More

    ಸಮಾಜಮುಖಿಯಾಗಿ ಬದುಕಬೇಕು

    ಬೆಳಗಾವಿ: ಶರಣರು ಜಗತ್ತಿಗೆ ನೀಡಿರುವ ಮಹತ್ವದ ಕೊಡುಗೆಗಳು ಕಾಯಕ-ದಾಸೋಹ-ಪ್ರಸಾದ ಸಿದ್ಧಾಂತಗಳು. ಪ್ರತಿಯೊಬ್ಬರೂ ಸತ್ಯ ಶುದ್ಧ ಹಾಗೂ ಪ್ರಾಮಾಣಿಕವಾಗಿ ದುಡಿದು ಸಮಾಜಮುಖಿಯಾಗಿ ಬದುಕಬೇಕು ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.

    ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಈಚೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವತಿಯಿಂದ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವಗೋಷ್ಠಿಯಲ್ಲಿ ಮಾತನಾಡಿ, ಸಮಾಜದ ಬೆಳವಣಿಗೆಯಲ್ಲಿ ದುಡಿಮೆಯ ಅವಶ್ಯವಿದೆ. ಕಷ್ಟಪಟ್ಟು ದುಡಿದಾಗ ವ್ಯಕ್ತಿ ಹಾಗೂ ಸಮಾಜದ ಕಲ್ಯಾಣವು ಸಾಧ್ಯ. ಮಾಡುವ ಕೆಲಸದಲ್ಲಿ ನಿಷ್ಠೆ ಹಾಗೂ ಸೇವಾಭಾವ ಇರಬೇಕು ಎಂದರು. ಲಿಂಗರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಮಹೇಶ ಗುರನಗೌಡರ ಮಾತನಾಡಿ, ಶರಣರು ಕಾಯಕಕ್ಕೆ ದೈವಿಸ್ಪರ್ಶ ನೀಡಿದರು. ಕಾಯಕ ಆರ್ಥಿಕತೆಯ ತಳಹದಿ, ಬೆನ್ನೆಲುಬು. ಸಾಧಕ ಎಂಬ ಭಾವದಿಂದ ಕೈಗೊಳ್ಳುವ ಆತ್ಮಕ್ರಿಯೆ; ಪರಹಿತಕ್ಕಾಗಿ ಮಾಡುವ ಶಿವಕೇಂದ್ರಿ ಕ್ರಿಯೆ ಕಾಯಕ. ಶರಣರು ಕಾಯಕಕ್ಕೆ ಆಧ್ಯಾತ್ಮಿಕ ಅರ್ಥ ಕಲ್ಪಿಸಿದರು. ಪ್ರತಿಯೊಬ್ಬರೂ ಜೀವನ ನಿರ್ವಹಣೆಗಾಗಿ ಉದ್ಯೋಗ ಕೈಗೊಳ್ಳಬೇಕು. ಮಾಡುವ ಕೆಲಸ ಸಮಾಜಕ್ಕೆ ಹಾನಿಕಾರಕವಾಗಿರಬಾರದು. ಸಮಾಜದ ಅವಶ್ಯಕತೆ ಪೂರೈಸುವಂತಿರಬೇಕು ಎಂದರು. ಮಹಾಸಭೆ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಶರಣರ ವಿಚಾರಗಳು ಎಲ್ಲ ಕಾಲಕ್ಕೂ ಹೃದಯಸ್ಪರ್ಶಿ ಹಾಗೂ ಅನುಕರಣೀಯವೆನಿಸಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಯುವಜನಾಂಗಕ್ಕೆ ಅವುಗಳನ್ನು ಮುಟ್ಟಿಸುವ ಜವಾಬ್ದಾರಿ ನಮ್ಮದು ಎಂದರು. ಡಾ.ಎಫ್. ವಿ.ಮಾನ್ವಿ, ರಮೇಶ ಕಳಸಣ್ಣವರ, ವಿ.ಕೆ.ಪಾಟೀಲ, ಸುಧಾ ಪಾಟೀಲ, ಡಾ.ಗುರುದೇವಿ ಹುಲೆಪ್ಪನವರಮಠ, ನೀಲಗಂಗಾ ಚರಂತಿಮಠ, ಶಂಕರ ಚೊಣ್ಣದ, ಜಯಶೀಲಾ ಬ್ಯಾಕೋಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts