More

    ಜಡ, ಆಲಸ್ಯ, ಬಾಗಿದ ಬೆನ್ನು, ಸುಸ್ತು; ಇಡೀ ದಿನ ಕೂತಿರ್ತೀರಾ? 30 ನಿಮಿಷ ಕುಳಿತ್ರೆ ಸಾಕು ದೇಹ ಶೇ.10ರಷ್ಟು ಸ್ಲೋ ಡೌನ್​..! ಹಾಗಿದ್ರೆ ನೀವೂ ಅಪಾಯದಲ್ಲಿದ್ದೀರಾ..!

    ಭಾರತದಲ್ಲಿ ಸರ್ವೆಯ ಪ್ರಕಾರ ಒಬ್ಬ ವ್ಯಕ್ತಿ 10 ಗಂಟೆಗಳ ಕಾಲ ಕುಳಿತುಕೊಂಡೇ ಇರ್ತಾನೆ. ದೇಶಾದ್ಯಂತ ಶೇ. 64 ರಷ್ಟು ಜನರು 9 ಗಂಟೆಗೂ ಅಧಿಕ ಸಮಯ ಕೆಲಸವನ್ನ ಮಾಡ್ತಾರೆ. ಅದರಲ್ಲಿ ಕುಳಿತುಕೊಂಡು ಕೆಲಸ ಮಾಡುವಂತವರ ಸಂಖ್ಯೆಯೇ ಹೆಚ್ಚು.

    ಮಲ್ಕೊಂಡಿದ್ರೆ ಆರಾಮ ಅಥವಾ ಓಡಾಡದೆ ಕುಳಿತುಕೊಂಡಿದ್ರೆ ಆರಾಮ ಅಂತ್ಹೇಳಿ ಸಾಕಷ್ಟು ಜನ ಅಂದುಕೊಂಡಿರ್ತಾರೆ. ಕುಳಿತುಕೊಂಡು ಮೂವಿ ನೋಡೋದು, ಕುಳಿತುಕೊಂಡು ಕೆಲಸ ಮಾಡೋದು, ಕುಳಿತುಕೊಂಡು ಹರಟೆ ಹೊಡೆಯೋದು ಸಾಕಷ್ಟು ಜನರ ಅಭ್ಯಾಸ. ಇದು ನಮ್ಮ ದೇಬಹದ ರಚನೆಗೆ ಒಳ್ಳೆಯದಲ್ಲ ಯಾಕಂದ್ರೆ ಮನುಷ್ಯನ ದೇಹ ರಚನೆಯಾಗಿರೋದೇ ಓಡಾಡಿಕೊಂಡು ಇರೋಕೆ.

    ನಮ್ಮ ದೇಹದಲ್ಲಿ, 640 ಮಸಲ್ಸ್​​, 360 ಜಾಯಿಂಟ್ಸ್​​​, 900 ಲಿಗಮೆಂಟ್ಸ್​​ ಮತ್ತು 209 ಬೋನ್​ಗಳಿವೆ. ನಮ್ಮ ದೇಹ ಚಲನೆಯಲ್ಲಿರಬೇಕೆಂದೇ ಈ ರೀತಿ ರಚನೆಯನ್ನ ಮಾಡಲಾಗಿದೆ. ನಮ್ಮ ದೇಹದ ಪ್ರತೀ ಕಣ ಕಣಗಲೂ ಸಹ ನಾವು ಯಾವಾಗ ಎದ್ದು ಓಡಾಡುತ್ತೇವೆ ಎಂದು ಕಾಯುತ್ತಿರುತ್ತದೆ.

    ಹಾಗಾದ್ರೆ ನಾವು ಕುಳಿತುಕೊಂಡೇ ಇದ್ರೆ ಏನಾಗುತ್ತೆ ಅನ್ನೋದನ್ನ ನೋಡೋದಾದ್ರೆ:
    ನಮ್ಮ ಬೆನ್ನು ಮೂಳೆಯಿಮದ ಶುರು ಮಾಡೋದಾದ್ರೆ, ಬೆನ್ನು ಮೂಳೆಯಲ್ಲಿ 33 ಸಣ್ಣ ಮೂಳೆಗಳ ನಡುವೆ 23 ಕಾರ್ಟಿಲೇಜ್​ ಡಿಸ್ಕ್​ಗಳಿವೆ ಅಂದ್ರೆ ಮಾಂಸವೂ ಅಲ್ಲದ ಭಾಗ. ಜತೆಗೆ ಜಾಯಿಂಟ್ಸ್​​, ಮಸಲ್ಸ್​​ ಮತ್ತು ಲಿಗಮೆಂಟ್ಸ್​​ ಇವೆಲ್ಲವೂ ಸಢೇರಿ ಬೆನ್ನೆಲುಬನ್ನ ಹಿಡಿದಿರುತ್ತೆ. ಆದ್ರೆ ನಾವು ಕೂತಾಗ ಬೆನ್ನು ಮತ್ತು ಭುಜ ಎರಡೂ ಬಾಗಿರುತ್ತೆ. ನಾವು ಈ ರೀತಿ ಕುಳಿತುಕೊಳ್ಳೋದ್ರಿಂದ ಕಾರ್ಟಿಲೇಜ್​ ಡಿಸ್ಕ್​ಗಳು ಸವಿಯೋಕೆ ಶುರುವಾಗುತ್ತೆ.

    ಇನ್ನು ಬಾಗಿ ಕುಳಿತುಕೊಂಡಾಗ ಚೆಸ್ಟ್​​ ಕ್ಯಾವಿಟಿಯೂ(ಎದೆಯ ಭಾಗ) ಕುಗುತ್ತದೆ. ಅದರ ಅರ್ಥ ನಾವು ಉಸಿರಾಡುವಾಗ ನಮಗಮ ಎದೆಯ ಭಾಗಕ್ಕೆ ಎಕ್ಸ್​​​ಪ್ಯಾಂಡ್​​ ಆಗೋಕೆ ಜಾಗವಿರೋದಿಲ್ಲ. ಇದರಿಂದ ನಾವು ಆಮ್ಲಜನಕವನ್ನೂ ಸರಿಯಾಗಿ ತೆಗೆದುಯಕೊಳ್ಳದೇ ಮೇಲಿನಿಂದ ಮೇಲೆ ಉಸಿರಾಡುತ್ತೇವೆ.

    ನಾವು ಕುಳಿತುಕೊಂಡ ನಮ್ಮ ದೇಹದ ಸುತ್ತಲಿರುವ ಸಾಫ್ಟ್​​ ಟಿಶ್ಯೂ ಲೇಯರ್​ ಅಂದ್ರೆ ರಕ್ತನಾಳಗಳು ಕುಗ್ಗುತ್ತವೆ. ನರಗಲೂ ಬ್ಲಾಕ್​ ಆಗುತ್ತೆ ಅದರಿಂದ ನರ್ವ್​ ಸಿಗ್ನಲಿಂಗ್​ ಆಗೋದಿಲ್ಲ. ಇದರಿಂದ ಜೋಮು( numbness) ಹಿಡಿಯುವಂತಹ ಅನುಭವಗಳಾಗುತ್ತೆ. ಇದಕ್ಕೆ ಮರಗಟ್ಟುವುದು ಅಂತಲೂ ಕರೀತಾರೆ. ರಕ್ತ ಸರಿಯಾಗಿ ಪಾಸ್​ ಆಗದೆಯೂ ಈ ರೀತಿ ಆಗುತ್ತದೆ.

    ಇನ್ನು ನಮ್ಮ ದೇಹದಲ್ಲಿ ಕೊಬ್ಬು ಕರಗಿಸುವಂತಹ ಕೆಲಸ ಮಾಡುವ ಲೈಪೋಪ್ರೋಟಿ ಲೈಪೇಸ್​ ಕುಳಿತುಕೊಂಡಾಗ ಕೆಲಸ ಮಾಡೋದಿಲ್ಲ. 30 ನಿಮಿಷ ಕುಳಿತುಕೊಂಡೇ ಇದ್ರೆ ಶೇ. 90ರಷ್ಟು ದೇಹ ಸ್ಲೋ ಆಗಿ ಬಿಡುತ್ತೆ. 2 ಗಂಟೆ ಕುಳಿತುಕೊಂಡಾಗ ಏಕಾಗ್ರತೆಯೂ ಕಡಿಮೆಯಾಗುತ್ತೆ. ಜೀರ್ಣಾಂಗ ವ್ಯವರ್ಸತೆಯೂ ಕು್ಗ್ಇ ಆಹಾರ ಜೀರ್ಣವಾಗೋದಿಲ್ಲ.

    ದೀರ್ಘ ಕಾಲ ಕುಳಿತುಕೊಳ್ಳೋದ್ರಿಂದ TYPE2 ಡಯಾಬಿಟಿಸ್​ ಮತ್ತು ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗ್ತೀರಾ. ಹಾಗಾಗಿ ವ್ಯಾಯಾಮ ಮತ್ತು ವಾಕಿಂಗ್​​ ಮಾಡುತ್ತಲೇ ಇರಿ. ಕೂತಲ್ಲಿಯೇ ಕುಳಿತುಕೊಳ್ಳ ಬೇಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts