More

    ಸಮಾಜಕ್ಕೆ ವಕೀಲರ ಕೊಡುಗೆ ಅಪಾರ

    ಯಲಬುರ್ಗಾ: ಸಮಾಜಕ್ಕೆ ವಕೀಲರ ಕೊಡುಗೆ ಅಪಾರವಿದೆ. ಅದಕ್ಕೆ ಚ್ಯುತಿಬಾರದಂತೆ ನಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಕಣ್ಣೂರ ಹೇಳಿದರು.

    ಇದನ್ನೂ ಓದಿ: ಚಿಕ್ಕಮಗಳೂರಿನ ಘಟನೆ ಖಂಡಿಸಿ ವಕೀಲರ ಸಾಂಕೇತಿಕ ಪ್ರತಿಭಟನೆ

    ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ವಕೀಲರ ಸಂಘದಿಂದ ವಕೀಲರ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕ್ರಿಕೆಟ್ ಟೂರ್ನಾಮೆಂಟ್ ಉದ್ಘಾಟಿಸಿ ಮಾತನಾಡಿದರು.

    ವಕೀಲರು ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಜತೆಗೆ ಒತ್ತಡದ ಬದುಕಿನಲ್ಲಿ ನೆಮ್ಮದಿ ಕಾಣಲು ಕ್ರೀಡೆ, ಕಲೆ, ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢತೆಗೆ ಸಹಕಾರಿಯಾಗಲಿದೆ. ಪ್ರತಿಯೊಬ್ಬರೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಸೂಕ್ತ ಎಂದರು.

    ವಕೀಲರ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ಬೆಲೇರಿ, ಜಿಪಂ ಮಾಜಿ ಸದಸ್ಯ ಸಿ.ಎಚ್.ಪಾಟೀಲ್, ಹಿರಿಯ ವಕೀಲ ಬಿ.ಎಂ.ಶಿರೂರು, ಬಾಗಲಕೋಟೆಯ ಲಡ್ಡು ಮುತ್ಯಾ, ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಎನ್.ಶ್ಯಾಗೋಟಿ, ಆನಂದ ಉಳ್ಳಾಗಡ್ಡಿ, ಮಲ್ಲನಗೌಡ ಪಾಟೀಲ್, ಆರ್.ಜಿ.ನಿಂಗೋಜಿ,

    ವಕೀಲರಾದ ಪ್ರಭು ಕಲಬುರ್ಗಿ, ಐ.ಬಿ.ಕೋಳುರು, ಬಿ.ಎಚ್.ಪಾಟೀಲ್, ಕೆ.ಆರ್.ಬೆಟಗೇರಿ, ಜಗದೀಶ ತೊಂಡಿಹಾಳ, ಹುಚ್ಚೀರಪ್ಪ, ದಾದು ಎಲಿಗಾರ, ಎ.ಎಂ.ಪಾಟೀಲ್, ವೀರಣ್ಣ ತಳಕಲ್, ಮಹಾಂತೇಶ ಬುದುಗುಂಪಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts