮರಿಗೆ ನಿಜ ಗೌರವ ಸಲ್ಲಿಸಬೇಕಾದರೆ ಛಿದ್ರಕಾರಿ ಶಕ್ತಿಗಳನ್ನು ಹಿಮ್ಮೆಟ್ಟಿಸುವುದು ನಮ್ಮ ನೈತಿಕ ಜವಾಬ್ದಾರಿಯಾಗಬೇಕು ಎಂದು ಹಿರಿಯ ಸಾಹಿತಿ, ಪತ್ರಕರ್ತ ಡಾ. ರಂಜಾನ್ ದರ್ಗಾ ಹೇಳಿದರು.
    ಮಹಾತ್ಮಾ ಗಾಂಽ ಹುತಾತ್ಮ ದಿನದ ಅಂಗವಾಗಿ ಸೌಹಾರ್ದ ಕರ್ನಾಟಕ ಪ್ರಗತಿಪರ ಸಂಘಟನೆಗಳ ಸಮಾನ ಮನಸ್ಕರ ವೇದಿಕೆಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಮಾನವ ಸರಪಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
    ಚಿಂತಕ ಡಾ. ಸಿದ್ದನಗೌಡ ಪಾಟೀಲ ಮಾತನಾಡಿ, ಕೋಮುವಾದಿ, ಕಾರ್ಪೋರೇಟ್ ರಾಜಕಾರಣ ದೇಶದ ಮೌಲ್ಯಗಳನ್ನು ನಾಶ ಮಾಡುತ್ತಿದೆ. ಸತ್ಯವನ್ನು ಮರೆಮಾಚಿ ಅಸತ್ಯವನ್ನು ಬಿಂಬಿಸಲಾಗುತ್ತಿದೆ. ವಿಜ್ಞಾನದ ಬದಲಾಗಿ ಅಜ್ಞಾನ ತಾಂಡವವಾಡುತ್ತಿದೆ. ಕ್ರೌರ್ಯವನ್ನು ಸೌರ್ಯವೆಂದು ಬಿಂಬಿಸಲಾಗುತ್ತಿದೆ. ದೇಶಕ್ಕಾಗಿ ಹೋರಾಟ, ತ್ಯಾಗ ಮಾಡಿದ ನೂರಾರು ಮಹಾನ್ ವ್ಯಕ್ತಿಗಳನ್ನು ಮರೆಮಾಚಿ ದೇಶದ್ರೋಹಿಗಳನ್ನು ದೇಶಪ್ರೇಮಿಗಳೆಂದು ಬಿಂಬಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸೌಹಾರ್ದತೆಯ ಪರಂಪರೆಯನ್ನು ಕಾಪಾಡಿ ಜಾಗೃತಿ ಮೂಡಿಸಲು ಮಾನವ ಸರಪಳಿಯಂಥ ಸೌಹಾರ್ದ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
    ಸೌಹಾರ್ದ ಕರ್ನಾಟಕದ ಸಂಚಾಲಕ ಮಹೇಶ ಪತ್ತಾರ, ಸಾಹಿತಿಗಳಾದ ಡಾ. ಸದಾಶಿವ ಮರ್ಜಿ, ಬಸುರಾಜ ಸೂಳಿಭಾವಿ ಮಾತನಾಡಿದರು.
    ಬಿ.ಎನ್. ಪೂಜಾರಿ, ಎ.ಎಂ. ಖಾನ್, ಎಸ್.ಎಂ. ಬುಡನಖಾನ್, ಬಿ.ಐ. ಈಳಿಗೇರ, ಅತೀಕ್ ಸಂಗ್ರೇಶಕೊಪ್ಪ, ಜೋಸೆಫ್ ಮಲ್ಲಾಡಿ, ಗಂಗಾಧರ ಗಾಡದ, ಮುಸ್ತಾಕ ಹಾವೇರಿಪೇಟ, ಡಾ. ಲಿಂಗರಾಜ ಅಂಗಡಿ, ಪ್ರೊ. ಕೆ.ಎಸ್. ಕೌಜಲಗಿ, ಡಾ. ಅಫಜಲ್ ಭಾವಿಕಟ್ಟಿ, ಅನ್ನಪೂರ್ಣಾ ಮಡಿವಾಳರ, ಕೆ.ಎಚ್. ಪಾಟೀಲ, ಗಾಯತ್ರಿ ಹಡಪದ ಹಾಗೂ ಶಾಲೆ- ಕಾಲೇಜುಗಳ ವಿದ್ಯಾರ್ಥಿಗಳು ಸೌಹಾರ್ದತಾ ಮಾನವ ಸರಪಳಿಯಲ್ಲಿ ಕೈ ಜೋಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts