More

    ಅತ್ತೆ ಮಾವನ ಜವಾಬ್ದಾರಿ ಅಳಿಯನಿಗೂ ಸೇರಿದ್ದು; ಅಳಿಯನಿಂದಲೂ ಜೀವನಾಂಶ ಪಡೆಯಬಹುದು

    ನವದೆಹಲಿ: ಹೆಂಡತಿಯ ಅಪ್ಪ ಅಮ್ಮನಿಗೆ ಇರೋದು ಇಬ್ಬರೇ ಹೆಣ್ಣು ಮಕ್ಕಳು, ಆಸ್ತಿಯೆಲ್ಲ ನಮಗೇ ಸಿಗುತ್ತೆ. ಅವರನ್ನ ನೋಡಿಕೊಳ್ಳಬೇಕೆನ್ನುವ ಗೋಳೂ ಇಲ್ಲ ಎಂದು ನೀವು ಯೋಚಿಸುತ್ತಿದ್ದರೆ ಆ ಯೋಚನೆಯನ್ನು ಈಗಲೇ ಬಿಟ್ಟು ಬಿಡಿ. ಏಕೆಂದರೆ ಇನ್ನು ಮುಂದೆ ಅತ್ತೆ ಮಾವನನ್ನು ನೋಡಿಕೊಳ್ಳುವ ಜವಾಬ್ದಾರಿ ಅಳಿಯಂದರಿಗೂ ಸೇರಿದ್ದು ಎನ್ನುವ ಕಾನೂನು ಜಾರಿಯಾಗಲಿದೆ.

    ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ 2019ಕ್ಕೆ ತಿದ್ದುಪಡಿ ತರಲಾಗುತ್ತಿದೆ. ಈ ತಿದ್ದುಪಡಿಗೆ ಸಂಸತ್ತಿನ ಸ್ಥಾಯಿ ಸಮಿತಿಯು ಅಂಗೀಕಾರ ನೀಡಿದೆ. ಅದರ ಪ್ರಕಾರ ಕೇವಲ ಮಕ್ಕಳು ಮಾತ್ರವಲ್ಲ, ಅಳಿಯ, ಸೊಸೆ, ಮೊಮ್ಮಕ್ಕಳು, ದತ್ತುಪುತ್ರರಿಗೂ ವೃದ್ಧರ ಜವಾಬ್ದಾರಿ ಇರಲಿದೆ. ಪ್ರತಿಯೊಬ್ಬರೂ ವೃದ್ಧರನ್ನು ಜವಾಬ್ದಾರಿಯುತವಾಗಿ ನೋಡಿಕೊಳ್ಳಬೇಕು. ಅಷ್ಟೇ ಅಲ್ಲ, ಹೆಂಡತಿಯ ಅಪ್ಪ ಅಮ್ಮನಿಗೆ ಜೀವನ ಭತ್ಯೆಯನ್ನೂ ಕೊಡಬೇಕಾಗಲಿದೆ.

    ಜೀವನಭತ್ಯೆಯನ್ನು ವೃದ್ಧರ ಜೀವನ ಶೈಲಿಯನ್ನು ನೋಡಿ ನಿರ್ಧರಿಸಲಾಗುವುದು ಎಂದು ತಿದ್ದುಪಡಿಯಲ್ಲಿ ನಮೂದಿಸಲಾಗಿದೆ. ದೇಶದಲ್ಲಿ ಪ್ರಸ್ತುತ12 ಕೋಟಿಯಷ್ಟು ಹಿರಿಯ ನಾಗರಿಕರಿದ್ದಾರೆ. ಈ ಸಂಖ್ಯೆ ಇನ್ನು ಐದು ವರ್ಷಗಳಲ್ಲಿ 17 ಕೋಟಿಗೆ ಏರಿಕೆಯಾಗಲಿದೆ. ಹಿರಿಯ ನಾಗರಿಕರ ಕ್ಷೇಮಕ್ಕೆಂದು ಈ ರೀತಿಯ ತಿದ್ದುಪಡಿ ಅವಶ್ಯಕ ಎನ್ನಲಾಗಿದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಕರೊನಾ ನಿಯಮ ಮರೆತು ಮಾಸ್ಕ್ ಇಲ್ಲದೆ ರಾಂಪ್ ವಾಕ್ ಮಾಡಿದ ಮಹಾರಾಷ್ಟ್ರದ ಮೇಯರ್!

    ಸರ್ದಾರ್​ ಪಟೇಲ್​ ಕ್ರಿಕೆಟ್​ ಸ್ಟೇಡಿಯಂ ಈಗ ನರೇಂದ್ರ ಮೋದಿ ಸ್ಟೇಡಿಯಂ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts