More

    ಪ್ರತಿಯೊಂದು ಸಮಸ್ಯೆಗೂ ನಿದ್ರೆಯೇ ಮದ್ದು! ಈ ಸಲಹೆಗಳನ್ನು ಪಾಲಿಸಿ ನಿದ್ರಾಹೀನತೆಗೆ ಗುಡ್​ಬೈ ಹೇಳಿ

    ನಿದ್ದೆಯೊಂದು ಪ್ರತಿಯೊಂದು ಸಮಸ್ಯೆಗೂ ಪರಿಹಾರವೆ ಸರಿ. ದಿನವಿಡಿ ಆಯಾಸ ಮಾಡಿಕೊಂಡಿರುವ ಮನಸ್ಸು ಮತ್ತು ಕಣ್ಣುಗಳಿಗೆ ಆರರಿಂದ ಏಳು ಗಂಟೆಗಳ ಕಾಲ ವಿಶ್ರಾಂತಿ ಒದಗಿದರೆ ಎಲ್ಲ ತರಹದ ನೋವುಗಳನ್ನು ಮರೆಸಿ ಜಾದುವನ್ನು ಮಾಡುವ ಮಾಯಾಲೋಕವೇ ಸರಿ. ಲೋಕದ ರೂಢಿಯಲ್ಲಿ ‘ನಿದ್ದೆ ಒಮ್ಮೆ ಬಂದರೆ ಎಲ್ಲವನ್ನು ಮರೆಸುತ್ತೆ, ಬರದಿದ್ದರೆ ಎಲ್ಲವನ್ನು ನೆನಪಿಸುತ್ತದೆ’ ಎಂಬ ಮಾತು ನೂರಕ್ಕೆ ನೂರು ಸತ್ಯವಾದ ಮಾತುವಾಗಿದೆ.

    ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿಗೆ ಬಿದ್ದಿರುವ ದೇಶಗಳಲ್ಲಿ ನಿದ್ದೆ ಮಾಯವಾಗುತ್ತಿದೆ. ಇದರಿಂದಾಗಿ ನಿದ್ರಾಹೀನತೆ ಸಮಸ್ಯೆಯು ಎದ್ದು ಕಾಣಿಸುತ್ತಿದೆ. ಮೊದಲೆಲ್ಲಾ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಸಮಸ್ಯೆ ಇಂದು 18 ರಿಂದ 35ನೇ ವಯಸ್ಸಿಗರಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಸರಿಯಾದ ಸಮಯದಲ್ಲಿ ಮನುಷ್ಯನ ದೇಹಕ್ಕೆ ಬೇಕಾಗಿರುವಷ್ಟು ನಿದ್ದೆ ಮಾಡದೇ ಹೋದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳು ಬೀರುತ್ತವೆ.

    ನಿದ್ರಾಹೀನತೆಯಿಂದ ಮಾನಸಿಕ ಖಿನ್ನತೆ, ರಕ್ತದ ಒತ್ತಡ, ಬೊಜ್ಜು ಮತ್ತಿತರ ಸಮಸ್ಯೆ ಕಾಣಿಸಿಕೊಳ್ಳಬಹುದು. ಅದಕ್ಕಾಗಿ ನಿದ್ರಾಹೀನತೆ ಉಂಟಾಗದಂತೆ ನಮ್ಮ ಜೀವನಶೈಲಿಯನ್ನು ರೂಪಿಸಿಕೊಳ್ಳುವುದು ತುಂಬಾ ಮುಖ್ಯ. ಸತತವಾಗಿ ನಿದ್ರೆಯಲ್ಲಿ ಕೊರತೆಗಳು ಕಾಣಿಸಿಕೊಂಡಾಗ ನಿದ್ರಾ ಮಂಪರಿನ ಸ್ಥಿತಿ, ಶಕ್ತಿಯ ಕೊರತೆ, ಇರಿಸುಮುರಿಸು ಮತ್ತು ಕೆಲವೊಮ್ಮೆ ಖಿನ್ನತೆ ಉಂಟಾಗಬಹುದು. ನಿದ್ರಾಹೀನತೆ ಅಲ್ಪಕಾಲಿಕ, ದೀರ್ಘಕಾಲೀಕವಾಗಿ ಕಾಡಬಹುದು. ಒತ್ತಡ, ಎದೆಯುರಿ, ಋತುಬಂಧ, ಔಷಧಗಳು, ಮದ್ಯಪಾನ ಅಥವಾ ಬೇರೆ ಮಾದಕವಸ್ತುಗಳ ಪರಿಣಾಮ, ಅನಿಗದಿತ ರೀತಿಯ ನಿದ್ರಾ ಅಭ್ಯಾಸಗಳು ಅಥವಾ ಅನಿಯಮಿತ ಕೆಲಸದ ಗಂಟೆಗಳು ಇದಕ್ಕೆ ಕಾರಣವಾಗುತ್ತದೆ.

    ನಿದ್ರಾಹೀನತೆಯಿಂದಾಗಿ ವಯಸ್ಸಾದ ಸಂದರ್ಭದಲ್ಲಿ ಪುರುಷರಿಗಿಂತಲೂ ಮಹಿಳೆಯರು ಈ ಸಮಸ್ಯೆಯನ್ನು ಅತಿ ಹೆಚ್ಚಾಗಿ ಅನುಭವಿಸುತ್ತಾರೆಂದು ನಾವು ತಿಳಿಯಬಹುದು. ಹಾಗಾದರೆ ನಿದ್ರೆಗಾಗಿ ನಾವು ಯಾವ ತರಹದ ಕ್ರಮವನ್ನು ಪಾಲಿಸಿಕೊಳ್ಳಬೇಕೆಂದು ತಿಳಿದುಕೊಳ್ಳುವುದು ಅಗತ್ಯ.

    ನಿದ್ರಾಹೀನತೆಗೆ ಹೇಳಿ ಗುಡ್​ಬೈ
    * ರಾತ್ರಿ ವೇಳೆಯ ಆಹಾರ ಸೇವನೆ ಹಿತ-ಮಿತವಾಗಿರ ಬೇಕು.
    * ಮೊಬೈಲ್​,ಟಿವಿ ಜತೆಗೆ ಸಮಯವನ್ನು ವ್ಯರ್ಥವನ್ನು ಮಾಡಬಾರದು.
    * ಮಲಗುವುದಕ್ಕೂ ಎರಡು ಗಂಟೆಗಳಿಗೂ ಮುನ್ನ ಆಹಾರ ಸೇವನೆ ಮಾಡುವುದು ಉತ್ತಮ.
    * ಜಂಕ ಪುಡ್ಸ್​ಗಳಿಗೆ ವಿರಾಮ ಹಾಕಬೇಕು.
    * ಬೆಳಕು ಇದ್ದರೆ ನಿದ್ರೆ ಬರುವುದು ಕಡಿಮೆ ಅದಕ್ಕಾಗಿ ಲೈಟ್ಸ್​ ಆಫ್​ ಆಗಬೇಕು.
    * ಮಲಗುವಾಗ ಸಡಿಲವಾದ ಬಟ್ಟೆ ಧರಿಸಬೇಕು.
    * ಯೋಗ, ದೈಹಿಕ ಶ್ರಮ ನಿದ್ದೆಗೆ ಸಹಾಯಕವಾಗುತ್ತವೆ.
    * ಹಗಲಿನಲ್ಲಿ ನಿದ್ದೆಗೆ ಜಾರುವ ಅಭ್ಯಾಸ ಒಳ್ಳೆಯದಲ್ಲ.
    * ಮಲಗುವಾಗ ಯಾವುದೇ ತರಹದ ಧೂಮಪಾನ ಹಾಗೂ ಮದ್ಯಪಾನ ಮಾಡುವುದು ಯೋಗ್ಯಕರವಲ್ಲ.
    * ದಿನ ರಾತ್ರಿ ಮಲಗುವ ಮುನ್ನ ಒಂದು ಬಾಳೆ ಹಣ್ಣಿಗೆ ಒಂದು ಟೀ ಸ್ಪೂನ್ ​ಜೀರಿಗೆ ಪೌಡರ್​ ಬೆರಸಿ ತಿನ್ನುವುದರಿಂದ ಎಲ್ಲ ವಯಸ್ಕರು ನಿದ್ರಾಹೀನತೆಯಿಂದ ಮುಕ್ತಗೊಳ್ಳುವರು.
    * ಮಲಗುವಾಗ ಒಂದು ಲೋಟ ಹಾಲು ಸೇವನೆ ಉತ್ತಮ. ಹಾಲಿನಲ್ಲಿ ನಮ್ಮ ದೇಹವನ್ನು ವಿಶ್ರಾಂತಗೊಳಿಸುವ ಮತ್ತು ನಿದ್ರೆಯನ್ನು ಬರಿಸುವ ಎರಡು ಅಂಶಗಳು ಇರುತ್ತವೆ. ಮೆಲಟೋನಿನ್ ಹಾರ್ಮೋನ್ ಮತ್ತು ಅಮೈನೋ ಆಮ್ಲ ಟ್ರಿಪ್ತೋಫನ್ ಒಳಗೊಂಡಿರುವುದರಿಂದ ನಿದ್ರೆಗೆ ಸಹಾಯಕವಾಗಿದೆ.
    * ಧ್ಯಾನವು ನಿದ್ರಾ ಹೀನ್ನತೆ ಸಮಸ್ಯೆಗೆ ಒಳ್ಳೆಯ ಪರಿಹಾರವಾಗಿದೆ. ಧ್ಯಾನದಿಂದ ನಿದ್ರಾವಧಿ ಹೆಚ್ಚಾಗುವುದರ ಜೊತೆಗೆ ನಿದ್ರೆಯ ಗುಣಮಟ್ಟ ಕೂಡ ಹೆಚ್ಚಾಗಿ ರಾತ್ರಿಯ ಸಮಯದಲ್ಲಿ ಆಗಾಗ ಎಚ್ಚರಗೊಳ್ಳುವುದು ತಪ್ಪುತ್ತದೆ. ಅದು ಅಲ್ಲದೆ ಧ್ಯಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಎಂದಿಗೂ ಉಂಟಾಗುವುದಿಲ್ಲ.

    ರಾತ್ರಿ ಮಲಗುವ ಮುನ್ನ ಈ 5 ಕೆಲಸ ಮಾಡಿದ್ರೆ ಒಂದೇ ವಾರದಲ್ಲಿ ನಿಮ್ಮ ತೂಕ ಕಡಿಮೆಯಾಗುತ್ತದೆ…..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts