More

    ಶಾರ್ಜಾದ ಐಪಿಎಲ್ ಪಂದ್ಯಗಳಲ್ಲಿ ಯಾಕೆ ಸಿಕ್ಸರ್ ಸುರಿಮಳೆಯಾಗುತ್ತಿದೆ ಗೊತ್ತೇ?

    ಬೆಂಗಳೂರು: ಅರಬ್ ರಾಷ್ಟ್ರದಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯ ಅಬುಧಾಬಿ ಮತ್ತು ದುಬೈ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡುತ್ತಿದ್ದರೆ, ಅತ್ತ ಶಾರ್ಜಾದಲ್ಲಿ ರನ್ ಮತ್ತು ಸಿಕ್ಸರ್‌ಗಳ ಪ್ರವಾಹವೇ ಹರಿಯುತ್ತಿದೆ. ಶಾರ್ಜಾದಲ್ಲಿ ಇದುವರೆಗೆ ನಡೆದಿರುವುದು ಎರಡೇ ಪಂದ್ಯಗಳು. ಆದರೆ ಈ 4 ಇನಿಂಗ್ಸ್‌ಗಳಲ್ಲೇ ಒಟ್ಟು 865 ರನ್‌ಗಳು ಸಿಡಿದಿವೆ. ಅಂದರೆ ಪ್ರತಿ ಓವರ್‌ಗೆ 10.88 ರನ್ ಬಂದಿವೆ!

    ಇವೆರಡು ಪಂದ್ಯಗಳಲ್ಲಿ ಒಟ್ಟು 62 ಸಿಕ್ಸರ್ ಸಿಡಿದಿವೆ. ಅಂದರೆ ಪ್ರತಿ 8 ಎಸೆತಕ್ಕೊಂದು ಸಿಕ್ಸರ್ ಬಂದಿದೆ! ಅತ್ತ ಅಬುಧಾಬಿ ಮತ್ತು ದುಬೈನಲ್ಲಿ ಭಾನುವಾರದವರೆಗೆ ನಡೆದಿರುವ ಒಟ್ಟು 7 ಪಂದ್ಯಗಳಲ್ಲಿ ಸಿಡಿದಿರುವ ಒಟ್ಟು ಸಿಕ್ಸರ್‌ಗಳು 55. ಈ ಪೈಕಿ ದುಬೈನ 4 ಪಂದ್ಯಗಳಲ್ಲಿ 32 ಸಿಕ್ಸರ್ ಬಂದಿದ್ದು, ಪ್ರತಿ 29 ಸಿಕ್ಸರ್ ಸಿಡಿದಿದೆ. ಅಬುಧಾಬಿಯ 3 ಪಂದ್ಯಗಳಲ್ಲಿ 33 ಸಿಕ್ಸರ್ ಬಂದಿದ್ದು, ಪ್ರತಿ 21 ಎಸೆತಕ್ಕೊಂದು ಸಿಕ್ಸರ್ ಸಿಡಿದಿದೆ. ಹಾಗಾದರೇ ಶಾರ್ಜಾದಲ್ಲಿ ಆ ಪ್ರಮಾಣದಲ್ಲಿ ರನ್, ಸಿಕ್ಸರ್ ಪ್ರವಾಹ ಹರಿಯಲು ಕಾರಣವೇನು ಗೊತ್ತೇ?

    ಶಾರ್ಜಾದ ಪಿಚ್ ವೇಗದ ಬೌಲರ್‌ಗಳಿಗೆ ಯಾವ ನೆರವನ್ನೂ ನೀಡುತ್ತಿಲ್ಲ. ಆದರೆ ಅತ್ತ ಅಬುಧಾಬಿ ಮತ್ತು ದುಬೈನಲ್ಲಿ ಸಣ್ಣದಾಗಿ ಹುಲ್ಲು ಬೆಳೆದಿರುವ ಪಿಚ್‌ಗಳು ವೇಗಿಗಳಿಗೆ ಸ್ವಲ್ಪಮಟ್ಟಿಗೆ ನೆರವು ನೀಡುತ್ತಿವೆ. ಇದು ಶಾರ್ಜಾದ ಮೈದಾನ ಸಣ್ಣದಾಗಿರುವುದು ಕೂಡ ಬ್ಯಾಟ್ಸ್‌ಮನ್‌ಗಳಿಗೆ ಸಿಕ್ಸರ್ ಸಿಡಿಸಲು ಸಹಾಯಕವೆನಿಸಿದೆ.

    ಇದನ್ನೂ ಓದಿ:  ವಿಲನ್‌ನಿಂದ ಹೀರೋ ಆದ ತೆವಾಟಿಯಾ, ಟ್ವಿಟರ್‌ನಲ್ಲಿ ನಗುವಿನ ಸಿಕ್ಸರ್​ ಸಿಡಿಸಿದ ಮೀಮ್ಸ್​!

    ಅಬುಧಾಬಿಯಲ್ಲಿ ಸ್ಟ್ರೈಟ್ ಬೌಂಡರಿಯ ದೂರ 77 ಮೀಟರ್ ಆಗಿದ್ದರೆ, ಶಾರ್ಜಾದಲ್ಲಿ ಇದು 73 ಮೀಟರ್ ಮಾತ್ರ ಇದೆ. ಇನ್ನು ಅಬುಧಾಬಿಯ ಲಾಂಗ್ ಆಫ್​ ಮತ್ತು ಲಾಂಗ್ ಆನ್ ಬೌಂಡರಿಗಳು ಕ್ರಮವಾಗಿ 74 ಮತ್ತು 77 ಮೀಟರ್‌ಗಳಿದ್ದರೆ, ಶಾರ್ಜಾದಲ್ಲಿ ಕ್ರಮವಾಗಿ 71 ಮತ್ತು 65 ಮೀಟರ್‌ಗಳಿವೆ. ಅಬುಧಾಬಿಯಲ್ಲಿ ಸ್ಕ್ವೇರ್ ಬೌಂಡರಿ 65 ಮತ್ತು 73 ಮೀಟರ್ ಇದ್ದರೆ, ಶಾರ್ಜಾದಲ್ಲಿ 60 ಮತ್ತು 61 ಮೀಟರ್ ಮಾತ್ರ ಇವೆ. ಥರ್ಡ್ ಮ್ಯಾನ್ ಮತ್ತು ಫೈನ್ ಲೆಗ್ ಬೌಂಡರಿಗಳು ಅಬುಧಾಬಿಯಲ್ಲಿ 59 ಮತ್ತು 64 ಮೀಟರ್‌ಗಳಿವೆ. ಅದೇ ಶಾರ್ಜಾದಲ್ಲಿ 58 ಮತ್ತು 55 ಮೀಟರ್‌ಗಳಿವೆ. ಹೀಗಾಗಿ ಶಾರ್ಜಾದಲ್ಲಿ ಚೆಂಡನ್ನು ಸಿಕ್ಸರ್‌ಗೆ ಅಟ್ಟುವುದು ಸುಲಭವೆನಿಸಿದೆ.

    ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನಲ್‌ನ ತುಳು ಟ್ವೀಟ್ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts