More

    ರಜೆಯಲ್ಲಿದ್ದ ಸೈನಿಕನನ್ನು ಗುಂಡಿಟ್ಟು ಕೊಂದ ಭಯೋತ್ಪಾದಕರು

    ಶ್ರೀನಗರ : ರಜೆಯ ಮೇಲಿದ್ದ ಭಾರತೀಯ ಸೇನೆಯ ಸೈನಿಕರೊಬ್ಬರನ್ನು ಲಷ್ಕರ್​ಎತೈಬಾದ ಇಬ್ಬರು ಭಯೋತ್ಪಾದಕರು ಗುಂಡಿಟ್ಟು ಕೊಂದಿರುವ ಘಟನೆ ಕಾಶ್ಮೀರದಿಂದ ವರದಿಯಾಗಿದೆ. ಮೂರು ಬಾರಿ ಕಮೆಂಡೇಷನ್ ಕಾರ್ಡ್ (ಮೆಚ್ಚುಗೆ ಪತ್ರ) ನೀಡಲಾಗಿದ್ದ 35 ವರ್ಷ ವಯಸ್ಸಿನ ಮೊಹಮ್ಮದ್ ಸಲೀಂ ಅಖೂನ್ ಎಂಬುವರೇ ಹುತಾತ್ಮರಾದ ಸೈನಿಕ.

    ಅಖೂನ್ ಅವರು ಕಾಶ್ಮೀರದ ಬಿಜ್​ಬೆಹಾರಾ ಜಿಲ್ಲೆಯ ಜಬ್ಲಿಪೋರ ಪ್ರದೇಶದಲ್ಲಿದ್ದ ತಮ್ಮ ನಿವಾಸದಲ್ಲಿದ್ದಾಗ ಇಬ್ಬರು ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿದ್ದು, ಮೊದಲು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅಲ್ಲಿಂದ ಶ್ರೀನಗರದ ಜಿಎಂಸಿ ಆಸ್ಪತ್ರೆಗೆ ಕರದೊಯ್ದಾಗ ಮೃತರೆಂದು ಘೋಷಿಸಲಾಯಿತು ಎನ್ನಲಾಗಿದೆ.

    ಇದನ್ನೂ ಓದಿ: ಜಮ್ಮು-ಕಾಶ್ಮೀರದ ಶಾಲೆಗಳಿಗೆ ತ್ರಿವರ್ಣ ಫಲಕಗಳು

    ಸೇನಾ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಮೊಹಮ್ಮದ್ ಸಲೀಂ ಅಖೂನ್ ಅವರಿಗೆ ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಭಯೋತ್ಪಾದಕರು ಬೆದರಿಕೆ ನೀಡಿದ್ದರು. ಆದಾಗ್ಯೂ ಕೆಚ್ಚೆದೆಯ ಅಖೂನ್ ಅವರ ಉತ್ಸಾಹ ಕುಗ್ಗಿರಲಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)

    ಕರೊನಾ ಲಸಿಕೆ : ಅತಿ ವೇಗದಲ್ಲಿ 10 ಕೋಟಿ ಡೋಸ್​ ನೀಡಿರುವ ಭಾರತ !

    ಪ್ರತಿಭಟನೆ ಮುಂದೂಡಿ, ಮಾತುಕತೆಗೆ ಬನ್ನಿ : ಸಚಿವರ ಆಗ್ರಹ

    ಏಪ್ರಿಲ್ 11 ರಿಂದ ಕೆಲಸದ ಸ್ಥಳಗಳಲ್ಲೇ ಕರೊನಾ ಲಸಿಕೆ ಸೌಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts