More

    ಚರಂಡಿ ಹೂಳು ತುಂಗಾ ನದಿಗೆ

    ಶೃಂಗೇರಿ: ಪಟ್ಟಣದ ಕೆಇಬಿ ಮುಂಭಾಗದ ಚರಂಡಿ ಹೂಳು ತೆಗೆಯುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ.

    ಆದರೆ ತೆಗೆದ ಹೂಳನ್ನು ತುಂಗಾ ನದಿ ಸಮೀಪ ವಿಲೇವಾರಿ ಮಾಡುತ್ತಿರುವುದರಿಂದ ಅನಾರೋಗ್ಯದ ಆತಂಕ ಎದುರಾಗಿದೆ. ಬಹುತೇಕ ಗ್ರಾಪಂಗಳ ಜನರು ತುಂಗಾ ನದಿ ನೀರು ಕುಡಿಯುವುದಕ್ಕಾಗಿ ಬಳಸುತ್ತಿದ್ದಾರೆ. ನದಿಯಲ್ಲಿ ನಡುಗುಡ್ಡೆಯಂತಾಗಿರುವ ನೀರು ಸಂಗ್ರಹವಾಗಿದೆ. ಚರಂಡಿ ಹೂಳು ತೆಗೆದು ನದಿ ಸಮೀಪ ಹಾಕಿದರೆ ಮತ್ತಷ್ಟು ಕೊಳೆತು ನದಿಗೆ ಸೇರಿ ನೀರು ಕಲುಷಿತವಾಗಲಿದೆ. ಹೂಳು ತೆಗೆಯುವವರಿಗೆ ಅಧಿಕಾರಿಗಳು ತ್ಯಾಜ್ಯವನ್ನು ಎಲ್ಲಿ ವಿಲೇವಾರಿ ಮಾಡಬೇಕು ಎಂಬ ಮಾರ್ಗದರ್ಶನ ನೀಡಬೇಕು. ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರದೆ ಎಲ್ಲರ ಆರೋಗ್ಯ ಕಾಪಾಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts