More

    ಸೋಮೇಶ್ವರ ಶುಗರ್ಸ್‌ ಅಭಿವೃದ್ಧಿಯೇ ಗುರಿ

    ಬೈಲಹೊಂಗಲ: ಸೋಮೇಶ್ವರ ಸಕ್ಕರೆ ಕಾರ್ಖಾನೆಯನ್ನು ಅಭಿವೃದ್ಧಿಪಡಿಸುವುದರ ಜತೆಗೆ ರೈತರ ಕಾರ್ಮಿಕರ ಏಳ್ಗೆಯ ಗುರಿ ನನ್ನದಾಗಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದು ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ, ವಕೀಲ ಮಹಾಂತೇಶ ಮತ್ತಿಕೊಪ್ಪ ಹೇಳಿದರು.

    ಪಟ್ಟಣದ ನ್ಯಾಯವಾದಿಗಳ ಸಂಘದ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪಕ್ಷಾತೀತವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕರಾದ ವಿನಯ ಕುಲಕರ್ಣಿ, ಬಾಬಾಸಾಹೇಬ ಪಾಟೀಲ, ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಸೇರಿ ಇನ್ನೂ ಹಲವಾರು ಗಣ್ಯರು, ಸ್ನೇಹಿತರು ನಾನು ಸಹಕಾರಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಸಮಾಜದ ಹಿತಕ್ಕಾಗಿ ಜೀವನ ಮುಡಿಪಾಗಿಡುತ್ತೇನೆ ಎಂದರು.

    ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ನಾಡಿನ ರೈತರ ಜೀವನಾಡಿ ಸೋಮೇಶ್ವರ ಶುಗರ್ಸ್‌, ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ ಅವರ ಅಧಿಕಾರ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
    ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಬಿ.ಆನಿಗೋಳ, ಉಪಾಧ್ಯಕ್ಷ ಮಂಜುನಾಥ ಸೋಮಣ್ಣವರ, ಹಿರಿಯ ವಕೀಲರಾದ ಜೆ.ಕೆ.ರೀಜಾ, ಬಿ.ಎಸ್.ಕಿವಡಸಣ್ಣವರ, ಬಿ.ಆರ್.ಅಲಸಂದಿ, ಬಿ.ಬಿ.ಹುಲಮನಿ, ಎಸ್.ಜಿ.ಬೂದಯ್ಯನವರಮಠ, ಎಂ.ಐ.ಪೋತದಾರ, ಅಶೋಕ ಮೂಗಿ, ಎಂ.ಸಿ. ಪಾಟೀಲ, ಆರ್.ಎಸ್.ಮಮದಾಪುರ, ಶ್ರೀಶೈಲ ಅಬ್ಬಾಯಿ, ಅರುಣ ಯಲಿಗಾರ, ರಮೇಶ ಪತ್ತಾರ, ಡಿ.ಎಸ್.ಹೊಗರ್ತಿ, ಎಸ್.ಎಸ್.ಮಠದ, ಎಂ.ವೈ.ಸೋಮಣ್ಣವರ, ಎ.ಐ.ಅಥಣಿ, ಎಂ.ಎಂ.ಯಲಿಗಾರ, ಜೆ.ಜೆ.ಬೂದಿಹಾಳ, ಸಂತೋಷ ಲದ್ದಿಗಟ್ಟಿ, ಎಂ.ಆರ್.ಅಲ್ಲಯ್ಯನವರ, ಬಸವರಾಜ ದೋತ್ರದ, ವಿಶ್ವನಾಥ ಪೂಜೇರಿ, ಐ.ಬಿ.ಒಂಟಿ, ಎಸ್.ಜಿ.ಚಿಕ್ಕಮಠ, ಗಿರೀಜಾ ಆಲದಕಟ್ಟಿ, ಮಡಿವಾಳಪ್ಪ ಮೆಳವಂಕಿ, ಶ್ರೀಧರ ಲೋಕೂರ, ದುಂಡೇಶ ಗರಗರ ಸಂತೋಷ ಭಾಂವಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts