ಬೆಂಗಳೂರು: ಕರ್ನಾಟಕ ಮಹಿಳಾ ಹಾಕಿ ತಂಡದ ನಾಯಕಿ ಕೃತಿಕಾ ಎಸ್ಪಿ, ಹಾಕಿ ಇಂಡಿಯಾದ 7 ದಿನಗಳ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಗೋಲು ಕೀಪರ್ ಸವಿತಾ ಪೂನಿಯಾ, ವಂದನಾ ಕಟೇರಿಯಾ ಅವರಂಥ ಹಿರಿಯರ ಸಹಿತ ದೇಶದೆಲ್ಲೆಡೆಯ ಒಟ್ಟು 60 ಆಟಗಾರ್ತಿಯರು ಪಾಲ್ಗೊಂಡಿರುವ ಈ ಮೌಲ್ಯಮಾಪನ ಶಿಬಿರದಲ್ಲಿ ಮಿಡ್ಫೀಲ್ಡರ್ ಕೃತಿಕಾ, ಏಕೈಕ ಕನ್ನಡತಿಯಾಗಿದ್ದಾರೆ.
ಸೋಮವಾರ ಆರಂಭಗೊಂಡಿರುವ ಶಿಬಿರದ ಅಂತ್ಯದಲ್ಲಿ ರಾಷ್ಟ್ರೀಯ ತಂಡಕ್ಕೆ 33 ಸಂಭಾವ್ಯ ಆಟಗಾರ್ತಿಯರನ್ನು ಆಯ್ಕೆ ಮಾಡಲಾಗುವುದು. ಪ್ಯಾರಿಸ್ ಒಲಿಂಪಿಕ್ಸ್ಗೆ ಮಹಿಳಾ ಅರ್ಹತೆ ಸಂಪಾದಿಸಲು ವಿಲವಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡಕ್ಕೆ ಪುನಶ್ಚೇತನ ನೀಡುವುದು ಈ ಶಿಬಿರದ ಪ್ರಮುಖ ಉದ್ದೇಶವಾಗಿದೆ.
ಕಠಿಣ ದಿನದಂದು ಧೋನಿ ಆಟವೊಂದೇ ಪಾಸಿಟಿವ್ ಎಂದ ಸಿಎಸ್ಕೆ ಕೋಚ್ ಫ್ಲೆಮಿಂಗ್!