More

    ನೀರು ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷೃ

    ಸಿರವಾರ: ತುಂಗಭದ್ರಾ ಎಡದಂಡೆ ಕಾಲುವೆ 89 ಹಾಗೂ 90 ನೇ ವಿತರಣಾ ನಾಲೆಯ ಕೊನೆಯ ಭಾಗಕ್ಕೆ ಸಮರ್ಪಕ ನೀರು ಹರಿಸಿ ಬೆಳೆ ರಕ್ಷಣೆ ಮಾಡಿ ಎಂದು ಒತ್ತಾಯಿಸಿ ರೈತರು ಮಾನ್ವಿ ಕ್ರಾಸ್‌ನಲ್ಲಿ ಸಂಚಾರ ತಡೆ ಧರಣಿ ನಡೆಸಿದರು.

    ಜಿಪಂ ಮಾಜಿ ಸದಸ್ಯ ಜೆ.ಶರಣಪ್ಪಗೌಡ ಮಾತನಾಡಿ, ನಾಲೆಯ ಮೇಲ್ಭಾಗದಿಂದ ಬರಬೇಕಾದ ನೀರು ತರುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ನಮ್ಮ ಜಮೀನುಗಳಿಗೆ ನೀರು ತಲುಪುತ್ತಿಲ್ಲ, ಕಳೆದ ತಿಂಗಳು ಮೂರು ಬಾರಿ ಸಂಚಾರ ತಡೆ ಪ್ರತಿಭಟನೆ ನಡೆಸಿದರೂ ನೀರು ತಲುಪುತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನೀರಾವರಿ ಇಲಾಖೆ ಇಇ ಬಸವನಗೌಡ ಆಗಮಿಸಿ 2 ದಿನದಲ್ಲಿ ನೀರು ತಲುಪಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ನಂತ ಧರಣಿ ಹಿಂಪಡೆಯಲಾಯಿತು. ಪಪಂ ಸದಸ್ಯ ಕೃಷ್ಣ ನಾಯಕ, ಪ್ರಮುಖರಾದ ಗವಿಗಟ್ ಬಸವರಾಜ, ಬೀರಪ್ಪ ಪೂಜಾರಿ, ಹರವಿ ಮುದಿಯಪ್ಪ, ರಾಘವೇಂದ್ರ ಖಾಜಗೌಡ, ಕಡದಿನ್ನಿ, ಚಾಗಭಾವಿ, ಹಳ್ಳಿಹೊಸೂರು, ಮಾಡಗಿರಿ, ಹರವಿ, ಗುಡದಿನ್ನಿ ಗ್ರಾಮಗಳ ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts