More

    ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದ ಸೇನಾಪಡೆ ಮುಖ್ಯಸ್ಥ

    ನವದೆಹಲಿ: ಲಡಾಖ್​ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ನಡುವೆ ಮಾತುಕತೆ ಜಾರಿಯಲ್ಲಿದೆ. ಸದ್ಯ ಅಲ್ಲಿನ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸೇನಾಪಡೆ ಮುಖ್ಯಸ್ಥ ಜನರಲ್​ ಮನೋಜ್​ ಮುಕುಂದ್​ ನರವಾನೆ ಹೇಳಿದ್ದಾರೆ.

    ಶನಿವಾರ ಈ ಬಗ್ಗೆ ಮಾಹಿತಿ ನೀಡಿರುವ ಅವರು ಚೀನಾದೊಂದಿಗಿನ ಉನ್ನತ ಮಟ್ಟದ ನಿಯೋಗದ ಮಾತುಕತೆಯ ಬಳಿಕ ಸ್ಥಳೀಯ ಮಟ್ಟದಲ್ಲಿ ಸ್ಥಳೀಯ ಕಮಾಂಡರ್​ಗಳ ನೇತೃತ್ವದಲ್ಲಿ ಇನ್ನೊಂದು ಹಂತದ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದರು.

    ಇದನ್ನೂ ಓದಿ: ಲಡಾಖ್​ ಬಿಕ್ಕಟ್ಟನ್ನು ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿಗೆ ತಳಕು ಹಾಕಿದ ಚೀನಾ

    ನಿರಂತರವಾಗಿ ನಡೆಯುತ್ತಿರುವ ಮಾತುಕತೆ ಮೂಲಕ ನಮ್ಮೆರಡು ರಾಷ್ಟ್ರಗಳ ನಡುವೆ ಮೂಡಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿದೆ. ಸದ್ಯದ ಮಟ್ಟಿಗೆ ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಪುನರುಚ್ಚರಿಸಿದರು.

    ಲಡಾಖ್​ನ ಪೂರ್ವ ಭಾಗದಲ್ಲಿ ಉಭಯ ರಾಷ್ಟ್ರಗಳ ಮೇಜರ್​ ಜನರಲ್​ ಮಟ್ಟದ ಮಿಲಿಟರಿ ಅಧಿಕಾರಿಗಳ ನಡುವೆ ಶುಕ್ರವಾರ ನಡೆದ ಸಭೆಯ ಮರುದಿನ ಸೇನಾಪಡೆ ಮುಖ್ಯಸ್ಥರು ಈ ಪ್ರತಿಕ್ರಿಯೆ ನೀಡಿದ್ದಾರೆ. ಮೇ 5-6ರ ರಾತ್ರಿಯಲ್ಲಿ ಪ್ಯಾಂಗಾಂಗ್​ ತ್ಸೊ ಬಳಿಯಲ್ಲಿ ಪಹರೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಚೀನಿ ಯೋಧರು ಭಾರತೀಯ ಯೋಧರ ಮೇಲೆ ಮುಳ್ಳುತಂತಿ ಸುತ್ತಿದ್ದ ಬಡಿಗೆಯಿಂದ ಹಲ್ಲೆ ಮಾಡಿದ್ದರು. ಇದು ಲಡಾಖ್​ ಬಿಕ್ಕಟ್ಟಿಗೆ ನಾಂದಿ ಹಾಡಿತ್ತು. ಆನಂತರದಲ್ಲಿ ಬಿಕ್ಕಟ್ಟು ಶಮನಕ್ಕೆ ಉಭಯ ರಾಷ್ಟ್ರಗಳ ಮೇಜರ್​ ಜನರಲ್​ ದರ್ಜೆಯ ಮಿಲಿಟರಿ ಅಧಿಕಾರಿಗಳ ನಡುವೆ ನಡೆದ 5ನೇ ಸುತ್ತಿನ ಮಾತುಕತೆ ಇದಾಗಿತ್ತು.

    ನಾಟಕವಾಗ್ತಿದೆ ಸಂಜಯ್​ ಲೀಲಾ ಬನ್ಸಾಲಿಯ ಬಾಜಿರಾವ್ ಮಸ್ತಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts