More

    ಊರಿಗೆ ಕಳಿಸಿದ್ದಷ್ಟೇ ಅಲ್ಲ, ಕೆಲಸಾನೂ ಕೊಡಿಸ್ತಿದ್ದಾರೆ ಸೋನು ಸೂದ್​

    ಲಾಕ್‌ಡೌನ್ ಸಂದರ್ಭದಲ್ಲಿ ಸೋನು ಸೂದ್ ವಲಸಿಗರಿಗೆ ಆಶ್ರಯ ಕಲ್ಪಿಸುವುದರಲ್ಲಿ, ಅವರನ್ನು ತಮ್ಮ ಊರುಗಳಿಗೆ ಕಳುಹಿಸಿದವುರಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಬರೀ ಅವರನ್ನು ಊರಿಗೆ ಕಳಿಸುವುದಷ್ಟೇ ಅಲ್ಲ, ಅವರವರ ಊರುಗಳಲ್ಲೇ ಕೆಲಸ ಕೊಡಿಸುವುದರಲ್ಲೂ ನಿರತರಾಗಿದ್ದಾರೆ.

    ಹೌದು, ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಸೋನು ಒಂದು ಹೊಸ ಆ್ಯಪ್ ಬಿಡುಗಡೆ ಮಾಡಿದ್ದಾರೆ. ಪ್ರವಾಸಿ ರೋಜ್ಗಾರ್​ ಎಂಬ ಈ ಆ್ಯಪ್ನಲ್ಲಿ ಯಾವ್ಯಾವ ಊರಿನಲ್ಲಿ ಏನೆಲ್ಲಾ ಕೆಲಸಗಳಿವೆ ಎಂಬ ಮಾಹಿತಿ ಸಹ ಇದೆ. ಅಗತ್ಯವಿರುವವರು ಆ ಆ್ಯಪ್ ಬಳಸಿಕೊಂಡು, ಸೂಕ್ತ ಕೆಲಸಗಳನ್ನು ಹುಡುಕಿಕೊಳ್ಳಬಹುದಾಗಿದೆ.

    ಇದನ್ನೂ ಓದಿ: ಟ್ರೋಲಿಗರ ವಿರುದ್ಧ ಸೈಬರ್​ ಕ್ರೈಮ್​ಗೆ ದೂರು ಕೊಡಲು ಕರಣ್​ ತಯಾರಿ

    ಊರಿಗೆ ತಲುಪಿಸಿದ್ದೇನೋ ಸರಿ, ಈ ಕೆಲಸ ಕೊಡಿಸುವ ಆ್ಯಪ್ನ ಐಡಿಯಾ ಯಾಕೆ ಮತ್ತು ಹೇಗೆ ಬಂತು ಎಂಬುದನ್ನು ಸೂದ್​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ‘ವಲಸೆ ಕಾರ್ಮಿಕರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಹಲವರು ಕೆಲಸದ ಬಗ್ಗೆಯೇ ಮಾತನಾಡುತ್ತಿದ್ದರು. ಊರಿಗೆ ಹೋಗಿ ಏನು ಮಾಡುವುದು, ಅಲ್ಲಿ ಕೆಲಸ ಸಿಗುತ್ತದೋ ಇಲ್ಲವೋ ಎಂಬ ಭಯ ವ್ಯಕ್ತಪಡಿಸುತ್ತಿದ್ದರು. ಹಾಗಾಗಿ ಬರೀ ಊರಿಗೆ ತಲುಪಿಸುವುದಷ್ಟೇ ಅಲ್ಲ, ಅವರಿಗೆ ಕೆಲಸ ಕೊಡಿಸುವ ಪ್ರಯತ್ನ ಮಾಡಬೇಕು ಎಂದು ಯೋಚಿಸಿದಾಗ ಹುಟ್ಟಿಕೊಂಡಿದ್ದೇ ಈ ಆ್ಯಪ್’ ಎಂದು ಸೋನು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ‘ರಣಧೀರ’ ನಟಿ ಖುಷ್ಬೂ ಗಂಡಸಿನಂತೆ ಕಾಣುತ್ತಿದ್ದಾರೆ!

    ‘ಸಾಕಷ್ಟು ಯೋಚಿಸಿ, ತಯಾರಿ ನಡೆಸಿ ಈ ಆ್ಯಪ್ ಡಿಸೈನ್​ ಮಾಡಲಾಗಿದೆ. ಹಲವು ಸಂಸ್ಥೆಗಳು, ಎನ್​ಜಿಓಗಳು ಮುಂತಾದವರನ್ನು ಭೇಟಿ ಮಾಡಿ, ಬಡತನ ರೇಖೆಗಿಂಥ ಕೆಳಗಿರುವವರಿಗೆ ಹೇಗೆ ಉದ್ಯೋಗಾವಕಾಶ ಕಲ್ಪಸಿಬೇಕು ಎಂದು ಚರ್ಚಿಸಿ, ಹಲವರ ಸಲಹೆ ಪಡೆದು ಈ ಆ್ಯಪ್ ಮಾಡಲಾಗಿದೆ. ಕಟ್ಟಡ ನಿರ್ಮಾಣ, ಸೆಕ್ಯುರಿಟಿ, ಬಿಪಿಓ, ಆಟೋಮೊಬೈಲ್​, ಇ-ಕಾಮರ್ಸ್​ ಮುಂತಾದ ಕ್ಷೇತ್ರಗಳ ಕೆಲಸಗಳ ಬಗ್ಗೆ ಈ ಆ್ಯಪ್ನಲ್ಲಿ ಮಾಹಿತಿ ಇದ್ದು, ಅಗತ್ಯವಿರುವವರು ಈ ಆ್ಯಪ್ ಡೌನ್​ಲೋಡ್​ ಮಾಡಿಕೊಂಡು ತಮಗೆ ಬೇಕಾದ ಕೆಲಸವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ’ ಎಂದು ಸೋನು ಹೇಳಿಕೊಂಡಿದ್ದಾರೆ.

    ಆರ್​ಜಿವಿ ‘ಪ್ರವನ್​ ಕಲ್ಯಾಣ್​’ಗೆ ಟಾಂಗ್​ ಕೊಡಲು ಬಂದ ‘ಪರಂಜೀವಿ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts