More

    ವಾಟ್ಸ್ಆ್ಯಪ್​ ಗ್ರೂಪ್​ ಸಾಮರ್ಥ್ಯ ಮತ್ತೆ ಡಬಲ್​; ಜತೆಗೆ ಇನ್ನಷ್ಟು ಹೊಸ ಫೀಚರ್ಸ್: ಇಲ್ಲಿದೆ ವಿವರ..

    ಬೆಂಗಳೂರು: ಮೆಸೇಜಿಂಗ್ ಆ್ಯಪ್​ನಲ್ಲಿ ಮುಂಚೂಣಿಯಲ್ಲಿರುವ ವಾಟ್ಸ್​ಆ್ಯಪ್​ ತನ್ನ ಸಮೀಪದ ಪ್ರತಿಸ್ಪರ್ಧಿ ಟೆಲಿಗ್ರಾಂ ಆ್ಯಪ್​ಗೆ ಸ್ಪರ್ಧೆಯೊಡ್ಡುವ ರೀತಿಯಲ್ಲಿ ಮತ್ತಷ್ಟು ಹೊಸ ಫೀಚರ್ಸ್​ ನೀಡಲು ಮುಂದಾಗಿದೆ. ಈ ಅಪ್​ಡೇಟ್ಸ್​ ಸದ್ಯದಲ್ಲೇ ಲಭ್ಯವಾಗಲಿವೆ.

    ಈ ಹಿಂದೆ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಕೇವಲ 256 ಸದಸ್ಯರನ್ನಷ್ಟೇ ಸೇರಿಸಿಕೊಳ್ಳಲು ಅವಕಾಶ ಇದ್ದಿದ್ದು, ಅದನ್ನು ಕೆಲವು ತಿಂಗಳ ಹಿಂದೆ ವಾಟ್ಸ್​ಆ್ಯಪ್​ 512ಕ್ಕೆ ಏರಿಸಿತ್ತು. ಇದೀಗ ಅದನ್ನು ಪುನಃ ದುಪ್ಪಟ್ಟು ಮಾಡಲಿದ್ದು, ಸದ್ಯದಲ್ಲೇ ಗ್ರೂಪ್​ ಸಾಮರ್ಥ್ಯ 1024 ಆಗಲಿದೆ.

    ಇನ್ನು ಪ್ರೈವೆಸಿಗೆ ಹೆಚ್ಚಿನ ಒತ್ತು ಕೊಡಲಿರುವ ವಾಟ್ಸ್​ಆ್ಯಪ್​ ವ್ಯೂವ್ ಒನ್ಸ್​ ಫೋಟೋ/ವಿಡಿಯೋಗಳ ಸ್ಕ್ರೀನ್​ಶಾಟ್​ ತೆಗೆಯಲು ಸಾಧ್ಯವಾಗದಂಥ ಫೀಚರ್ ಕೂಡ ನೀಡಲಿದೆ. ಅಲ್ಲದೆ ಸ್ಟೇಟಸ್​​ನಲ್ಲಿ ಲಿಂಕ್​ ಹಂಚಿಕೊಳ್ಳುವಂಥ ಅಪ್​ಡೇಟ್ ಕೂಡ ನೀಡಲಿದೆ ಎಂದು ವಾಟ್ಸ್​ಆ್ಯಪ್​ ಬೀಟಾ ಇನ್​ಫೊ ತಿಳಿಸಿದೆ. 

    ಮುಂಬೈನಲ್ಲಿ ಈ 2 ಪ್ರಥಮಗಳನ್ನು ಸಾಧಿಸಿದ ಮೊದಲ ಕನ್ನಡ ಸಿನಿಮಾ ‘ಕಾಂತಾರ’!

    ರಾತ್ರಿ ಇಡೀ ಆಟ ಬೇಕೇ?; ಕಾಲಮಿತಿ ಯಕ್ಷಗಾನ ಸಾಕೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts