More

    ರೇಶನ್ ಕಾರ್ಡ್ ತಿದ್ದುಪಡಿ ಕಾಲಾವಕಾಶ ವಿಸ್ತರಿಸಿ; ಸರ್ಕಾರಕ್ಕೆ ಅಲೆಮಾರಿ ಬುಡಕಟ್ಟು ಮಹಾಸಭಾ ಒತ್ತಾಯ

    ಹಾವೇರಿ: ರೇಷನ್ ಕಾರ್ಡ್ ತಿದ್ದುಪಡಿ ಕಾಲಾವಧಿನ್ನು ಅಕ್ಟೋಬರ್ 31ರವರೆಗೆ ಮುಂದುವರಿಸುವಂತೆ ಒತ್ತಾಯಿಸಿ ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
    ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿದರು. ಅಲೆಮಾರಿಗಳು, ಕೂಲಿ ಕಾರ್ಮಿಕರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಸಣ್ಣ ಸಣ್ಣ ಬೀದಿಬದಿ ವ್ಯಾಪಾರಸ್ಥರು ದುಡಿಯಲು ಬೇರೆ ಬೇರೆ ಕಡೆ ವಲಸೆ ಹೋಗಿರುತ್ತಾರೆ. ಅಂಥವರು ಕೇವಲ ಮೂರು ದಿವಸದಲ್ಲಿ ರೇಷನ್ ಕಾರ್ಡ್ ಮಾಡಿಸಲು/ ತಿದ್ದುಪಡಿ ಮಾಡಿಸಲು ಸಾಧ್ಯವಾಗುವುದಿಲ್ಲ.
    ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಸ್ಕಾಲರಶಿಫ್‌ಗೆ ಅರ್ಜಿ ಹಾಕಲು ಮತ್ತು ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ಕಡ್ಡಾಯವಾಗಿ ರೇಷನ್ ಕಾರ್ಡ್ ಬೇಕಾಗಿದೆ. ಈ ಮೂರು ದಿವಸದಲ್ಲಿ ಸರ್ವರ್ ಸಮಸ್ಯೆ ಬೇರೆ ಕಾಡುತ್ತಿದೆ. ಹಾಗಾಗಿ, ಅನೇಕ ಜನ ರೇಷನ್ ಕಾರ್ಡ್ ಮಾಡಿಸಲಾಗದೇ ಸಮಸ್ಯೆಗೆ ಸಿಲುಕಿದ್ದಾರೆ. ಆದ್ದರಿಂದ ಬಡವರ ಅನುಕೂಲಕ್ಕಾಗಿ ಸರ್ಕಾರ ಅ.31ರವರೆಗೆ ತಿದ್ದುಪಡಿ ಹಾಗೂ ನೂತನ ಕಾರ್ಡ್ ಪಡೆಯಲು ಅನುಮತಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
    ಈ ಸಂದರ್ಭದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ, ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ, ಭೀಮಣ್ಣ ಭಜಂತ್ರಿ, ಆನಂದ ಕೋಮಾರಿ, ದೇವೇಂದ್ರಪ್ಪ, ಕಸ್ತೂರವ್ವ ಭಜಂತ್ರಿ, ರೇಣವ್ವ ಭಜಂತ್ರಿ, ಬಸವರಾಜ ಹರಿಜನ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts