More

    ವಿದ್ಯುತ್ ಸಮಸ್ಯೆ ನಿವಾರಣೆ

    ಎಚ್.ಡಿ.ಕೋಟೆ: ತಾಲೂಕಿನ ಗೊಲ್ಲನಬೀಡು ಗ್ರಾಮದಲ್ಲಿ 10 ಕೋಟಿ ರೂ. ವೆಚ್ಚದ 66 ಕೆ.ವಿ. ವಿದ್ಯುತ್ ಉಪ ಘಟಕದ ಕಾಮಗಾರಿ ಆರಂಭಿಸಲಾಗಿದ್ದು, ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

    ತಾಲೂಕಿನ ಗೊಲ್ಲನಬೀಡು ಗ್ರಾಮದಲ್ಲಿ ಉಪ ವಿದ್ಯುತ್ ಘಟಕ ಸ್ಥಾಪನೆಗೆ ಭಾನುವಾರ ಭೂಮಿ ಪೂಜೆ ನೆರವೇಸಿ ಮಾತನಾಡಿದರು.
    ಗೊಲ್ಲನಬೀಡು ಗ್ರಾಮದಲ್ಲಿ ಉಪವಿದ್ಯುತ್ ಘಟಕವನ್ನು ಸ್ಥಾಪಿಸಬೇಕೆಂಬುದು ಇಪ್ಪತ್ತು ವರ್ಷಗಳ ಬೇಡಿಕೆಯಾಗಿದೆ. ಆ ಬೇಡಿಕೆ ಇದೀಗ ಕೈಗೂಡಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

    ಈ ಭಾಗದ ಗ್ರಾಮಗಳಾದ ಹಾಲನಹಳ್ಳಿ, ಕ್ಯಾತನಹಳ್ಳಿ, ಜಿ.ಬಿ.ಸರಗೂರು, ಗಂಗಡಹೊಸಹಳ್ಳಿ, ಸಿಂಡೇನಹಳ್ಳಿ, ಗೊಲ್ಲಂಬೆಡು, ಮಸಣಕುಪ್ಪೆ, ಗದ್ದೆ ಹುಂಡಿ, ಸೇರಿದಂತೆ 70ಕ್ಕೂ ಹೆಚ್ಚು ಗ್ರಾಮಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.

    ಈ ಭಾಗದ ಗ್ರಾಮಗಳಿಗೆ ಅತೀ ಹೆಚ್ಚು ವಿದ್ಯುತ್ ಸಮಸ್ಯೆ ಉಂಟಾಗುತ್ತಿತ್ತು. ಆದರೆ ಈ ಯೋಜನೆ ಪ್ರಾರಂಭ ಆಗುವುದರಿಂದ ನಿರಂತರ ವಿದ್ಯುತ್ ಪೂರೈಕೆ ಜತೆಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿದ್ಯುತ್ ಸರಬರಾಜು ಮಾಡಬಹುದು ಎಂದರು.

    ಕಾರ್ಯನಿರ್ವಾಹಕ ಇಂಜಿನಿಯರ್ ಮಾದೇಶ್ ಮಾತನಾಡಿ, 66/11 ಕೆ.ವಿ.ಯ ನಾಲ್ಕು ವಿದ್ಯುತ್ ಉಪಕೇಂದ್ರವನ್ನು ಗೊಲ್ಲನಬೀಡು ಗ್ರಾಮದಲ್ಲಿ ಸ್ಥಾಪಿಸಲಾಗುತ್ತಿದೆ. ಮುಂದಿನ 9 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ಹಂಪಾಪುರ ಹೋಬಳಿಯ ಹಲವು ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಅಡೆತಡೆಗೆ ಪೂರ್ಣವಿರಾಮ ಹಾಕಿದಂತಾಗುತ್ತದೆ ಎಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಂದೀಪ್, ಸಹಾಯಕ ಇಂಜಿನಿಯರ್ ಜಶ್ವಂತ್, ಎಇಇ ಚಂದುಕುಮಾರ್, ತಹಸೀಲ್ದಾರ್ ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ಶಿವರಾಜು, ಮೈಮುಲ್ ನಿರ್ದೇಶಕ ಈರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ್ ಪಾಷ, ಮರಿದೇವಯ್ಯ, ಚಾಮರಾಜು, ಎಇಇ ನಾಗರಾಜು, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ಬಿಇಒ ಮಾರಯ್ಯ, ಆರ್.ಐ.ಯೋಗೇಂದ್ರಕುಮಾರ್, ಸಂಜೀವ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಎಂ. ದೀಪಕ್ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಂದೀಪ್, ಸಹಾಯಕ ಇಂಜಿನಿಯರ್ ಜಶ್ವಂತ್, ಎಇಇ ಚಂದುಕುಮಾರ್, ಜಗನ್ನಾಥ್, ಬೋರಯ್ಯ, ಬಿಂದುಶ್ರೀ, ಸುದರ್ಶನ್, ಮಂಜುನಾಥಶೆಟ್ಟಿ, ರಾಜು, ಚಿಕ್ಕ, ಮಂಜ, ಗಿರೀಶ್, ನಾಗರಾಜು, ರಾಜ ನಾಯಕ, ಮಂಜು, ಮರಿದೇವಯ್ಯ, ಕೃಷ್ಣಮೂರ್ತಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts