More

    ಅಪ್ಪನ ಕಾರ್ಯ ಮಗ ಮಾಡಲ್ಲ ಎಂದ, ಅದನ್ನು ಮುಸ್ಲಿಮರು ನೆರವೇರಿಸಿದರು!

    ಮುಂಬೈ: ಮೃತಪಟ್ಟಿದ್ದ ತನ್ನ ತಂದೆಯ ಅಂತ್ಯಸಂಸ್ಕಾರವನ್ನು ನೆರವೇರಿಸಲು ಪುತ್ರ ನಿರಾಕರಿಸಿದ. ಆದರೆ, ಸ್ಥಳೀಯ ಮುಸ್ಲಿಂ ಸಮುದಾಯದ ಸಂಘಟನೆಯೊಂದು ಹಿಂದು ಪದ್ಧತಿಯಂತೆ ಶವಕ್ಕೆ ಕೊಳ್ಳಿಯಿಟ್ಟು ಅಂತ್ಯಕ್ರಿಯೆ ನೆರವೇರಿಸಿ ಮತೀಯ ಸೌಹಾರ್ದತೆ ಮೆರೆದಿದೆ. ಮುಸ್ಲಿಮರ ಪವಿತ್ರ ಹಬ್ಬ ರಂಜಾನ್​ನಂದೇ ಈ ಕಾರ್ಯ ಮಾಡಿರುವುದು ಮತ್ತೂ ವಿಶೇಷವಾಗಿದೆ.

    ಮಹಾರಾಷ್ಟ್ರದ ಅಕೋಲಾದ ನಿವಾಸಿಯಾಗಿದ್ದ 78 ವರ್ಷದ ಹಿರಿಯ ನಾಗರಿಕರ ಪತ್ನಿ ಅವರಲ್ಲಿ ಕರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನು ಅಕೋಲಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಟಲ ದ್ರವ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ಖಚಿತಪಟ್ಟಿತ್ತು. ಇದೇ ವೇಳೆ ಅವರ ಪತಿ ಮನೆಯಲ್ಲಿ ಕುಸಿದು ಬಿದ್ದಿದ್ದರು.

    ಇದನ್ನೂ ಓದಿ: ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶುಶ್ರೂಷಕನಿಗೆ ಕರೊನಾ

    ತಕ್ಷಣವೇ ಆಂಬುಲೆನ್ಸ್​ ಅನ್ನು ಅವರ ಮನೆಗೆ ಕಳುಹಿಸಿ, ಹಿರಿಯ ನಾಗರಿಕರನ್ನು ಪರೀಕ್ಷಿಸಿದಾಗ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಹೃದಯಾಘಾತದಿಂದ ಅವರು ಮೃತಪಟ್ಟಿದ್ದರು. ಈ ವಿಷಯವನ್ನು ನಾಗ್ಪುರದಲ್ಲಿ ವಾಸವಾಗಿರುವ ಮೃತರ ಪುತ್ರನಿಗೆ ತಿಳಿಸಲಾಯಿತು. ಆದರೆ, ಆತ ತನ್ನ ಅಪ್ಪನ ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದ. ಈ ಹಿನ್ನೆಲೆಯಲ್ಲಿ ಅಕೋಲಾದ ಅಕೋಲಾ ಕಚ್ಚಿ ಮೆಮೂನ್​ ಜಮಾತ್​ ಎಂಬ ಸಂಘಟನೆಯ ಸದಸ್ಯರು ಮೃತರ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಿದರು ಎಂದು ಅಕೋಲಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸ್ವಚ್ಛತಾ ವಿಭಾಗದ ಮುಖ್ಯಸ್ಥ ಪ್ರಶಾಂತ್​ ರಾಜೂರ್​ಕರ್​ ತಿಳಿಸಿದ್ದಾರೆ.

    ಮೃತಪಟ್ಟವರು ಹಿಂದು ಧರ್ಮೀಯರು ಎಂಬುದು ಗೊತ್ತಾಗಿತ್ತು. ಹಾಗಾಗಿ ಅವರ ಪದ್ಧತಿಯಲ್ಲೇ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಲಾಯಿತು. ಸಾಮಾನ್ಯವಾಗಿ ನಮ್ಮ ಸಂಘಟನೆಯ ಸದಸ್ಯರು ಚಿತೆಯನ್ನು ನಿರ್ಮಿಸಿ, ಅದರ ಮೇಲೆ ಶವ ಇರಿಸುವವರೆಗೆ ಕೆಲಸ ಮಾಡುತ್ತಾರೆ. ಆದರೆ, ಈ ಪ್ರಕರಣದಲ್ಲಿ ಹಿಂದು ಪದ್ಧತಿಯಂತೆ ಚಿತೆಗೆ ಬೆಂಕಿಯನ್ನೂ ಕೊಟ್ಟೆವು ಎಂದು ಅಕೋಲಾ ಕಚ್ಚಿ ಮೆಮೂನ್​ ಜಮಾತ್​ನ ಅಧ್ಯಕ್ಷ ಜಾವೇದ್​ ಝಕಾರಿಯಾ ತಿಳಿಸಿದ್ದಾರೆ.

    ಜಗತ್ತು ಕರೊನಾ ವಿರುದ್ಧ ಹೋರಾಡುತ್ತಿದ್ದರೆ, ಈ ವಿಜ್ಞಾನಿಗಳ ಹೋರಾಟವೇ ಬೇರೆಯದ್ದು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts