More

    ಉತ್ಪಾದನೆಯಲ್ಲಿ ಸುಧಾರಣೆ ಕಂಡ ಸೋಲಾರ್ ವಿದ್ಯುತ್

    ಬೆಂಗಳೂರು:
    ಸೋಲಾರ್ ವಿದ್ಯುತ್ ಉತ್ಪಾದನೆ ಸುಧಾರಿಸಿಕೊಂಡಿದ್ದು, ಇಂಧನ ಇಲಾಖೆ ನಿಟ್ಟುಸಿರು ಬಿಡುವಂತಾಗಿದೆ.
    8273 ಮೆವಾ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದ್ದರೂ, ಹವಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಕಳೆದ 3 ತಿಂಗಳು ಉತ್ಪಾದನೆ ಕುಸಿತಗೊಂಡಿತ್ತು. ಈಗ ನಿತ್ಯ ಸರಾಸರಿ 4 ಸಾವಿರ ಮೆವಾ ವಿದ್ಯುತ್ ಗ್ರಿಡ್‌ಗೆ ಲಭ್ಯವಾಗುತ್ತಿದೆ.
    ಪ್ರತಿನಿತ್ಯ ಸರಾಸರಿ 3 ರಿಂದ 4 ಸಾವಿರ ಮೆವಾ ವಿದ್ಯುತ್ ಉತ್ಪಾದನೆ ಆಗಬಹುದು ಎಂದು ನಿರೀಕ್ಷಿಸಿದ್ದರೂ, 1 ಸಾವಿರ ಮೆವಾಕ್ಕಿಂತ ಕಡಿಮೆ ಉತ್ಪಾದನೆ ಆಗುತ್ತಿದ್ದದ್ದು ಸಮಸ್ಯೆಗೆ ಮೂಲ ಕಾರಣವಾಗಿತ್ತು.
    ಮಳೆಯ ವಾತಾವರಣದಿಂದ ಬಿಸಿಲಿನ ವಾತಾವರಣಕ್ಕೆ ಹವಮಾನ ಬದಲಾವಣೆ ಆಗುತ್ತಿರುವುದರಿಂದ ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಸುಧಾರಣೆ ಆಗಿರುವುದು ಸಮಾಧಾನ ತಂದಿದೆ. ಮುಂದಿನ ದಿನಗಳಲ್ಲಿ ನಿತ್ಯ 5 ರಿಂದ 6 ಸಾವಿರ ಮೆವಾ ವಿದ್ಯುತ್ ಉತ್ಪಾದನೆ ಆಗಬಹುದು ಎನ್ನುವುದು ಅಧಿಕಾರಿಗಳ ವಿಶ್ವಾಸ.
    ಜಲಾಶಯಗಳಲ್ಲಿ ನೀರಿನ ಕೊರತೆ ಇರುವ ಕಾರಣ, ಹೈಡ್ರೋ ವಿದ್ಯುತ್ ಉತ್ಪಾದನೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸಲಾಗಿದೆ. ವಿದ್ಯುತ್ ಬೇಡಿಕೆಯನ್ನು ನಿಭಾಯಿಸಲು ಸೋಲಾರ್ ವಿದ್ಯುತ್ ಬಳಸಿಕೊಳ್ಳಲಾಗುತ್ತಿದೆ. ಅನಿವಾರ್ಯವಾದ ಸಂದರ್ಭದಲ್ಲಿ ಉಷ್ಣ ವಿದ್ಯುತ್ ಮೊರೆ ಹೋಗಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts