More

    ತೂಕದಲ್ಲಿ ಮೋಸ, ಗ್ರಾಹಕರ ಆಕ್ರೋಶ; ಬೂದುಗುಪ್ಪದಲ್ಲಿ ಪಡಿತರ ವಿತರಣೆ ಸ್ಥಗಿತ

    ಸಿರಗುಪ್ಪ: ತಾಲೂಕಿನ ಬೂದುಗುಪ್ಪ ಗ್ರಾಮದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದಿಂದ ಪಡಿತರ ಚೀಟಿದಾರರಿಗೆ ಅಕ್ಕಿ-ಗೋಧಿ ವಿತರಣೆಯ ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

    ಗ್ರಾಮದಲ್ಲಿ ಒಟ್ಟು 636 ಪಡಿತರ ಚೀಟಿದಾರರಿದ್ದು, ಪ್ರತಿಯೊಬ್ಬರಿಗೆ ನೀಡುವ ಅಕ್ಕಿ, ಗೋಧಿಯಲ್ಲಿ ತಲಾ 250 ಗ್ರಾಂ ಕಡಿಮೆ ನೀಡಲಾಗುತ್ತಿದೆ. ಎಲೆಕ್ಟ್ರಾನಿಕ್ ತೂಕದ ಯಂತ್ರದ ಮೂಲಕ ತೂಕ ಮಾಡಿ ಪಡಿತರ ನೀಡಬೇಕೆಂಬ ನಿಯಮವಿದ್ದರೂ ಸಂಘದಲ್ಲಿ ಪಾಲಿಸದೆ ಸಾಮಾನ್ಯ ತೂಕದ ಯಂತ್ರದ ಮೂಲಕ ಪಡಿತರ ಧಾನ್ಯ ನೀಡಲಾಗುತ್ತಿದೆ. ಪ್ರತಿ 5 ಕೆಜಿ ಅಕ್ಕಿಗೆ 250 ಗ್ರಾಂ ಮತ್ತು 4 ಕೆಜಿ ಗೋಧಿಯಲ್ಲಿ 250 ಗ್ರಾಂ ತೂಕ ಕಡಿಮೆ ಬರುತ್ತಿದೆ. ಸರ್ಕಾರ ನಿಗದಿಪಡಿಸಿದ ಪಡಿತರ ವಿತರಿಸಬೇಕು.ಅಲ್ಲಿಯವರೆಗೆ ಆಹಾರ ಧಾನ್ಯ ಮನೆಗೆ ಒಯ್ಯುವುದಿಲ್ಲವೆಂದು ಪಡಿತರದಾರರು ಗಲಾಟೆ ಮಾಡಿದ್ದರಿಂದ ಪಡಿತರ ಧಾನ್ಯಗಳ ಹಂಚಿಕೆ ಸ್ಥಗಿತಗೊಳಿಸಲಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿದ ಆಹಾರ ಇಲಾಖೆ ಶಿರಸ್ತೇದಾರ್ ಟಿ.ಮಹೇಶ, ತಕ್ಷಣವೇ ಎಲೆಕ್ಟ್ರಾನಿಕ್ ತೂಕದ ಯಂತ್ರ ಖರೀದಿಸಿ ಪಡಿತರ ಚೀಟಿದಾರರಿಗೆ ನಾಳೆಯೇ ಪಡಿತರ ವಿತರಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts