More

    ಸದ್ಗುಣ ಅಳವಡಿಸಿಕೊಂಡರೆ ಮಾತ್ರ ಬದುಕು ಉಜ್ವಲ; ಬಿ.ಆರ್. ಡಮ್ಮಳ್ಳಿ

    ರಾಣೆಬೆನ್ನೂರ: ರಾಷ್ಟ್ರದ ಸಬಲೀಕರಣದಲ್ಲಿ ಯುವ ಸಮೂಹದ ಪಾತ್ರವು ಪ್ರಮುಖವಾಗಿದೆ. ಸ್ವಾಮಿ ವಿವೇಕಾನಂದರ ಜೀವನ ಹಾಗೂ ತಾತ್ವಿಕ ಮೌಲ್ಯಗಳ ಪ್ರಭಾವವು ಇಂದಿನ ಯುವ ಪೀಳಿಗೆಗೆ ಅಗತ್ಯವಾಗಿದ್ದು, ಅಂತಹ ಉಪಯುಕ್ತ ಸದ್ಗುಣ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳ ಬದುಕು ಉಜ್ವಲಗೊಳ್ಳಲು ಸಾಧ್ಯ ಎಂದು ಉಪನ್ಯಾಸಕ ಬಿ.ಆರ್. ಡಮ್ಮಳ್ಳಿ ಹೇಳಿದರು.
    ನಗರದ ಎಸ್‌ಜೆಎಂವಿ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಶನಿವಾರ ಏರ್ಪಡಿಸಿದ್ದ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಭವ್ಯ ಭಾರತದ ಪರಂಪರೆ ಹಾಗೂ ಸಂಸ್ಕೃತಿಯ ಬೆಳವಣಿಗೆಯಲ್ಲಿ ವಿವೇಕಾನಂದರ ತಾತ್ವಿಕ ವಿಚಾರಗಳ ಪ್ರಭಾವವು ಪ್ರಮುಖವಾಗಿದೆ. ಭಾರತದಲ್ಲಿನ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವಿಚಾರಗಳನ್ನು ವಿಶ್ವಕ್ಕೆ ತಿಳಿಸುವ ಮೂಲಕ ಸಮಾನ ಹಾಗೂ ಸಾಮರಸ್ಯದ ಜೀವನಕ್ಕೆ ಅಡಿಪಾಯ ಹಾಕಿದ್ದಾರೆ ಎಂದರು.
    ವಿದ್ಯಾರ್ಥಿ ಒಕ್ಕೂಟದ ಮುಖ್ಯಸ್ಥ ಡಾ. ಎಂ. ರಾಜಶೇಖರಪ್ಪ, ಪ್ರಮುಖರಾದ ಕೆ. ಶಿವರಾಜಕುಮಾರ, ವಿ.ಡಿ. ಕಟ್ಟಿಮನಿ, ಶ್ರೀಕಾಂತ ಸುತಾರ, ಗಂಗಮ್ಮ ಅಗಸನಹಳ್ಳಿ, ನಾಗರತ್ನ ಪುಗಟಿ, ಅಶ್ವಿನಿ ಲಮಾಣಿ, ಮಮತಾ ಮುದಿಗೌಡರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts