More

    ಚಿತ್ರಕಲೆಗಿದೆ ಬದುಕು ರೂಪಿಸುವ ಶಕ್ತಿ

    ಕಲಬುರಗಿ: ಕಲಾವಿದರು ಬಿಡಿಸಿದ ಚಿತ್ರಗಳು ಕೇವಲ ಚಿತ್ರಗಳಲ್ಲ, ಬದುಕು ರೂಪಿಸುವ ಸಾಧನ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ನಾಡೋಜ ಜೆ.ಎಸ್. ಖಂಡೇರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.

    ಶರಣಬಸವೇಶ್ವರ ಕಲಾ ಕಾಲೇಜಿನಲ್ಲಿ ಚಿತ್ರಕಲಾ ಉಪನ್ಯಾಸಕ ವಿ.ಬಿ. ಬಿರಾದಾರ ಸೇವಾ ನಿವೃತ್ತಿ ನಿಮಿತ್ತ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ ಅವರು, ಕಲಾವಿದ ಒಂದು ಚಿತ್ರ ಬಿಡಿಸಿದ್ದಾನೆ ಎಂದರೆ ಅದರ ಹಿಂದೆ ಹತ್ತಾರು ಅರ್ಥಗಳಿರುತ್ತವೆ. ನಾವು ಕೇವಲ ಚಿತ್ರವನ್ನಾಗಿ ನೋಡಬಾರದು. ಅದರ ಒಳಾರ್ಥ ಅರಿಯಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

    ನಿವೃತ್ತ ಉಪನ್ಯಾಸಕ ವಿ.ಬಿ. ಬಿರಾದಾರ ದಂಪತಿಯನ್ನು ಸಂಸ್ಥೆ ಪರವಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದಶರ್ಿ ಬಸವರಾಜ ದೇಶಮುಖ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಬಿರಾದಾರ, ನನಗೆ ಬದುಕು ರೂಪಿಸಿದ ಶರಣಬಸವೇಶ್ವರ ಶಿಕ್ಷಣ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

    ಕೇಂದ್ರೀಯ ವಿಶ್ವವಿದ್ಯಾಲಯದ ಲಲಿತಕಲಾ ವಿಭಾಗದ ಡಾ.ಶಿವಾನಂದ ಬಂಟನೂರ, ಶರಣಬಸವ ವಿಶ್ವವಿದ್ಯಾಲಯದ ಲಲಿತಕಲಾ ನಿಕಾಯದ ಡೀನ್ ಡಾ.ಶಾಂತಲಾ ಅಪ್ಪ, ಹಿರಿಯ ಕಲಾವಿದರಾದ ವಿ.ಜಿ. ಅಂದಾನಿ. ಎ.ಎಸ್. ಪಾಟೀಲ್, ಮಲ್ಲಿಕಾಜರ್ುನ ಭಾಗೋಡಿ, ನಾರಾಯಣ ಜೋಶಿ, ಪ್ರಾಚಾರ್ಯ ಡಾ.ಡಿ.ಟಿ. ಅಂಗಡಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts