More

    ಜಾರಕಿಹೊಳಿ ಸಿಡಿ ಪ್ರಕರಣ: ನರೇಶ್, ಶ್ರವಣ್​ ಸಲ್ಲಿಸಿರುವ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮುಂದಾದ ಎಸ್​ಐಟಿ

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಬ್ಲ್ಯಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರಾದ ನರೇಶ್ ಗೌಡ, ಶ್ರವಣ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ ) ತಯಾರಿ ನಡೆಸುತ್ತಿದೆ.

    ತಾಂತ್ರಿಕ ಕಾರಣದಿಂದಾಗಿ ಶನಿವಾರ ಸಲ್ಲಿಸಬೇಕಿದ್ದ ಆಕ್ಷೇಪಣೆ ಅರ್ಜಿಯನ್ನು ಸೋಮವಾರ ಸಲ್ಲಿಸಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಸಿಡಿ ಕೇಸ್‌ನಲ್ಲಿ ನರೇಶ್ ಹಾಗೂ ಶ್ರವಣ್ ಪ್ರಮುಖ ಪಾತ್ರ ವಹಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಎಸ್‌ಐಟಿ ಕೈ ಸೇರಿದೆ. ಎಸ್‌ಐಟಿ ಕಲೆಹಾಕಿರುವ ಸಿಸಿಟಿವಿ ದೃಶ್ಯಗಳು, ಶಂಕಿತರು ಎಸ್.ಪಿ.ರಸ್ತೆಯಲ್ಲಿ ಕ್ಯಾಮರಾ ಖರೀದಿಸಿರುವುದು ಸೇರಿ ಇನ್ನಿತರ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿ ನರೇಶ್ ಹಾಗೂ ಶ್ರವಣ್‌ಗೆ ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಸಂತ್ರಸ್ತ ಯುವತಿ ಎಸ್‌ಐಟಿಗೆ ಕೊಟ್ಟ ಹೇಳಿಕೆ, ತನಿಖೆ ವೇಳೆ ಪತ್ತೆಯಾದ ಕೆಲ ಸಾಕ್ಷಿಗಳನ್ನು ಗಮನಿಸಿದರೆ ಪ್ರಕರಣವು ಹನಿಟ್ರ್ಯಾಪ್ ತಿರುವು ಪಡೆಯುವ ಸಾಧ್ಯತೆಗಳಿವೆ. ಸಿಡಿಯಲ್ಲಿರುವ ಯುವತಿಯ ಜತೆ ಸಹಮತದಲ್ಲಿ ಸೆಕ್ಸ್ ನಡೆಸಿದ್ದು, ನನಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಕೊಟ್ಟಿರುವ ಹೇಳಿಕೆಯಿಂದ ಇಡೀ ಪ್ರಕರಣ ಮಹತ್ವದ ತಿರುವು ಪಡೆಯುವ ಲಕ್ಷಣ ಕಂಡು ಬಂದಿದೆ.

    ಜಾರಕಿಹೊಳಿ ಸಿಡಿ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ನರೇಶ್​ ಗೌಡ, ಶ್ರವಣ್..

    ಎಸ್​ಪಿ ಸ್ಕ್ವಾಡ್ ಹೆಸರಿನಲ್ಲಿ ಹಣ ವಸೂಲಿಗೆ ಮುಂದಾದ ಗ್ಯಾಂಗ್​! ಥಳಿಸಿ, ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts