More

    ಮಣ್ಣು ಪರೀಕ್ಷೆಯಿಂದ ಇಳುವರಿ ಅಧಿಕ

    ರೋಣ: ಮಣ್ಣು ಪರೀಕ್ಷೆ ಅಧಿಕ ಇಳುವರಿಗೆ ಕಾರಣವಾಗುತ್ತದೆ. ರೈತರು ನಿಯಮಿತವಾಗಿ ಮಣ್ಣಿನ ಪರೀಕ್ಷೆ ಮಾಡಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನಾಧಿಕಾರಿ ಮಹಾಬಲೇಶಜಯ ಪಟಗಾರ ಸಲಹೆ ನೀಡಿದರು.

    ತಾಲ್ಲೂಕಿನ ಸಂದಿಗವಾಡ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಗತಿ ಬಂಧು ತಂಡದ ಸದಸ್ಯರಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸಂಪನ್ಮೂಲ ವ್ಯಕ್ತಿ ಮಾರುತಿ ನಿಂಬೋಜಿ ಮಾತನಾಡಿ, ನೈಸರ್ಗಿಕವಾಗಿ ಬೆಳೆಯುವ ಸಸ್ಯಗಳಿಗೆ ಅಗತ್ಯವಿರುವ ಎಲ್ಲ ಪೋಷಕಾಂಶಗಳನ್ನು ಮಣ್ಣು ಹೊಂದಿದೆ. ಆದರೆ, ಬಾಹ್ಯ ಅಂಶಗಳಿಂದ ಮಣ್ಣಿನ ಫಲವತ್ತತೆಗೆ ಕುತ್ತು ಬರುತ್ತದೆ. ಮಣ್ಣಿನಲ್ಲಿರುವ ಕೊರತೆಗಳನ್ನು ನೀಗಿಸಲು ರೈತರು ಬದಲಿ ಪೋಷಕಾಂಶಗಳು ಮತ್ತು ರಸಗೊಬ್ಬರಗಳನ್ನು ಮಣ್ಣಿನಲ್ಲಿ ಸೇರಿಸುತ್ತಾರೆ. ಆದರೆ, ಈ ಕೊರತೆ ನಿಖರವಾಗಿ ಗುರುತಿಸಲು, ಮಣ್ಣಿನ ಪರೀಕ್ಷೆ ನಡೆಸುವುದು ಮುಖ್ಯ ಎಂದರು. ಹನಮಂತಗೌಡ ಹುಲ್ಲೂರು, ಗ್ರಾಪಂ ಅಧ್ಯಕ್ಷ ರಾಜುಗೌಡ್ರ, ಚಂಪಾವತಿ ಹಿರೇಮಠ, ಚನ್ನಯ್ಯ ಕೆ. ಹಿರೇಮಠ, ಸುಮಿತ್ರಾ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts