More

    ಮಕ್ಕಳ ಬಗೆಗಿನ ಸುರಕ್ಷಾ ಕ್ರಮಕ್ಕೆ ಬದ್ಧರಾಗಿ

    ಮುಧೋಳ: ಅಪರಾಧ ಪ್ರಕರಣಗಳಿರುವ ಚಾಲಕರನ್ನು ಯಾವುದೇ ಕಾರಣಕ್ಕೂ ಶಾಲಾ ವಾಹನ ಓಡಿಸಲು ನೇಮಕ ಮಾಡಿಕೊಳ್ಳುವಂತಿಲ್ಲ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಹೇಳಿದರು.

    ನಗರದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಭವನದಲ್ಲಿ ಶನಿವಾರ ಹಮ್ಮಿಕೊಂಡ ಅನುದಾನಿತ, ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಮುಖ್ಯ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.

    ಭವಿಷ್ಯದ ಪ್ರಜೆಗಳಾದ ಮಕ್ಕಳ ಭವಿಷ್ಯ ಉಜ್ವಲವಾಗಬೇಕು. ಈ ನಿಟ್ಟಿನಲ್ಲಿ ಮಕ್ಕಳ ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ಸರ್ಕಾರ ನೀಡಿದ ಎಲ್ಲ ನಿಯಮಗಳನ್ನು ಪಾಲಿಸಬೇಕು. ಇಲಾಖೆ ಹೊರಡಿಸಿದ ಮುಂಜಾಗ್ರತೆ ಕ್ರಮಗಳನ್ನು ಆಡಳಿತ ಮಂಡಳಿ ಕಡ್ಡಾಯವಾಗಿ ಪಾಲಿಸಬೇಕು. ರಸ್ತೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ವಾಹನ ಚಾಲಕರು ಮತ್ತು ಆಯಾಗಳು ಪಾಲಿಸಬೇಕು ಎಂದು ಹೇಳಿದರು.

    ಜಮಖಂಡಿ ಆರ್‌ಟಿಒ ಷಣ್ಮುಖಪ್ಪ ತೀರ್ಥ ಮಾತನಾಡಿ, ಆಟೋ ರಿಕ್ಷಾಗಳನ್ನು ಶಾಲಾ ವಾಹನಗಳಾಗಿ ಬಳಸುವಂತಿಲ್ಲ. ಪಾಲಕರು ಈ ನಿಯಮವನ್ನು ಗಮನದಲ್ಲಿಟ್ಟು ಶಾಲಾ ವಾಹನದಲ್ಲೇ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ವಾಹನದಲ್ಲಿ ಆಸನಗಳ ಸಾಮರ್ಥ್ಯಕ್ಕೆ ತಕ್ಕಂತೆ ಮಕ್ಕಳನ್ನು ವಾಹನದಲ್ಲಿ ಹತ್ತಿಸಿಕೊಳ್ಳಬೇಕು ಎಂದು ಹೇಳಿದರು.

    ತಹಸೀಲ್ದಾರ್ ವಿನೋದ ಹತ್ತಳ್ಳಿ, ಮುಧೋಳ ಸಿಪಿಐ ಮಹಾದೇವ ಶಿರಹಟ್ಟಿ, ಬಿಇಒ ಸಮೀರ ಮುಲ್ಲಾ, ಅಡಿವೆಪ್ಪ ಛಬ್ಬಿ , ಎ.ಆರ್.ಕುರಣಿ, ಸಂಗಮೇಶ ನೀಲಗುಂದ ಇದ್ದರು.

    ಚಾಲಕರನ್ನು ನೇಮಕ ಮಾಡಿಕೊಳ್ಳುವಾಗ ಉತ್ತಮ ಹವ್ಯಾಸ, ಡಿ. ಎಲ್. ಹೊಂದಿರುವ ಹಾಗೂ ಕೌಟುಂಬಿಕ ಹಿನ್ನೆಲೆ ಇರುವ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುವ ಉತ್ತಮ ಚಾಲಕರನ್ನು ಆಡಳಿತ ಮಂಡಳಿ ನೇಮಿಸಿಕೊಳ್ಳಬೇಕು. ವಾಹನಗಳಿಗೆ ಜಿಪಿಆರ್‌ಎಸ್ ಅಳವಡಿಸಿಕೊಳ್ಳಬೇಕು. ಕಡ್ಡಾಯವಾಗಿ ವಿಮೆ ಮಾಡಿಸಿರಬೇಕು. ಚಾಲಕರ ಅಪರಾಧ ಹಿನ್ನೆಲೆ ಬಗ್ಗೆ ಪೋಲಿಸ್ ಇಲಾಖೆಯಿಂದ ಮಾಹಿತಿ ಪಡೆಯಬೇಕು. ಮಕ್ಕಳ ಸುರಕ್ಷೆಗೆ ಆದ್ಯತೆ ನೀಡಿದ ನಂತರ ಶಿಕ್ಷಣಕ್ಕೆ ಒತ್ತು ಕೊಡಿ.
    ಈ ಶಾಂತವೀರ, ಡಿಎಸ್‌ಪಿ ಜಮಖಂಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts