More

    ಬಫರ್​ಜೋನ್ ಕಟ್ಟಡಗಳ ಬಗ್ಗೆ ತನಿಖೆ ನಡೆಸಿ

    ಸಾಗರ: ಬಸವನಹೊಳೆ ಡ್ಯಾಂ ಬಫರ್ ಜೋನ್ ವ್ಯಾಪ್ತಿ ಪ್ರದೇಶದಲ್ಲಿ ನಿರ್ವಿುಸಿರುವ ಅನಧಿಕೃತ ಕಟ್ಟಡ ಕುರಿತು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಬುಧವಾರ ಜಂಬಗಾರು ಬಡಾವಣೆ ನಿವಾಸಿಗಳು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

    ನಗರಸಭೆ ಮಾಜಿ ಸದಸ್ಯ ರವಿ ಜಂಬಗಾರು ಮಾತನಾಡಿ, ವಾರ್ಡ್ ನಂ.17ಕ್ಕೆ ಹೊಂದಿಕೊಂಡಂತೆ ಬಸವನಹೊಳೆ ಡ್ಯಾಂನ ಕುಡಿಯುವ ನೀರು ಸರಬರಾಜು ಯೋಜನೆ ವ್ಯಾಪ್ತಿಯ 1 ಕಿಮೀ ಪ್ರದೇಶವನ್ನು ಸರ್ಕಾರ ಬಫರ್ ಜೋನ್ ಎಂದು ಘೊಷಿಸಿದೆ. ಆದರೆ ಈ ಜಾಗದಲ್ಲಿ ಕೆಲವರು ಕಾನೂನುಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿ ಬಾಡಿಗೆ ಕೊಟ್ಟಿದ್ದಾರೆ ಎಂದು ದೂರಿದರು.

    ಈ ಮಳಿಗೆಗಳ ನಿರ್ವಣಕ್ಕೆ ನಗರಾಭಿವೃದ್ಧಿ ಇಲಾಖೆಯಿಂದ ಅನುಮತಿ ಪಡೆದಿಲ್ಲ. ನಿಯಮಬಾಹಿರ ಕಟ್ಟಡಕ್ಕೆ ನಗರಸಭೆ ಅಧಿಕಾರಿಗಳು ಖಾತೆ ಮಾಡಿ ಕೊಡುತ್ತಿದ್ದಾರೆ. ತಕ್ಷಣ ಈ ಬಗ್ಗೆ ತನಿಖೆ ನಡೆಸಿ ಬಫರ್​ಜೋನ್ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು ಮಾತನಾಡಿ, ಕೂಡಲೇ ಡಿಸಿ ಈ ಕುರಿತು ಸೂಕ್ತ ತನಿಖೆ ನಡೆಸಿ, ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಒತ್ತಾಯಿಸಿದರು. ಎ.ಎ.ಶೇಟ್, ಅಣ್ಣಪ್ಪ ಬಾಳೆಗುಂಡಿ, ಸುರೇಶ್, ರುದ್ರೇಶ್, ಕೆ.ಕೆ. ನಾರಾಯಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts