More

    ಕೆಂಚನಗುಡ್ಡದ ವರದೇಂದ್ರ ತೀರ್ಥರ ಬೃಂದಾವನ ಅಭಿವೃದ್ಧಿ: ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಮಾಹಿತಿ

    ಸಿರಗುಪ್ಪ: ತಾಲೂಕಿನ ಕೆಂಚನಗುಡ್ಡ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿರುವ ಶ್ರೀ ವರದೇಂದ್ರ ತೀರ್ಥರ ಬೃಂದಾವನ ಸ್ಥಳಕ್ಕೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಕೆಂಚನಗುಡ್ಡದ ತುಂಗಭದ್ರಾ ನದಿ ತೀರದಲ್ಲಿ ಜಗದ್ಗುರು ಮಧ್ವಾಚಾರ್ಯ ಪೀಠದ ಮೂಲ ಗುರುಗಳಾದ ವರದೇಂದ್ರ ಶ್ರೀಗಳ ವಿಶೇಷ ಕಾರ್ಯಕ್ಷೇತ್ರವಾಗಿದೆ. ಅಲ್ಲದೆ ಅವರ ಗುರುಗಳಾದ ವಸುಧೇಂದ್ರ ತೀರ್ಥರ ಸನ್ನಿಧಾನವೂ ಆಗಿದೆ. ಇಲ್ಲಿ ಗುರುಗಳು ಏಕಾಂತವಾಗಿ ಜಪ ತಪಾಧಿ ಅನುಷ್ಠಾನಗಳನ್ನು ಮಾಡುತ್ತಿದ್ದರು ಎನ್ನುವ ಬಗ್ಗೆ ಮಂತ್ರಾಲಯ ಮಠದಲ್ಲಿ ಪೂರಕ ದಾಖಲೆಗಳು ಲಭ್ಯವಿವೆ ಎಂದರು.

    ಇಲ್ಲಿ ಗುರುಗಳಿಂದಲೇ ಪ್ರತಿಷ್ಠಾಪಿತವಾಗಿರುವ ಶ್ರೀರಾಮಚಂದ್ರ ದೇವರು, ಮುಖ್ಯ ಪ್ರಾಣದೇವರು ಮತ್ತು ಮಹಾರುದ್ರ ದೇವರ ಸನ್ನಿಧಾನವಿದೆ. ವರದೇಂದ್ರ ತೀರ್ಥರು ಅನುಷ್ಠಾನ ಮಾಡುತ್ತಿದ್ದ ಸ್ಥಳವಾಗಿದ್ದು, ಶಿಥಿಲಾವಸ್ಥೆ ಸೇರಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಠದ ಶಿಷ್ಯರು, ಅಧಿಕಾರಿಗಳು ಹಾಗೂ ಶಾಸಕರ ನೆರವಿನೊಂದಿಗೆ ಈ ಸ್ಥಳವನ್ನು ಜೀಣೋದ್ಧಾರ ಮಾಡಲಾಗುವುದು ಎಂದು ತಿಳಿಸಿದರು. ಭಕ್ತರಾದ ರಾಘವೇಂದ್ರ ಕುಲಕರ್ಣಿ, ಸಂಜಯ್, ಶ್ರೀಕಾಂತ, ವೆಂಕಟೇಶ ಆಚಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts