More

    ಸೌರವಿದ್ಯುತ್ ಚಾಲಿತ ಕ್ಯಾಂಟೀನ್: ಅಡುಗೆ ಸಹಿತ ಪ್ರತಿ ಕಾರ್ಯಕ್ಕೆ ಸೂರ್ಯನ ಬೆಳಕೇ ಆಧಾರ

    ಕಟೀಲು: ಕಟೀಲು ಬಸ್ ತಂಗುದಾಣ ಪಕ್ಕದಲ್ಲಿರುವ ಸಂಚಾರಿ ಮೊಬೈಲ್ ಕ್ಯಾಂಟೀನೊಂದು ಸಂಪೂರ್ಣ ಸೌರವಿದ್ಯುತ್‌ನಿಂದ ನಡೆಯುತ್ತಿದೆ.

    ಕಟೀಲು ಪಂಚಾಯಿತಿ ಮಾಜಿ ಸದಸ್ಯ ಅರುಣ್ ಕುಮಾರ್ ಮಲ್ಲಿಗೆಯಂಗಡಿ, 407 ವಾಹನವನ್ನೇ ಮೊಬೈಲ್ ಕ್ಯಾಂಟಿನ್ ಆಗಿ ಪರಿವರ್ತಿಸಿದ್ದಾರೆ. ಅದರ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. ಇದರಲ್ಲಿನ ಫ್ರಿಡ್ಜ್, ಮಿಕ್ಸಿ, ಓವನ್, ಎಕ್ಸಾಸ್ಟ್ ಫ್ಯಾನ್ ಮತ್ತಿತರ ಕ್ಯಾಂಟಿನ್‌ನ ಉಪಕರಣಗಳು ಸೋಲಾರ್‌ನಿಂದ ನಡೆಯುತ್ತಿವೆ.

    ತಿಂಡಿ ತಿನಿಸುಗಳನ್ನೂ ಸೌರವಿದ್ಯುತ್‌ನಿಂದಲೇ ತಯಾರಿಸಲಾಗುತ್ತದೆ. ಗ್ರಾಹಕರಿಗೆ ಕೈ ತೊಳೆಯಲು ಬಸ್ ಹಿಂಭಾಗದಲ್ಲಿ ವಾಶ್‌ಬೇಸಿನ್ ಇಡಲಾಗಿದ್ದು, ನೀರಿಗಾಗಿ ಬಸ್ ಮೇಲ್ಭಾಗ 500 ಲೀಟರ್ ಸಾಮರ್ಥ್ಯದ ಟ್ಯಾಂಕ್ ಅಳವಡಿಸಲಾಗಿದೆ. ಕೈ ತೊಳೆದ ತ್ಯಾಜ್ಯ ನೀರು ಬಸ್‌ನ ಅಡಿಭಾಗದ ಇನ್ನೊಂದು 300 ಲೀಟರ್ ಸಾಮರ್ಥ್ಯದ ಟ್ಯಾಂಕ್‌ನಲ್ಲಿ ಸಂಗ್ರಹವಾಗುತ್ತಿದೆ. ವಿಲೇವಾರಿ ಮಾಡಲು ಸುಲಭವಾಗುವಂತೆ ಇದನ್ನು ಅಳವಡಿಸಲಾಗಿದೆ.

    ಗ್ರಾಹಕರಿಗೆ ಕುಳಿತು ತಿನ್ನುವ ವ್ಯವಸ್ಥೆಗಾಗಿ ಇನ್ನೊಂದು ಗಾಡಿಯ ಚೇಸ್ ಅನ್ನು ಕೋಣೆಯಂತೆ ಮಾಡಿ ಅದರಲ್ಲಿ ಕುರ್ಚಿ, ಟೇಬಲ್ ಇಡಲಾಗಿದೆ. ಫ್ಯಾನ್ ಅಳವಡಿಸಿದ್ದು ಮೇಲ್ಭಾಗದಲ್ಲಿ ಬಿಸಿ ಗಾಳಿ ಹೊರ ಹೋಗಲು ಎಕ್ಸಾಸ್ಟ್ ಫ್ಯಾನ್ ಅಳವಡಿಸಲಾಗಿದೆ. ಕ್ಯಾಂಟೀನ್ ಸದ್ಯ ಕಟೀಲು ಬಸ್ ನಿಲ್ಡಾಣದ ಪಕ್ಕ ನಿಂತಿದ್ದು, ವ್ಯಾಪಾರಕ್ಕೆ ಬೇರೆ ಬೇರೆ ಕಡೆಗಳಿಗೆ ತೆಗೆದುಕೊಂಡು ಹೋಗಬಹುದಾಗಿದೆ. ಕ್ಯಾಂಟಿನ್ ಹೊರಭಾಗದಲ್ಲಿ ಹಣ್ಣು ಹಂಪಲುಗಳ ಚಿತ್ರ ಬಿಡಿಸಿ ಆಕರ್ಷಣೀಯವಾಗಿದೆ. ಸ್ವಚ್ಛತೆ ಬಗ್ಗೆ ಗಮನಹರಿಸಲಾಗಿದೆ. ಕ್ಯಾಂಟಿನ್‌ಗೆ 9.25 ಲಕ್ಷ ರೂ. ವೆಚ್ಚವಾಗಿದೆ.

    ಈ ಕ್ಯಾಂಟಿನನ್ನು ಚಿತ್ರೀಕರಣ ಸಲುವಾಗಿ ನಿರ್ಮಾಪಕರು ಹಲವೆಡೆ ಒಯ್ದಿದ್ದಾರೆ. ಕಾಡು, ಗ್ರಾಮೀಣ ಪ್ರದೇಶಗಳಲ್ಲಿ ಚಿತ್ರೀಕರಣ ಸಂದರ್ಭ ಚಿತ್ರತಂಡಕ್ಕೆ ಊಟ, ತಿಂಡಿ ತಯಾರಿಕೆಗೆ ತೆಗೆದುಕೊಂಡು ಹೋಗಿದ್ದಾರೆ.

    ಎರಡು ವರ್ಷದ ಹಿಂದೆ ನನ್ನದೇ ಕಲ್ಪನೆಯಲ್ಲಿ ಈ ಕ್ಯಾಂಟಿನ್ ತಯಾರಾಗಿದೆ. ಸ್ವಚ್ಛತೆ ಬಗ್ಗೆ ಗಮನಹರಿಸಲಾಗಿದೆ. ಮುಂದಿನ ದಿನದಲ್ಲಿ ಟಿ.ವಿ ಅಳವಡಿಸಿ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತದೆ. ಕ್ಯಾಂಟಿನ್‌ನಿಂದ ಬರುವ ಆದಾಯದ ಶೇಕಡ 1ನ್ನು ನಮ್ಮ ಭಾರತೀಯ ಸೇನೆಗೆ ನೀಡಲು ನಿರ್ಧರಿದ್ದೇನೆ.
    ಅರುಣ್ ಕುಮಾರ್ ಕಟೀಲ್, ಕ್ಯಾಂಟಿನ್ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts