More

    ನೀವು ಮಾತ್ರ ಮನೆಯೊಳಗೇ ಹಬ್ಬ ಮಾಡಿ: ಆರೋಗ್ಯ ಇಲಾಖೆ ಸೂಚನೆ

    ನವದೆಹಲಿ: ಹಬ್ಬ ಎಂದರೆ ಮನೆಯೊಳಗಷ್ಟೇ ಅಲ್ಲ, ಮನೆ ಹೊರಗೂ ಸಂಭ್ರಮ. ದೇವಸ್ಥಾನ, ಊರಿನ ಪ್ರಮುಖ ಸ್ಥಳಗಳಲ್ಲಿ ಹಬ್ಬದ ಆಚರಣೆ ನಡೆಯುತ್ತದೆ. ಆದರೆ ಈ ಖುಷಿ ಈ ಸಲ ಕೆಲವರಿಗೆ ಇರುವುದಿಲ್ಲ.

    ಕರೊನಾ ಸೋಂಕು ಹರಡುವಿಕೆ ತಡೆ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಮಂಗಳವಾರ ಸ್ಟ್ಯಾಂಡರ್ಡ್​ ಆಪರೇಟಿಂಗ್ ಪ್ರೊಸೀಜರ್ಸ್​ (ಎಸ್​ಒಪಿ) ಬಿಡುಗಡೆ ಮಾಡಿದೆ. ಅದರ ಮೂಲಕ ಹಬ್ಬಗಳ ಆಚರಣೆ ಬಗ್ಗೆಯೂ ಕೆಲವು ನಿಯಮಗಳನ್ನು ಉಲ್ಲೇಖಿಸಿದೆ.

    ಇದನ್ನೂ ಓದಿ: ವಿಶ್ವಮಟ್ಟಕ್ಕಿಂತಲೂ ಮೈಸೂರಲ್ಲೇ ಅತ್ಯಧಿಕ ಕರೊನಾ ಸಾವು!

    ಕಂಟೇನ್​ಮೆಂಟ್​ ಜೋನ್​ಗಳನ್ನು ಹೊರತು ಪಡಿಸಿ ಉಳಿದ ಸ್ಥಳಗಳಲ್ಲಿ ಮಾತ್ರ ಹೊರಗೆ ಹಬ್ಬ ಆಚರಣೆ ಮಾಡಲು ಅನುಮತಿ ಇದೆ. ಕಂಟೇನ್​ಮೆಂಟ್​ ಜೋನ್​ಗಳಲ್ಲಿ ಇರುವ ಆಯೋಜಕರು, ಸಿಬ್ಬಂದಿ, ಸಂದರ್ಶಕರು ಆ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ಕಂಟೇನ್​ಮೆಂಟ್​ ಜೋನ್​ನಲ್ಲಿ ಮನೆಯೊಳಗಷ್ಟೇ ಹಬ್ಬ ಆಚರಿಸಿಕೊಳ್ಳಬಹುದು. ಹಬ್ಬಗಳ ಆಚರಣೆ ವೇಳೆ ಮಾಸ್ಕ್​ ಧರಿಸುವುದು, ಸ್ಯಾನಿಟೈಸರ್​ ಬಳಕೆ, ಸೋಷಿಯಲ್ ಡಿಸ್ಟೆನ್ಸ್ ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಇಲಾಖೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts