More

    ಸ್ನೇಹಾನಾ ಸೈಮಾನಾ?; ವಿಶ್ವಸಂಸ್ಥೆಯಲ್ಲಿ ಸಿಡಿದ ಲೇಡಿ ಮಿಸೈಲ್ಸ್

    ಅಲ್ಲಿ ಗುಂಡು ಸಿಡಿಯಲಿಲ್ಲ. ರಾಕೆಟ್ ಬಡಿಯಲಿಲ್ಲ. ಆದರೂ ಯುದ್ಧ ನಡೆಯಿತು. ಅದು ಸಾಮಾನ್ಯ ಯುದ್ಧವಲ್ಲ. ಗುಡುಗು ಸಿಡಿಲು ಮೀರಿಸುವಂತಹ ಭಾವಾವೇಶ. ಗಂಟೆಗಟ್ಟಲೆ ಕಂಡಿತು ರೋಷಾವೇಶ. ಒಂದೊಂದು ಮಾತುಗಳೂ ಅಲ್ಲಿದ್ದವರನ್ನು ಕುರ್ಚಿಯ ತುದಿಗೆ ತಂದು ಕೂರಿಸಿತ್ತು. ಆ ಅದಮ್ಯ ಆತ್ಮವಿಶ್ವಾಸ, ನಿಖರ ಅಂಕಿ-ಅಂಶ ಎದುರಾಳಿಯ ಎದೆನಡುಗಿಸಿತ್ತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಭಾರತ, ಪಾಕಿಸ್ತಾನ ಮಹಿಳಾ ಅಧಿಕಾರಿಗಳ ನಡುವಿನ ಈ ವಾಗ್ಯುದ್ಧ ಈಗ ವಿಶ್ವದೆಲ್ಲೆಡೆ ಚರ್ಚಾ ವಿಷಯ. ಈ ಅಪರೂಪದ ಜಗಳ್​ಬಂಧಿಯ ಕಿರುನೋಟ ಇಲ್ಲಿದೆ.

    | ಮಂಜುನಾಥ್ ಬಿ.ಎಸ್. ಬೆಂಗಳೂರು

    ಇವರು ಸ್ನೇಹಾ…

    ಇಡೀ ವಿಶ್ವದ ಎದುರು ಅಂದು ಭಾರತದ ಸ್ನೇಹಮಯಿ ಅಂತಃಕರಣವನ್ನು ತೆರೆದಿಟ್ಟರು. ಪಾಕಿಸ್ತಾನಕ್ಕೆ ಸ್ನೇಹ, ವಿಶ್ವಾಸದ ಪಾಠ ಹೇಳುತ್ತಲೇ ಭಾರತ ಸ್ನೇಹಕ್ಕೂ ಸಿದ್ಧ ಸಮರಕ್ಕೂ ಬದ್ಧ ಎಂಬ ನೇರ ಎಚ್ಚರಿಕೆ ನೀಡಿ ಮೇಜು ಕುಟ್ಟಿದರು. ವಿಶ್ವಸಂಸ್ಥೆ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಖಂಡಿಸುವುದಲ್ಲದೆ, ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಷಾ ಗಿಲಾನಿ ಸಾವಿಗೆ ಸಂತಾಪ ಸೂಚಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ಸ್ನೇಹ ತನ್ನ ತೀಕ್ಷ್ಣ ಮಾತಿನಲ್ಲೇ ನೆರೆಯ ರಾಷ್ಟ್ರದ ಮುಖವಾಡ ಕಳಚಿದರು.

    ಮಧ್ಯಮ ವರ್ಗದ ಕುಟುಂಬದ ಹುಡುಗಿ: 28 ವಯಸ್ಸಿನ ಸ್ನೇಹಾ ದುಬೆ ಮಧ್ಯಮ ವರ್ಗದ ಕುಟುಂಬದ ಮಗಳು. 2012ರ ಬ್ಯಾಚ್​ನ ಐಎಫ್​ಎಸ್ ಅಧಿಕಾರಿಯಾಗಿರುವ ಇವರು ಗೋವಾದಲ್ಲಿ ಪ್ರಾಥಮಿಕ ಶಿಕ್ಷಣ, ಪುಣೆಯಲ್ಲಿ ಪದವಿ ಮುಗಿಸಿ, ದೆಹಲಿಯಲ್ಲಿ ಅಂತಾರಾಷ್ಟ್ರೀಯ ಆಧ್ಯಯನ ವಿಷಯದ ಬಗ್ಗೆ ಎಂಫಿಲ್ ಪಡೆದಿದ್ದಾರೆ. ವಿದೇಶಾಂಗ ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ದಾರೆ.

    ಸ್ನೇಹಾ ಸಿಡಿಗುಂಡು…

    • ವಿಶ್ವಸಂಸ್ಥೆ ನಿಷೇಧಿಸಿದ ಅತಿ ಹೆಚ್ಚು ಉಗ್ರರಿಗೆ ಪಾಕ್ ಅಡಗುತಾಣ
    • ಒಸಮಾ ಬಿನ್ ಲಾಡೆನ್​ನನ್ನು ಇನ್ನೂ ಹುತಾತ್ಮ ಎನ್ನುತ್ತಿರುವುದೇಕೆ?
    • ಜಮ್ಮು, ಕಾಶ್ಮೀರ ಲಡಾಖ್ ಒಳಗೊಂಡ ಕೇಂದ್ರಾಡಳಿತ ಪ್ರದೇಶ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ.
    • ತನ್ನ ಹಿತ್ತಲಿನಲ್ಲಿ ಉಗ್ರವಾದ ಪೋಷಿಸುವ ಪಾಕಿಸ್ತಾನ ತಾನೇ ಕಿಚ್ಚು ಹೊತ್ತಿಸಿ ಬಳಿಕ ತಾನೇ ಬೆಂಕಿ ನಂದಿಸುವಂತೆ ನಾಟಕವಾಡುವುದರಲ್ಲಿ ಪರಿಣಿತ

    ಅವಳು ಸೈಮಾ…

    ಪಾಕಿಸ್ತಾನದ ಕುತಂತ್ರ, ನಾಟಕದ ನೈಜ ಮುಖ ಏನೇ ಇದ್ದರೂ ತನ್ನ ಮಾತೃದೇಶದ ಮಾನ, ಮರ್ಯಾದೆ ಉಳಿಸಲು ಭಾರತದ ಕಟುನುಡಿಯ ಅಸ್ತ್ರವನ್ನು ತನ್ನ ಚಾತುರ್ಯತೆಯ ತಡೆಗೋಡೆಯಿಂದ ಎದುರಿಸಿದ ಅಂಧೆ. ಸ್ನೇಹಾ ಪಾಕಿಸ್ತಾನದ ಮುಖಕ್ಕೆ ಮಸಿ ಬಳಿದರೆ ಪಾಕ್ ಪ್ರತಿನಿಧಿಸಿದ್ದ ಆ ರಾಷ್ಟ್ರದ ರಾಯಭಾರಿ ಸೈಮಾ ಅದನ್ನು ಒರೆಸುವ ಯತ್ನ ನಡೆಸಿದಳು. ಇದರಲ್ಲಿ ವಿಶೇಷತೆ ಇಲ್ಲವಾದರೂ ಅಂಧ ಅಧಿಕಾರಿಯಾಗಿ ಸೈಮಾ ಮಾಡಿದ ಭಾಷಣ ಗಮನಸೆಳೆಯಿತು. ಕಾಶ್ಮೀರ ವಲಯ ಭಾರತದ ಅವಿಭಾಜ್ಯ ಆಗಿದ್ದರೂ ಅಂತಾರಾಷ್ಟ್ರೀಯ ವಿವಾದಿತ ಪ್ರದೇಶ ಎಂಬುದು ಜಗಜ್ಜಾಹೀರು. ಕಾಶ್ಮೀರದಲ್ಲಿ ಭಾರತ ನಾಲ್ಕು ಮಾದರಿಯ ಭಯೋತ್ಪಾದನೆ ಬಿತ್ತುತ್ತಿದೆ. ಈ ವಿಚಾರದಲ್ಲಿ ಭಾರತ ಮೌನವಾಗಿರು ವುದೇಕೆಂದು ಪ್ರಶ್ನಿಸಿದರು. ಈಕೆಯ ಉತ್ತರಕ್ಕೆ ಆಧಾರವಿಲ್ಲವಾದರೂ ಓರ್ವ ಅಂಧ ಅಧಿಕಾರಿಯಾಗಿ ಭಾರತದ ಎದುರು ನಿಂತು ಪ್ರತಿಕ್ರಿಯಿಸಿದ ರೀತಿಯನ್ನು ಪಾಕಿಸ್ತಾನ ಗರ್ವದಿಂದ ಕೊಚ್ಚಿಕೊಳ್ಳುತ್ತಿದೆ.

    ಮಹಿಳೆಯರು ಫಿದಾ

    ವಿಶ್ವಸಂಸ್ಥೆ ವೇದಿಕೆಯಲ್ಲಿ ಸೈನಾ, ಸೈಮಾ ಮುಖಾಮುಖಿಯಾದ ಬಳಿಕ ವಿಶ್ವಸಂಸ್ಥೆ ಪ್ರತಿನಿಧಿಸುವ ಹುದ್ದೆಗಳನ್ನು ಗೂಗಲ್​ನಲ್ಲಿ ಸರ್ಚ್ ಮಾಡುವ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಹೆಣ್ಮಕ್ಕಳೇ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಶಸ್ತ್ರ ಹಿಡಿದರಷ್ಟೇ ಯುದ್ಧವಾಗುವುದಿಲ್ಲ. ಮಾತಿನ ಬಾಣಗಳಿಂದಲೂ ಶತ್ರುವನ್ನು ಕಟ್ಟಿಹಾಕಬಹುದೆಂಬುದನ್ನು ತೋರಿಸಿಕೊಟ್ಟಿರುವ ಸೈನಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts