More

    ‘ಜ್ವಾಲಾಮುಖಿಯ ಮೇಲೆ ಕುಳಿತಂಥ ಅನುಭವ ಆಗುತ್ತಿದೆ…’ ತಿರುವನಂತಪುರದ ಸ್ಥಿತಿ ನೋಡಿ ಸಚಿವರ ಅಳಲು

    ತಿರುವನಂತಪುರಂ: ಕೇರಳದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಅದರಲ್ಲೂ ತಿರುವನಂತಪುರಂ ಕೊವಿಡ್​-19 ಹಾಟ್​ಸ್ಫಾಟ್​ ಆಗಿ ಬದಲಾಗುತ್ತಿದೆ. ಈ ಬಗ್ಗೆ ಕೇರಳ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್​ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಜ್ವಾಲಾಮುಖಿಯ ಮೇಲೆ ಕುಳಿತಂಥ ಅನುಭವ ಆಗುತ್ತಿದೆ ಎಂದು ಹೇಳಿದ್ದಾರೆ.

    ತಿರುವನಂತಪುರಂದಲ್ಲಿ ಕೊವಿಡ್​-19 ಪರಿಸ್ಥಿತಿ ಹದಗೆಡುತ್ತಿದೆ. ದಿನೇದಿನೇ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಿತರ ಟ್ರೇಸಿಂಗ್​ ಕಾರ್ಯ ತುಂಬ ಜಟಿಲವಾಗಿ ಪರಿಣಮಿಸುತ್ತಿದೆ. ಕೊವಿಡ್​-19 ವಿರುದ್ಧದ ಸೆಣೆಸಾಟ ನಮಗೆ ಜ್ವಾಲಾಮುಖಿಯ ಮೇಲೆ ಕುಳಿತಂಥ ಅನುಭವ ಕೊಡುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಕೇಳಿದಷ್ಟು ಬೆಡ್​​ಗಳನ್ನು ಕೊಟ್ಟಿಲ್ಲ ಖಾಸಗಿ ಆಸ್ಪತ್ರೆಗಳು; ಚಿಕಿತ್ಸೆ ಕೊಡದಿದ್ರೆ ಕ್ರಿಮಿನಲ್​ ಕೇಸ್​ ಎಂದ್ರು ಸಚಿವ ಸುಧಾಕರ್​

    ತಿರುವನಂತಪುರಂನಲ್ಲಿ ಕರೊನಾ ಸಮುದಾಯ ಪ್ರಸರಣ ಶುರುವಾಗಿರಬಹುದು ಎಂಬ ಬಲವಾದ ಅನುಮಾನ ಬಲವಾಗುತ್ತಿದೆ. ಕಂಟೇನ್​ಮೆಂಟ್​ ಝೋನ್​​ಗಳಲ್ಲಿ ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಲ್ಲಿ ಆಹಾರಗಳನ್ನು ಡಿಲೆವರಿ ಕೊಡುವ ಹುಡುಗರಲ್ಲಿಯೂ ಕರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ತರುತ್ತಿದೆ ಎಂದು ಸುರೇಂದ್ರನ್​ ತಿಳಿಸಿದ್ದಾರೆ.

    ಕೇರಳದಲ್ಲಿ ಕರೊನಾ ಸೋಂಕಿತರ ಸಂಖ್ಯೆ 5,429ಕ್ಕೆ ಏರಿದೆ. ತಿರುವನಂತಪುರಂನಲ್ಲಿ ಒಟ್ಟು 260 ಮಂದಿ ಸೋಂಕಿತರು ಇದ್ದಾರೆ. ಆದರೆ 13,513 ಜನರು ಅಬ್ಸರ್ವೇಶನ್​​ನಲ್ಲಿದ್ದು, ಇನ್ನೆಷ್ಟು ಮಂದಿಯಲ್ಲಿ ಸೋಂಕು ಕಾಣಿಸಕೊಳ್ಳುತ್ತದೆಯೇ ಎಂಬ ಆತಂಕ ಜಿಲ್ಲಾಡಳಿತವನ್ನು ಕಾಡುತ್ತಿದೆ. (ಏಜೆನ್ಸೀಸ್​)

    ಹುಬ್ಬಳ್ಳಿಗೆ ಹೋಗಿಬಂದವನಲ್ಲಿ ಕರೊನಾ ಸೋಂಕು: ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನ ಸೀಲ್​ಡೌನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts