More

    ಪಾಲಕರು ಮಕ್ಕಳ ಕಲಿಕೆಗೆ ಉತ್ತೇಜನ ನೀಡಲಿ

    ಹೂವಿನಹಡಗಲಿ: ವಿದ್ಯಾರ್ಥಿ ಜೀವನದಲ್ಲಿ ದ್ವಿತೀಯ ಪಿಯುಸಿ ಹಂತವು ಪ್ರಮುಖ ಘಟ್ಟವಾಗಿದ್ದು, ಹೆಚ್ಚಿನ ಅಭ್ಯಾಸಕ್ಕೆ ಗಮನ ಹರಿಸಬೇಕು ಎಂದು ಪ್ರಾಚಾರ್ಯ ಎ.ಕೊಟ್ರಗೌಡ ಹೇಳಿದರು.

    ದ್ವಿತೀಯ ಪಿಯುಸಿ ಹಂತವು ಪ್ರಮುಖ ಘಟ್ಟ

    ಪಟ್ಟಣದ ಸೊಪ್ಪಿನ ಕಾಳಮ್ಮನವರ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮನೆಯಲ್ಲಿ ಮಕ್ಕಳ ಕಲಿಕೆಗೆ ಪಾಲಕರು ಪ್ರೋತ್ಸಾಹಿಸಲಿ ಎಂದರು.

    ಇದನ್ನೂ ಓದಿ: ಡಿಕೆ ಶಿವಕುಮಾರ್​ಗೆ ತಿರುಗೇಟು ಕೊಟ್ಟ ಬಸನಗೌಡ ಪಾಟೀಲ್ ಯತ್ನಾಳ್​​

    ದ್ವಿತೀಯ ಪಿಯುಸಿ ಪರೀಕ್ಷೆಗಳು ಎರಡು ತಿಂಗಳಲ್ಲಿ ಬರಲಿವೆ. ಕಾರಣ ಪಾಲಕರು ಕಾಲೇಜಿನ ಉಪನ್ಯಾಸಕರ ಜತೆಗೆ ಸಹಕರಿಸಿದರೆ ಮಕ್ಕಳ ಕಲಿಕೆಗೆ ಉತ್ತೇಜನ ಸಿಗಲಿದೆ. ಬದಲಾದ ದ್ವಿತೀಯ ಪರೀಕ್ಷಾ ಪದ್ಧತಿಯು ವಿದ್ಯಾರ್ಥಿಗಳಿಗೆ ವರವಾಗಿದೆ ಎಂದರು.
    ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಹೆತ್ತವರಿಗೆ ಹಾಗೂ ಕಾಲೇಜಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

    ಪ್ರತಿ ವಿದ್ಯಾರ್ಥಿಯ ವೈಯಕ್ತಿಕ ಕುಂದುಕೊರತೆಯನ್ನು ಪಾಲಕರೊಂದಿಗೆ ಚರ್ಚಿಸಲಾಯಿತು. ಕನ್ನಡ ಉಪನ್ಯಾಸಕ ಬಸೆಟ್ಟಿ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಉಪನ್ಯಾಸಕರಾದ ಮಹೇಂದ್ರ ಬಾರಿಕರ, ಸಾಬುದ್ದಿನ್ ಸಾಹೇಬ್, ಶಿವಕುಮಾರ, ಶ್ರೀಕಾಂತ್ ಬಂಡಿಹಾಳ್, ಆರತಿ, ಮಾಬುಸಾಬ್, ಶಂಕರ್, ಪರಶುರಾಮ ನಾಗೋಜಿ, ನಟರಾಜ ಪಾಟೀಲ್ ಪಾಲಕರಾದ ಸೋಮಣ್ಣ, ಮಲ್ಲಿಕಾರ್ಜುನ ಗೌಡ, ಭಾರತಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts