More

    ಬಾಡಿಗೆ ವಿಮಾನದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದ ಠಕ್ಕರು!

    ನವದೆಹಲಿ: ಕೋವಿಡ್​ ನಿರ್ಬಂಧದ ಸಂದರ್ಭದಲ್ಲಿ ಬಾಡಿಗೆ ವಿಮಾನಗಳಲ್ಲಿ ರಾಜತಾಂತ್ರಿಕ ಸರಕುಗಳೊಂದಿಗೆ 30 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದರಿಂದಲೇ ಹಗರಣ ಬಯಲಾಗಿ ಠಕ್ಕರು ಸಿಕ್ಕಿಬಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್​ಐಎ) ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಕರಣದ ಕುರಿತು 2ನೇ ಎಫ್​ಐಆರ್​ ದಾಖಲಿಸಿರುವ ಎನ್​ಐಎ, ತಿರುವನಂತಪುರದ ಯುಎಇ ಕೌನ್ಸಲ್​ ಜನರಲ್​ ಕಚೇರಿಯ ಸರಕಿನೊಂದಿಗೆ 30 ಕೆ.ಜಿ. ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದರ ಬಗ್ಗೆ ನಾಲ್ವರ ವಿರುದ್ಧ ಭಯೋತ್ಪಾದನಾ ಕೃತ್ಯ ಸಂಬಂಧಿತ ಆರೋಪಗಳನ್ನು ಹೊರಿಸಿದ್ದಾರೆ.

    ಪ್ರಕರಣದ ತನಿಖೆಯನ್ನು ಶುಕ್ರವಾರ ವಹಿಸಿಕೊಂಡಿರುವ ಎನ್​ಐಎ, ಕಳ್ಳಸಾಗಣೆಯ ಚಿನ್ನದ ಮಾರಾಟದಿಂದ ಬರುತ್ತಿದ್ದ ಹಣವನ್ನು ಭಾರತದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಬಳಸಲಾಗುತ್ತಿತ್ತು ಎಂದು ಹೇಳಿದೆ.

    ಬಾಡಿಗೆ ವಿಮಾನದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದ ಠಕ್ಕರು!

    ಕಳ್ಳಸಾಗಣೆಯ ಮಾಲು ಈ ಹಿಂದೆ ನಿಯಮಿತವಾದ ವಿಮಾನಗಳಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಹಾಗಾಗಿ ಅದು ಯಾರ ಗಮನಕ್ಕೂ ಬರುತ್ತಿರಲಿಲ್ಲ. ಆದರೆ, ಕೋವಿಡ್​-19 ನಿರ್ಬಂಧದ ಹಿನ್ನೆಲೆಯಲ್ಲಿ ಬಾಡಿಗೆ ವಿಮಾನಗಳಲ್ಲಿ ಅವನ್ನು ಸಾಗಿಸಲಾಗುತ್ತಿತ್ತು. ಹಾಗಾಗಿ ಇದು ತನಿಖಾ ಸಂಸ್ಥೆಯ ಗಮನಸೆಳೆಯಿತು ಎಂದು ಎನ್​ಐಎ ಅಧಿಕಾರಿಗಳು ತಿಳಿಸಿದ್ದಾರೆ.

    ಬೆಂಗಳೂರಿನಿನಲ್ಲಿ ಶನಿವಾರ ರಾತ್ರಿ ಬಂಧಿತರಾಗಿರುವ ಕೇರಳದ ಐಟಿ ಇಲಾಖೆಯ ಅಧಿಕಾರಿ ಹಾಗೂ ಯುಎಇ ರಾಯಭಾರ ಕಚೇರಿಯ ಮಾಜಿ ಉದ್ಯೋಗಿ ಸ್ವಪ್ನಾ ಸುರೇಶ್​ ಸೇರಿ ನಾಲ್ವರ ವಿರುದ್ಧ ಯುಎಪಿಎ ಕಾಯ್ದೆ ಹಾಗೂ ಭಯೋತ್ಪಾದನಾ ಕಾಯ್ದೆಯಡಿ, ಹಿಂಸಾ ಕೃತ್ಯಗಳ ಸಂಚು ರೂಪಿಸಿ, ಅವನ್ನು ಸಾಕಾರಗೊಳಿಸಲು ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಲ್ಲದೆ, ತನ್ಮೂಲಕ ರಾಷ್ಟ್ರದ ಆರ್ಥಿಕ ಭದ್ರತೆ ಮತ್ತು ಹಣಕಾಸು ಸ್ಥಿರತೆಗೆ ಧಕ್ಕೆಯನ್ನುಂಟು ಮಾಡುವ ಆರೋಪಗಳನ್ನೂ ಎಫ್​ಐಆರ್​ನಲ್ಲಿ ಹೊರಿಸಲಾಗಿದೆ.


    https://www.vijayavani.net/rgvs-corona-virus-movie-heroine-dakkshi-guttikonda/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts