More

    ‘ಪ್ರತಿಯೊಂದು ರೂಪಾಯಿ ಸರತಿಯಲ್ಲಿ ಕಾಯುತ್ತಿದೆ!’ ಮೌನ ಮುರಿದ ನಟ ಸೋನು ಸೂದ್​, ಐಟಿ ಸಮೀಕ್ಷೆ ಬಗ್ಗೆ ಹೇಳಿದ್ದೇನು?

    ಮುಂಬೈ: ಆದಾಯ ತೆರಿಗೆ(ಐಟಿ) ಇಲಾಖೆಯ ಪರಿಶೀಲನೆಗೆ ಒಳಗಾಗಿ 20 ಕೋಟಿ ರೂ.ಗಳಿಗೂ ಹೆಚ್ಚು ತೆರಿಗೆ ವಂಚನೆಯ ಆರೋಪ ಎದುರಿಸುತ್ತಿರುವ ನಟ ಸೋನು ಸೂದ್​ ಮೌನ ಮುರಿದಿದ್ದಾರೆ. ಐಟಿ ಅಧಿಕಾರಿಗಳ ಸಮೀಕ್ಷೆ ಮತ್ತು ಹೇಳಿಕೆ ಬಗ್ಗೆ ಇದೀಗ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    ‘ಕಠಿಣ ಮಾರ್ಗದಲ್ಲೂ ಪ್ರಯಾಣ ಸುಲಭವೆನಿಸುತ್ತಿದೆ, ಇದು ಪ್ರತಿ ಹಿಂದೂಸ್ತಾನಿಯ ಶುಭ ಹಾರೈಕೆಗಳ ಪ್ರಭಾವ ಎನಿಸುತ್ತದೆ’ ಎಂದು ಹಿಂದಿಯಲ್ಲಿ ಕಾವ್ಯಮಯವಾಗಿ  ಟ್ವೀಟ್​ ಮಾಡಿರುವ ಸೂದ್​, ಸುದೀರ್ಘ ಸಂದೇಶವೊಂದರಲ್ಲಿ “ನೀವು ಪ್ರತಿ ಬಾರಿ ನಿಮ್ಮ ಕಡೆಯ ಕಥೆ ಹೇಳಬೇಕಿಲ್ಲ, ಸಮಯ ಹೇಳುತ್ತದೆ” ಎಂದು ತಾವು ಸದ್ಯಕ್ಕೆ ಐಟಿ ಆರೋಪಗಳ ಬಗ್ಗೆ ಯಾವುದೇ ಸ್ಪಷ್ಟನೆ ನೀಡುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

    ಇದನ್ನೂ ಓದಿ: ನಟ ಸೋನು ಸೂದ್ ಮನೆಗೆ ಐಟಿ ಅಧಿಕಾರಿಗಳು!

    ಭಾರತದ ಜನರ ಸೇವೆಗಾಗಿ ತಮ್ಮನ್ನು ತಾವೇ ಮುಡಿಪಾಗಿಡಬೇಕೆಂದು ಪಣ ತೊಟ್ಟಿರುವುದಾಗಿ ಹೇಳಿರುವ ಸೂದ್​, ಕೋವಿಡ್​ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಆಶ್ರಯ ನೀಡುವುದೂ ಸೇರಿದಂತೆ ಹತ್ತುಹಲವು ಜನಸೇವೆಯ ಕಾರ್ಯಗಳಿಂದ ಜನಪ್ರಿಯತೆ ಗಳಿಸಿದ್ದಾರೆ. ಇದೀಗ ಅವರ ಮೇಲೆ ಐಟಿ ಇಲಾಖೆ ಕಣ್ಣು ಬಿದ್ದಿದ್ದು, ಐಟಿ ಅಧಿಕಾರಿಗಳು ಸತತ ಮೂರು ದಿನಗಳ ಕಾಲ ಸೂದ್​ರ ನಿವಾಸ ಮತ್ತು ಇತರ ಸ್ಥಳಗಳ ಸಮೀಕ್ಷೆ ನಡೆಸಿದ್ದರು. 20 ಕೋಟಿ ರೂ.ಗಳ ತೆರಿಗೆ ವಂಚನೆ ಆರೋಪದೊಂದಿಗೆ, ಸೂದ್​ರ ಚಾರಿಟಿ ಫೌಂಡೇಶನ್​ನ ಬ್ಯಾಂಕ್​ ಖಾತೆಯಲ್ಲಿ ಸುಮಾರು 17 ಕೋಟಿ ರೂ. ಹಣ ಸುಮ್ಮನೆ ಕುಳಿತಿದೆ ಎಂದಿದ್ದರು.

    ಇದಕ್ಕೆ ಉತ್ತರವೆಂಬಂತೆ, “ನನ್ನ ಫೌಂಡೇಶನ್​ನಲ್ಲಿರುವ ಪ್ರತಿಯೊಂದು ರೂಪಾಯಿ ಕೂಡ ಒಂದು ಅಮೂಲ್ಯ ಜೀವವನ್ನು ಉಳಿಸಲು ಮತ್ತು ಅಗತ್ಯ ಇರುವವರನ್ನು ತಲುಪಲು ಅದರ ಸರತಿಗಾಗಿ ಕಾಯುತ್ತಿದೆ” ಎಂದು ಸೂದ್​ ಬರೆದಿದ್ದಾರೆ. ಜೊತೆಗೆ, ಐಟಿ ಅಧಿಕಾರಿಗಳ ಪರಿಶೀಲನೆ ಕುರಿತು, “ನಾನು ಕೆಲವು ಅತಿಥಿಗಳನ್ನು ನೋಡಿಕೊಳ್ಳುವುದರಲ್ಲಿ ಬ್ಯುಸಿ ಆಗಿದ್ದೆ. ಆದ್ದರಿಂದ ಕಳೆದ ನಾಲ್ಕು ದಿನ ನಿಮ್ಮ ಸೇವೆಯಲ್ಲಿ ತೊಡಗಲು ಸಾಧ್ಯವಾಗಲಿಲ್ಲ. ಈಗ ಮತ್ತೆ ನಿಮ್ಮ ಸೇವೆಗೆ ಹಾಜರಾಗಿದ್ದೇನೆ. ನನ್ನ ಪ್ರಯಾಣ ಮುಂದುವರಿಯುತ್ತದೆ” ಎಂದಿದ್ದಾರೆ.

    ಇದನ್ನೂ ಓದಿ: ನಟ ಸೋನು ಸೂದ್​​ಗೆ ಐಟಿ ಕಂಟಕ: 20 ಕೋಟಿ ರೂ. ತೆರಿಗೆ ವಂಚನೆ ಆರೋಪ

    ಐಟಿ ಇಲಾಖೆ ಹೇಳಿಕೆ: ಲೆಕ್ಕ ಹೊಂದಿಲ್ಲದ ಆದಾಯಗಳನ್ನು ಸೂದ್​​ ಬೋಗಸ್​​ ಅನ್​ಸೆಕ್ಯೂರ್ಡ್​ ಲೋನ್​ಗಳ ಹೆಸರಲ್ಲಿ ತೋರಿಸಿ 20 ಕೋಟಿ ರೂ.ಗಿಂತ ಹೆಚ್ಚು ತೆರಿಗೆ ವಂಚಿಸಿದ್ದಾರೆ; ಅವರ ನಾನ್​ಪ್ರಾಫಿಟ್​ ಸಂಸ್ಥೆ, ಸೂದ್​ ಚ್ಯಾರಿಟಿ ಫೌಂಡೇಶನ್​​, ಕಾನೂನುಬಾಹಿರವಾಗಿ ವಿದೇಶೀಯರಿಂದ 2.1 ಕೋಟಿ ರೂ. ಹಣ ಸಂಗ್ರಹಿಸಿದೆ; ಸೂದ್​ ಫೌಂಡೇಶನ್​ ಈವರೆಗೆ 18 ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಂಗ್ರಹಿಸಿದ್ದರೂ, ಕೇವಲ 1.9 ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಿದೆ ಎಂದು ಐಟಿ ಅಧಿಕಾರಿಗಳು ಶನಿವಾರ ಹೇಳಿಕೆ ನೀಡಿದ್ದರು. (ಏಜೆನ್ಸೀಸ್)

    “ಪ್ರತಿ ಮನೆಗೂ ಉದ್ಯೋಗ ಇಲ್ಲವೇ ತಿಂಗಳಿಗೆ 5,000 ರೂಪಾಯಿ”

    ನೀರು ತುಂಬಿದ್ದ ಅಂಡರ್​ಪಾಸಲ್ಲಿ ಸಿಲುಕಿದ ಕಾರು: ರಜೆಗೆ ಊರಿಗೆ ಹೋಗಿದ್ದ ವೈದ್ಯೆ ದುರ್ಮರಣ

    ಕಾಲೇಜುಗಳಿಗೆ ಹಿಂಬಾಗಿಲ ಪ್ರವೇಶಾತಿ ನಿಲ್ಲಬೇಕು: ದೆಹಲಿ ಹೈಕೋರ್ಟ್​

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts