More

    ಕುತ್ತಿಗೆಗೆ ಬಲ ನೀಡುವ ಸ್ಕಂದಾಸನ; ಜೀರ್ಣಶಕ್ತಿ ಹೆಚ್ಚಿಸಲು ಇದು ಸಹಕಾರಿ!

    ಸ್ಕಂದ ದೇವರ ಹೆಸರಿರುವ ಸ್ಕಂದಾಸನವು ಕತ್ತಿನ ಭಾಗಕ್ಕೆ ಬಲ ನೀಡುವ ಯೋಗಾಸನವಾಗಿದೆ. ಹೊಟ್ಟೆಯ ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ.

    ಪ್ರಯೋಜನಗಳು: ಕತ್ತು ಮತ್ತು ಬೆನ್ನು ಬಲಗೊಳ್ಳುತ್ತವೆ. ತೊಡೆಗಳ ಮಾಂಸಖಂಡಗಳು ಪಳಗುತ್ತವೆ. ಕಿಬ್ಬೊಟ್ಟೆಯ ಮಾಂಸಖಂಡಗಳು ಕೂಡ ಹೆಚ್ಚು ಉತ್ತೇಜಿತಗೊಂಡು ಬಲ ಪಡೆಯುತ್ತವೆ. ಜೀರ್ಣಶಕ್ತಿ ಹೆಚ್ಚುತ್ತದೆ.

    ಇದನ್ನೂ ಓದಿ: ಇದು ವಿಧಾನಸಭೆಯೋ.. ಪಾರ್ಲಿಮೆಂಟೋ..? ಸದನದಲ್ಲಿ ಸಿದ್ದರಾಮಯ್ಯಗೆ ಮಾಧುಸ್ವಾಮಿ ಪ್ರಶ್ನೆ!

    ಅಭ್ಯಾಸ ಕ್ರಮ: ಜಮಖಾನದ ಮೇಲೆ ದಂಡಾಸನದಲ್ಲಿ ಕುಳಿತುಕೊಳ್ಳಬೇಕು. ಎರಡೂ ಕೈಗಳಿಂದ ಬಲಗಾಲನ್ನು ಹಿಡಿದು ಮೇಲೆತ್ತಿ ತಲೆಯ ಹಿಂದಕ್ಕೆ ತಂದು ಕುತ್ತಿಗೆಯ ಮೇಲೆ ಇರಿಸಬೇಕು. ಉಸಿರನ್ನು ತೆಗೆದುಕೊಳ್ಳುತ್ತಾ ಎರಡೂ ಕೈಗಳನ್ನೂ ನೇರವಾಗಿಸಿ, ಉಸಿರನ್ನು ಬಿಡುತ್ತಾ, ಮುಂದಕ್ಕೆ ಬಾಗಬೇಕು. ಕೈಬೆರಳುಗಳಿಂದ ಎಡಗಾಲಿನ ಪಾದದ ಮುಂಭಾಗವನ್ನು ಹಿಡಿದುಕೊಂಡು, ಗಲ್ಲ ಮತ್ತು ಹಣೆಯನ್ನು ಮಂಡಿಗೆ ಸ್ಪರ್ಶಿಸಬೇಕು. ಕಣ್ಣು ಮುಚ್ಚಿಕೊಂಡು ಸ್ವಲ್ಪ ಹೊತ್ತು ಈ ಭಂಗಿಯಲ್ಲಿ ಸಹಜ ಉಸಿರಾಟ ನಡೆಸಬೇಕು. ಆಮೇಲೆ ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಮೇಲಕ್ಕೆ ಬರಬೇಕು. ಕಾಲನ್ನು ವಾಪಸ್​ ಚಾಚಬೇಕು. ಪುನಃ ಮತ್ತೊಂದು ಪಾರ್ಶ್ವಕ್ಕೆ, ಅಂದರೆ ಎಡಗಾಲನ್ನು ತಲೆಯ ಹಿಂದಕ್ಕೆ ಮಡಿಸಿ ಇದೇ ರೀತಿಯಲ್ಲಿ ಅಭ್ಯಾಸ ಮಾಡಬೇಕು.

    ಕ್ಲಿಷ್ಟಕರವಾದ ಈ ಆಸನವನ್ನು ಗುರುಮುಖೇನ ಹೆಚ್ಚಿನ ಸಲಹೆ ಮತ್ತು ಮಾರ್ಗದರ್ಶನ ಪಡೆದು ಅಭ್ಯಾಸ ಮಾಡುವುದು ಒಳ್ಳೆಯದು. ಎಳೆಯ ವಯಸ್ಸಿನಲ್ಲೇ ಕಲಿತು ಮಾಡುವುದು ಉತ್ತಮ. ತುಂಬಾ ಸೊಂಟ ನೋವು, ಕುತ್ತಿಗೆ ನೋವು ಇರುವವರು ಅಥವಾ ಆಗಾಗ ಬೆನ್ನು ನೋವು ಕಾಡುವವರು ಸ್ಕಂದಾಸನ ಮಾಡಬಾರದು.

    ಎರಡು ತಿಂಗಳಲ್ಲಿ ಕಸಾಪ ಚುನಾವಣೆ ನಡೆಸಲು ಹೈಕೋರ್ಟ್​ ಆದೇಶ

    ದೇಹದ ಸಮತೋಲನ, ಏಕಾಗ್ರತೆ ಹೆಚ್ಚಿಸುವ ಊರ್ಧ್ವ ಕುಕ್ಕುಟಾಸನ; ಇದೊಂದು ಚ್ಯಾಲೆಂಜಿಂಗ್ ಪೋಸ್!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts