More

    1935ರ ದಾಖಲೆ ಪ್ರಕಾರ ಪರಿಹಾರ

    ಸಾಗರ: ಸೊರಬ ರಸ್ತೆ ಅಗಲೀಕರಣ ಯೋಜನೆಯಲ್ಲಿ ಸ್ವತ್ತಿನ ಮಾಲೀಕರಿಗೆ 1935ರಲ್ಲಿ ಹೊಂದಿರುವ ದಾಖಲೆಯ ಪ್ರಕಾರ ಪರಿಹಾರ ನೀಡಿ. ಒಂದು ವಾರದಲ್ಲಿ ಹಿಂದಿನ ಅಳತೆ ಎಷ್ಟಿತ್ತು? ಈಗ ಎಷ್ಟು ಸರ್ಕಾರಿ ಜಾಗ ಒತ್ತುವರಿ ಆಗಿದೆ ಎಂಬ ವರದಿ ಸಿದ್ಧಪಡಿಸಿ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಪೌರಾಯುಕ್ತರಿಗೆ ಸೂಚನೆ ನೀಡಿದರು.

    ಸೊರಬ ರಸ್ತೆ ಅಗಲೀಕರಣಕ್ಕೆ ರಸ್ತೆ ಇಕ್ಕೆಲಗಳಲ್ಲಿ ಬರುವ ಖಾಸಗಿ ಸ್ವತ್ತುಗಳ 1935ರ ದಾಖಲೆ ಮತ್ತು 2001ರ ಹಾಗೂ ಈಗಿನ ದಾಖಲೆ ಪರಿಶೀಲಿಸಿ, ಸರ್ಕಾರಿ ಜಾಗವಿದ್ದರೆ ಈ ಸಂಬಂಧ ಸ್ವತ್ತಿನ ಮಾಲೀಕರಿಗೆ ಮಾಹಿತಿ ನೀಡಿ. ಒಂದು ವೇಳೆ ಯಾರಾದರೂ ಅಗಲೀಕರಣ ಯೋಜನೆಗೆ ಅಪಸ್ವರ ಎತ್ತಿದರೆ ಕಾನೂನಿನಂತೆ ಕ್ರಮ ಕೈಗೊಳ್ಳಿ ಎಂದು ಡಿಸಿ ಕೆ.ಬಿ.ಶಿವಕುಮಾರ್ ಸೂಚಿಸಿದರು.

    ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಸ್ತೆ ಅಗಲೀಕರಣ ಸಂಬಂಧ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಭೂಸ್ವಾಧೀನ ಪ್ರಶ್ನಿಸಿದ ನ್ಯಾಯಾಲಯಕ್ಕೆ ಹೋದರೆ 1935ರ ದಾಖಲೆ ಪ್ರಕಾರ ತೀರ್ಪು ಸರ್ಕಾರದ ಪರವಾಗಿ ಬರಲಿದೆ. ಆದರೆ ಸ್ವಲ್ಪ ವಿಳಂಬವಾಗಬಹುದು ಎಂದರು.

    ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಮೀಪ 17 ಎಕರೆ ಸರ್ಕಾರಿ ಭೂಮಿ ಸೊಪ್ಪಿನಬೆಟ್ಟ ಹೆಸರಿನಲ್ಲಿ ವ್ಯಕ್ತಿಯೊಬ್ಬರ ವಶದಲ್ಲಿದೆ. ಇದನ್ನು ನಗರಸಭೆ ವಶಕ್ಕೆ ಪಡೆದು ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದು ನಗರಸಭೆ ಸದಸ್ಯ ಬಿ.ಎಚ್.ಲಿಂಗರಾಜ್ ಡಿಸಿಗೆ ಮನವಿ ಮಾಡಿದರು.

    ಎಸಿ ವಿ.ಪ್ರಸನ್ನ, ತಹಸೀಲ್ದಾರ್ ಚಂದ್ರಶೇಖರ ನಾಯ್ಕ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಡಿಎಚ್​ಒ ಡಾ. ರಾಜೇಶ್ ಸುರಗಿಹಳ್ಳಿ, ಟಿಎಚ್​ಒ ಡಾ. ಕೆ.ಎಸ್.ಮೋಹನ್, ಡಿಸಿಎಫ್ ಮೋಹನ್ ಕುಮಾರ್, ಆರ್​ಎಫ್​ಒ ಡಿ.ಆರ್.ಪ್ರಮೋದ್, ಎಇಇ ದಿನೇಶ್, ಡಿವೈಎಸ್​ಪಿ ವಿನಾಯಕ್ ಎನ್.ಶೆಟ್ಟಿಗೇರ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts