More

    ದೂರ ಪ್ರದೇಶದ ಪರೀಕ್ಷಾರ್ಥಿಗಳಿಗೆ ಸಹಾಯ ನೀಡಲು ಮುಂದಾದ ಸೂದ್

    ನವದೆಹಲಿ: ಲಾಕ್​ಡೌನ್ ವೇಳೆ ವಲಸಿಗರಿಗೆ ಪ್ರಯಾಣ ವ್ಯವಸ್ಥೆ ಸೇರಿ ಹಲವು ರೀತಿಯಲ್ಲಿ ಸಹಾಯ ಹಸ್ತ ಚಾಚಿ ಪ್ರಶಂಸೆಗೆ ಪಾತ್ರವಾಗಿದ್ದ ಬಾಲಿವುಡ್ ನಟ ಸೋನು ಸೂದ್ ಈಗ ಮತ್ತೊಂದು ರೀತಿಯಲ್ಲಿ ಸಹಾಯಕ್ಕೆ ಮುಂದಾಗಿದ್ದಾರೆ.
    ಸೆಪ್ಟೆಂಬರ್​​ನಲ್ಲಿ ನಡೆಯಲಿರುವ ಜೆಇಇ ಮತ್ತು ನೀಟ್ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಪ್ರಯಾಣ ವ್ಯವಸ್ಥೆ ಮಾಡುವುದಾಗಿ ಮಾತು ಕೊಟ್ಟಿದ್ದಾರೆ.

    ಇದನ್ನೂ ಓದಿ:  ಪಠ್ಯದಲ್ಲಿಲ್ಲದ ಪ್ರಶ್ನೆ ಇದ್ದರೆ ಕೃಪಾಂಕ; ವಿದ್ಯಾರ್ಥಿಗಳಿಗೆ ಡಿಸಿಎಂ ಆಭಯ

    ಸೌಲಭ್ಯಗಳ ಕೊರತೆಯಿಂದಾಗಿ ಯಾರೂ ಪರೀಕ್ಷೆಯನ್ನು ತಪ್ಪಿಸಿಕೊಳ್ಳುವಂತಾಗಬಾರದು ಎಂದು ಅವರು ಹೇಳಿದರು.
    ನೀಟ್ ಮತ್ತು ಜೆಇಇ ಪರೀಕ್ಷೆ ನಡೆದಲ್ಲಿ, ಬಿಹಾರ್, ಅಸ್ಸಾಂ ಮತ್ತು ಗುಜರಾತ್‌ನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ, ಪರೀಕ್ಷೆಗೆ ಹಾಜರಾಗಲಿಚ್ಛಿಸುವ ಎಲ್ಲ ವಿದ್ಯಾರ್ಥಿಗಳು ಪ್ರಯಾಣದ ಪ್ರದೇಶಗಳನ್ನು ನನಗೆ ತಿಳಿಸಿದರೆ ಪರೀಕ್ಷಾ ಕೇಂದ್ರಗಳನ್ನು ತಲುಪಲು ಪ್ರಯಾಣದ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಸಂಪನ್ಮೂಲಗಳ ಕೊರತೆಯಿಂದಾಗಿ ಪರೀಕ್ಷೆಯಿಂದ ಯಾರೂ ತಪ್ಪಿಸಿಕೊಳ್ಳುವಂತಾಗಬಾರದು ಎಂದು ಸೂದ್ ಟ್ವಿಟರ್ ನಲ್ಲಿ ಬರೆದಿದ್ದಾರೆ.

    ಇದನ್ನೂ ಓದಿ: ಕಾಶ್ಮೀರದಲ್ಲಿ ನಾಲ್ವರು ಉಗ್ರರ ಹತ್ಯೆ, ಒಬ್ಬನ ಶರಣಾಗತಿ

    ಜೆಇಇಗೆ ಅಂದಾಜು 8.58 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರೆ. 15.97 ಲಕ್ಷ ಜನರು ನೀಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಕರೊನಾವೈರಸ್ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಎರಡು ಬಾರಿ ಮುಂದೂಡಲಾಗಿದೆ.
    ಏತನ್ಮಧ್ಯೆ, ಶೈಕ್ಷಣಿಕ ವರ್ಷವನ್ನು ವ್ಯರ್ಥವಾಗಲು ಬಿಡುವುದಿಲ್ಲ, ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಸ್ಪಷ್ಟಪಡಿಸಿದ್ದಾರೆ.

    ಜನ್‌ ಧನ್‌ ಯೋಜನೆಗೆ ಆರು ವರ್ಷ: 43 ಕೋಟಿ ಬಡವರ ಬಾಳಿಗೆ ಬೆಳಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts