More

    ಪಂಜಾಬ್​ ಲಿಕ್ಕರ್​ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸೋನು ಸೂದ್ ಅಭಯ

    ಬಾಲಿವುಡ್​ ನಟ ಸೋನು ಸೂದ್​ ಕರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಸಾಕಷ್ಟು ಜನರಿಗೆ ಉದ್ಯೋಗ ಭರವಸೆ, ನಿರಾಶ್ರಿತರಿಗೆ ಕಾಲಕಲ್ಪ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ, ಕೃಷಿ ಕುಟುಂಬಕ್ಕೆ ಟ್ರ್ಯಾಕ್ಟರ್ ಕೊಡುಗೆ ಸೇರಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಇದೀಗ ಇದೇ ಸೋನು ಸೂದ್​ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಪಂಜಾಬ್ ಲಿಕ್ಕರ್​ ದುರಂತದಲ್ಲಿ 120ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡ ಬೆನ್ನಲ್ಲೇ ಸಾವನ್ನಪ್ಪಿದ ಕುಟುಂಬಕ್ಕೆ ಸೋನು ಆಧಾರವಾಗಿದ್ದಾರೆ.

    ಇದನ್ನೂ ಓದಿ: ಮತ್ತೆ ಡೈರೆಕ್ಷನ್​ ಮಾಡೋಕೆ ರೆಡಿಯಾದ ಕಂಗನಾ …

    ಪಂಜಾಬ್​ನಲ್ಲಿ ಆ ಮಕ್ಕಳ ಸ್ಥಿತಿ ಕಂಡು ನೆಟ್ಟಿಗರೊಬ್ಬರು ಸೋನು ಸೂದ್​ಗೆ ಟ್ವಿಟ್​ ಮಾಡಿದ್ದರು. ಅದರ ಅನ್ವಯ ಪ್ರತಿಕ್ರಿಯಿಸಿದ ಸೋನು, ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಸುಸಜ್ಜಿತ ಮನೆ ಮತ್ತು ವಿದ್ಯಾಭ್ಯಾಸದ ಜತೆಗೆ ಅವರ ಉಜ್ವಲ ಭವಿಷ್ಯದ ಹೊಣೆ ನನ್ನದು. ನಾಳೆಯೇ ಈ ಬಗ್ಗೆ ಸಂಪರ್ಕಿಸುತ್ತೇನೆ’ ಎಂದು ಟ್ವಿಟ್​ ಮಾಡಿದ್ದಾರೆ.

    ಈಗಷ್ಟೇ ಮಾಸ್ಕೋದಲ್ಲಿ ಸಿಲುಕಿದ್ದ 100 ಕ್ಕೂ ಅಧಿಕ ತಮಿಳುನಾಡಿನ ಮೆಡಿಕಲ್​ ಕಾಲೇಜು ವಿದ್ಯಾರ್ಥಿಗಳನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆಸಿಕೊಂಡಿದ್ದರು ಸೋನು. ಇದೀಗ ಚೆನ್ನೈನ ಹಲವು ಹೋಟೆಲ್​ಗಳಲ್ಲಿ ಆ ವಿದ್ಯಾರ್ಥಿಗಳೆಲ್ಲ ಕ್ವಾರಂಟೈನ್​ನಲ್ಲಿದ್ದಾರೆ.

    ಇದನ್ನೂ ಓದಿ: ಕಪಿಲ್​ ಶರ್ಮಾ V/s ಸುನೀಲ್​ ಗ್ರೋವರ್​; ಹೊಸ ಕಾಮಿಡಿ ಶೋ ಮೂಲಕ ಗುತ್ತಿ ಆಗಮನ!

    ವಿಡಿಯೋ ಗೇಮ್​ ಸಲುವಾಗಿ ಟ್ವಿಟರ್ನಲ್ಲಿ ಸೋನುಗೆ ಬಾಲಕನೊಬ್ಬ ಬೇಡಿಕೆ ಇಟ್ಟಿದ್ದ. ಅದಕ್ಕೆ ಪ್ರತಿಕ್ರಿಯಸಿದ ಸೋನು, ನಿನ್ನ ಬಳಿ ಈ ಸಮಯದಲ್ಲಿ ಪಿಎಸ್​4 ಇಲ್ಲದಿರುವುದೇ ಉತ್ತಮ. ಸಾಧ್ಯವಾದಷ್ಟು ಪುಸ್ತಕಗಳನ್ನು ಓದು. ಬೇಕಾದರೆ, ನಿನಗೆ ಪುಸ್ತಕಗಳನ್ನು ನಾನು ತಲುಪಿಸಬಲ್ಲೆ’ ಎಂದಿದ್ದರು. (ಏಜೆನ್ಸೀಸ್​)

    ಮುಂದೆ ಕಷ್ಟ ಆದರೂ ಪರವಾಗಿಲ್ಲ, ನಾನ್​ ರೆಡಿ … ಜಾಹ್ನವಿ ತೀರ್ಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts