More

    ಈ ಶುಕ್ರವಾರ ಹೊಸಬರದ್ದೇ ಪಾರುಪತ್ಯ; ಆರು ಚಿತ್ರಗಳ ಬಿಡುಗಡೆ …

    ಬೆಂಗಳೂರು: ಕಳೆದ ಒಂದು ತಿಂಗಳಲ್ಲಿ ವಾರಕ್ಕೆ ನಾಲ್ಕೈದು ಚಿತ್ರಗಳು ಬಿಡುಗಡೆಯಾಗುವುದು ಮಾಮೂಲಿಯಾಗಿಬಿಟ್ಟಿದೆ. ಕಳೆದ ವಾರ ಮೂರು ಚಿತ್ರಗಳು ಬಿಡುಗಡೆಯಾಗಿದ್ದವು. ಈಗ ಪುನಃ ಈ ಶುಕ್ರವಾರ (ಡಿ.2) ಆರು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇದು ಸದ್ಯಕ್ಕೆ ಸಿಕ್ಕಿರುವ ಲೆಕ್ಕ ಅಷ್ಟೇ. ಈ ಸಂಖ್ಯೆಯಲ್ಲಿ ಹೆಚ್ಚಳ ಆದರೆ, ಅದರಲ್ಲಿ ಆಶ್ಚರ್ಯವೇನೂ ಇಲ್ಲ.

    ಇದನ್ನೂ ಓದಿ: ಯುವ ರೈತನ ಜತೆ ಸಪ್ತಪದಿ ತುಳಿದ ಅದಿತಿ ಪ್ರಭುದೇವ: ನವಜೋಡಿಗೆ ಶುಭಕೋರಿದ ಗಣ್ಯರು

    ಅಂದಹಾಗೆ, ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳ ಪೈಕಿ ‘ವಾಸಂತಿ ನಲಿದಾಗ’, ‘2ನೇ ಲೈಫ್​’, ‘ಧರಣಿ ಮಂಡಲ ಮಧ್ಯದೊಳಗೆ’, ‘ನೆನಪು ಮರುಕಳಿಸಿದಾಗ’, ‘ಫ್ಲಾಟ್​ ನಂಬರ್​ 9’ ಮತ್ತು ‘ತಿಮ್ಮಯ್ಯ ಆಂಡ್​ ತಿಮ್ಮಯ್ಯ’ ಚಿತ್ರಗಳು ಸೇರಿವೆ.

    ಈ ಪೈಕಿ, ಬಿಗ್​ ಬಜೆಟ್​ ಅಥವಾ ಬಹು ನಿರೀಕ್ಷಿತ ಚಿತ್ರಗಳು ಎಂಬ ಚಿತ್ರಗಳು ಯಾವುದೂ ಇಲ್ಲ. ಇದ್ದುದರಲ್ಲೇ ‘ತಿಮ್ಮಯ್ಯ ಅಂಡ್​ ತಿಮ್ಮಯ್ಯ’ ಮತ್ತು ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರಗಳ ಬಗ್ಗೆ ಸ್ವಲ್ಪ ನಿರೀಕ್ಷೆ ಇರಬಹುದು. ‘ತಿಮ್ಮಯ್ಯ ಅಂಡ್​ ತಿಮ್ಮಯ್ಯ’ ಚಿತ್ರದಲ್ಲಿ ಅನಂತ್​ ನಾಗ್​ ಮತ್ತು ದಿಗಂತ್​ ತಾತ-ಮೊಮ್ಮಗನಾಗಿ ಮೊದಲ ಬಾರಿಗೆ ಅಭಿನಯಿಸಿದ್ದು, ಇದು ಅವರಿಬ್ಬನ ನಡುವಿನ ಸೆಂಟಿಮಂಎಟಲ್​ ಮತ್ತು ಕಾಮಿಡಿ ಚಿತ್ರವಾಗಿದೆ. ಇನ್ನು, ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದಲ್ಲಿ ‘ಗುಳ್ಟೂ’ ನವೀನ್​ ನಟಿಸಿದ್ದು, ಆ ಚಿತ್ರ ಬಿಡುಗಡೆಯಾಗಿ ನಾಲ್ಕು ವರ್ಷಗಳ ನಂತರ ಬಿಡುಗಡೆಯಾಗುತ್ತಿರುವ ಅವರ ಚಿತ್ರವಾಗಿದೆ. ನವೀನ್​ಗೆ ನಾಯಕಿಯಾಗಿ ಐಶಾನಿ ಶೆಟ್ಟಿ ನಟಿಸಿದ್ದಾರೆ.

    ಮಿಕ್ಕಂತೆ ‘ವಾಸಂತಿ ನಲಿದಾಗ’, ‘2ನೇ ಲೈಫ್​’, ‘ನೆನಪು ಮರುಕಳಿಸಿದಾಗ’ ಮತ್ತು ‘ಫ್ಲಾಟ್​ ನಂಬರ್​ 9’ ಚಿತ್ರಗಳಲ್ಲಿ ಹೊಸ ನಾಯಕ-ನಾಯಕಿಯರು ನಟಿಸಿದ್ದಾರೆ. ಅವರೆಲ್ಲರೂ ಹೊಸ ಮುಖಗಳಾಗಿದ್ದು, ತಮ್ಮ ಮೊದಲ ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟೇ ಪರಿಚಯವಾಗಿದೆ.

    ಇದನ್ನೂ ಓದಿ: ‘ಟಗರು ಪಲ್ಯ’ ಚಿತ್ರಕ್ಕೆ ‘ನೆನಪಿರಲಿ’ ಪ್ರೇಮ್​ ಮಗಳು ಅಮೃತಾ ನಾಯಕಿ

    ಮೊದಲೇ ಹೇಳಿದಂತೆ, ಸದ್ಯಕ್ಕೆ ಆರು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಈಗಿನ ಶುಕ್ರವಾರ ಅಷ್ಟೇ. ಶುಕ್ರವಾರಕ್ಕೆ ಇನ್ನೂ ಮೂರು ದಿನಗಳಿದ್ದು, ಈ ಮೂರು ದಿನಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾದರೆ ಅಥವಾ ಕಡಿಮೆಯಾದರೆ ಹೇಳುವುದು ಕಷ್ಟ.

    ರಾಣ ಅಬ್ಬರಿಸಲಿಲ್ಲ; ದಿಲ್​ ಪಸಂದ್​ ರುಚಿಸಲಿಲ್ಲ … ನವೆಂಬರ್​ ಚಿತ್ರಗಳ ಹಣೆಬರಹ ಇದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts