More

    ಕ್ಯಾನ್ಸರ್​ ಗೆದ್ದ ಬಾಲಿವುಡ್​ ತಾರೆ ಸೊನಾಲಿ ಬೇಂದ್ರೆ ಕೊಟ್ಟಿದ್ದಾರೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸ್ಮೂದಿಯ ರೆಸಿಪಿ

    ಮುಂಬೈ: ಬಾಲಿವುಡ್​ನಲ್ಲಿ ಹಲವು ವರ್ಷ ತಾರಾ ನಟಿಯಾಗಿ ಮಿಂಚಿ, ಕ್ಯಾನ್ಸರ್​ಗೆ ತುತ್ತಾದರೂ ಅದನ್ನು ಗೆದ್ದ ಸೊನಾಲಿ ಬೇಂದ್ರೆ ಕೋವಿಡ್​ 19 ಲಾಕ್​ಡೌನ್​ ವೇಳೆ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಕ್ಯಾನ್ಸರ್​ ಗೆಲ್ಲುವ ಜತೆಗೆ ಮೊದಲಿನಿಂದಲೂ ತಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸ್ಮೂದಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಅದರ ರೆಸಿಪಿಯನ್ನೂ ಕೊಟ್ಟಿದ್ದಾರೆ. ಏನದು ಸ್ಮೂದಿ? ಏನದು ರೆಸಿಪಿ?

    ಸ್ಮೂದಿ ಎಂದರೆ ಮಂದವಾದ ಜ್ಯೂಸ್​ ಎಂದು ಅರ್ಥ. ಮನೆಯಲ್ಲೇ ತಯಾರಿಸಬಹುದಾದ, ಹಣ್ಣು, ಅರಿಷಿನ ಕೊಂಬು, ಶುಂಠಿ ಮತ್ತಿತರ ವಸ್ತುಗಳನ್ನು ಹಾಕಿದ ಸ್ಮೂದಿ ಇದಾಗಿದೆ.

    ಇದನ್ನು ತಯಾರಿಸಲು ಒಂದು ಸೇಬು, ಒಂದು ಕ್ಯಾರಟ್​, ಒಂದು ಬೆಟ್ಟದ ನೆಲ್ಲಿಕಾಯಿ, 2 ಇಂಚು ಹಸಿ ಅರಿಷಿನ ಕೊಂಬು, 2 ಇಂಚು ಹಸಿ ಶುಂಠಿ, 2 ಏಪ್ರಿಕಾಟ್​, ಒಂದಷ್ಟು ಬಲ್ಯೂಬೆರಿ ಮತ್ತು ಕ್ರಾನ್​ ಬೆರಿ, 7 ಬಾದಾಮಿ, ಒಂದಷ್ಟು ದಾಲ್ಚಿನ್ನಿ ಪುಡಿ, 2ರಿಂದ 4 ವಾಲ್​ನಟ್​, 2 ಬೀಜ ತೆಗೆದ ಖರ್ಜೂರ ಮತ್ತು ಒಂದು ಮುಷ್ಟಿಯಷ್ಟು ಪಾಲಕ್​ ಸೊಪ್ಪು ಬೇಕಾಗುತ್ತದೆ.

    ಇವೆಲ್ಲವನ್ನೂ ಮಿಕ್ಸಿ ಜಾರ್​ಗೆ ಹಾಕಿ ರುಬ್ಬಿಕೊಂಡಾಗ ಸ್ಮೂದಿ ಸಿದ್ಧವಾಗುತ್ತದೆ. ಒಂದು ಗ್ಲಾಸ್​ನಷ್ಟು ಸ್ಮೂದಿಯನ್ನು ಕುಡಿದರೆ ರೋಗನಿರೋಧ ಶಕ್ತಿ ಹೆಚ್ಚಾಗುತ್ತದೆ ಅಂತೆ.

    ನಾನು ಮೊದಲಿನಿಂದಲೂ ಈ ಸ್ಮೂದಿಯನ್ನು ಕುಡಿಯುತ್ತಿದ್ದೆ. ನಾನು ಕ್ಯಾನ್ಸರ್​ಗೆ ತುತ್ತಾಗಿ, ಕೀಮೋಥೆರಪಿ ಮಾಡಿಸಿಕೊಳ್ಳುವಾಗ ಈ ಸ್ಮೂದಿಯ ಸೇವನೆಯಿಂದ ತುಂಬಾ ಅನುಕೂಲವಾಯಿತು ಎಂದು ಸೊನಾಲಿ ಬೇಂದ್ರೆ ಹೇಳಿಕೊಂಡಿದ್ದಾರೆ.

    ಕನ್ನಡ ಕುವರ ಅನಿಲ್​ ಕುಂಬ್ಳೆ ಸಹಾಯ ಸ್ಮರಿಸಿದ ಪಾಕ್​ನ ಮಾಜಿ ಸ್ಪಿನ್ನರ್​ ಸಕ್ಲೇನ್​ ಮುಸ್ತಾಕ್​, ಕುಂಬ್ಳೆ ಮಾಡಿದ ಸಹಾಯವಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts