More

    ಸಿರಗುಪ್ಪದ ಹಳೇಕೋಟೆ ಕೆರೆ ಭರ್ತಿಗೆ ಮುಂದಾದ ಗ್ರಾಮಸ್ಥರು: ರೈತರಿಂದ ಬೋರ್‌ವೆಲ್ ನೀರು ಪೂರೈಕೆ

    ಸಿರಗುಪ್ಪ: ಅಧಿಕಾರಿಗಳ ನಿರ್ಲಕ್ಷೃದಿಂದ ತಾಲೂಕಿನ 64-ಹಳೇಕೋಟೆ ಗ್ರಾಮದ ಕೆರೆ ಖಾಲಿಯಾಗಿದ್ದು, ಜನರು ಜೀವಜಲಕ್ಕಾಗಿ ಪರದಾಡುತ್ತಿದ್ದಾರೆ. ಸಮಸ್ಯೆ ತೀವ್ರವಾಗಿದ್ದರಿಂದ ಗ್ರಾಪಂ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮಸ್ಥರೇ ರೈತರ ಕೊಳವೆಬಾವಿಗಳ ಮೂಲಕ ಕೆರೆ ತುಂಬಿಸಲು ಮುಂದಾಗಿದ್ದಾರೆ.

    ತಾಲೂಕಿನಲ್ಲಿ ಹರಿಯುವ ಬಾಗೇವಾಡಿ ಕಾಲುವೆ ಪಕ್ಕದಲ್ಲಿಯೇ ಹಳೇಕೋಟೆ ಕೆರೆ ಇದ್ದು, ನೀರು ಹರಿಯುವಾಗ ಅಧಿಕಾರಿಗಳು ಕೆರೆ ತುಂಬಿಸಿಲ್ಲ. ಬೇಸಿಗೆ ಮುನ್ನವೇ ಕುಡಿವ ನೀರಿನ ಕೆರೆಗಳ ಭರ್ತಿಗೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಪ್ರತ್ಯೇಕವಾಗಿ ಸಭೆ ನಡೆಸಿ ಸೂಚಿಸಿದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ. ಇದರಿಂದ ಹತ್ತು ದಿನಗಳ ಹಿಂದೆ ಹಳೇಕೋಟೆ ಕೆರೆಯ ನೀರು ಖಾಲಿಯಾಗಿದ್ದು, ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗದ ಕಾರಣ ನೀರಿನ ಸಮಸ್ಯೆ ನಿವಾರಿಸಲು ಗ್ರಾಪಂ ಅಧ್ಯಕ್ಷೆ ಮಾರೆಮ್ಮ, ಸದಸ್ಯರು ಮತ್ತು ಗ್ರಾಮದ ಮುಖಂಡರು ಕೆರೆಯ ಅಕ್ಕಪಕ್ಕದ ಹೊಲಗಳಲ್ಲಿರುವ ಎಂಟು ಬೋರ್‌ವೆಲ್‌ಗಳ ಮೂಲಕ ನೀರು ತುಂಬಿಸಲು ಮುಂದಾಗಿದ್ದಾರೆ. ಇದಕ್ಕೆ ರೈತರೂ ಕೈಜೋಡಿಸಿದ್ದು, 15 ರಿಂದ 20 ದಿನಗಳವರೆಗೆ ನೀರು ಹರಿಸಲು ಸಮ್ಮತಿಸಿದ್ದಾರೆ. ಬೋರ್‌ವೆಲ್‌ಗಳ ನೀರನ್ನು ಕಾಲುವೆಗೆ ಹರಿಸಿ ಅಲ್ಲಿಂದ ಕೆರೆ ತುಂಬಿಸುವ ಕಾರ್ಯ ನಡೆದಿದೆ.

    ಕಾಲುವೆಯಲ್ಲಿ ನೀರು ಇದ್ದಾಗ ಅಧಿಕಾರಿಗಳು ಕೆರೆ ತುಂಬಿಸದೆ ನಿರ್ಲಕ್ಷೃ ತೋರಿದರ. ಇದರಿಂದ ಗ್ರಾಮದ ಕೆರೆ ಖಾಲಿಯಾಗಿ ಗ್ರಾಮಸ್ಥರಿಗೆ ಕುಡಿವ ನೀರಿನ ತೊಂದರೆಯಾಗಿದೆ. ಕೆರೆಯ ಅಕ್ಕಪಕ್ಕದ ಹೊಲಗಳ ರೈತರ ಮನವೊಲಿಸಿ ಅವರ ಬೋರ್‌ವೆಲ್‌ಗಳಿಂದ ಕೆರೆ ತುಂಬಿಸಲು ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಮುಖಂಡರು ಪ್ರಯತ್ನಿಸುತ್ತಿದ್ದೇವೆ.
    | ಶೇಕ್ಷಾವಲಿ, ಗ್ರಾಪಂ ಮಾಜಿ ಅಧ್ಯಕ್ಷ, ಹಳೇಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts