More

    ಸರಳ ವಿವಾಹಗಳಿಗೆ ಹೆಚ್ಚಿನ ಒತ್ತು ನೀಡಲು ಭಕ್ತರಿಗೆ ಸುಕ್ಷೇತ್ರ ಅಂಕಲಿಮಠದ ವೀರಭದ್ರೇಶ್ವರ ಶ್ರೀಗಳು ಸಲಹೆ

    ಸಿರಗುಪ್ಪ: ಸರಳ ವಿವಾಹಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸುಕ್ಷೇತ್ರ ಅಂಕಲಿಮಠದ ವೀರಭದ್ರೇಶ್ವರ ಶ್ರೀಗಳು ತಿಳಿಸಿದರು. ಅಂಕಲಿಮಠದಲ್ಲಿ ಶ್ರೀ ಶರಣ ಗೋಮರ್ಸಿ ಮಲ್ಲಪ್ಪ ತಾತನವರ 29ನೇ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಡಾ.ಪಂ.ಪುಟ್ಟರಾಜ ಗವಾಯಿಗಳ ಪುರಾಣ ಮಹಾಮಂಗಲ, ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

    ಹಣವುಳ್ಳವರು ಆಡಂಬರದ ಮದುವೆ ಮಾಡಬಹುದು. ಆದರೆ, ಬಡವರು ಮಾಡಲು ಆಗುವುದಿಲ್ಲ. ಮಕ್ಕಳ ಮದುವೆಗಾಗಿ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ, ಸರ್ಕಾರ, ಸಂಘ-ಸಂಸ್ಥೆಗಳು ಸರಳ ಸಾಮೂಹಿಕ ವಿವಾಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

    ಕಾರ್ಯಕ್ರಮದ ವ್ಯವಸ್ಥಾಪಕ ವೈ.ಶ್ರೀನಿವಾಸ ಮಾತನಾಡಿ, ಸುಕ್ಷೇತ್ರ ಅಂಕಲಿಮಠದ ಲಿಂಗೈಕ್ಯ ಶ್ರೀ ಗುರುಬಸವರಾಜ ಮಹಾಸ್ವಾಮಿಗಳ ಶಿಷ್ಯರಾದ ಶ್ರೀ ಶರಣ ಗೋಮರ್ಸಿ ಮಲ್ಲಪ್ಪ ತಾತನವರ ಜಾತ್ರೆ ನಡೆಯುತ್ತದೆ. ಇದರ ಅಂಗವಾಗಿ ಹನ್ನೊಂದು ದಿನ ಪುರಾಣ ಪ್ರವಚನ, ಮಹಾಮಂಗಲ ನಡೆಯುತ್ತದೆ ಎಂದರು.

    ಕಾರ್ಯಕ್ರಮದಲ್ಲಿ 10 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಪುರಾಣ ಪ್ರವಚನಕಾರ ಬಸಯ್ಯ ಶಾಸ್ತ್ರಿ ಪುರಾಣ ನಡೆಸಿಕೊಟ್ಟರು. ಶಾಂತಾನಂದ ಗವಾಯಿಗಳು ಸಂಗೀತ ನಡೆಸಿಕೊಟ್ಟರು. ವೀರೇಶ ತಬಲಾ ಸಾಥ್ ನೀಡಿದರು. ಸಮಾಜ ಸೇವಕ ಧರಪ್ಪ ನಾಯಕ, ಮುಖಂಡರಾದ ಹುಸೇನಪ್ಪ, ಕೆ.ಮಲ್ಲಿಕಾರ್ಜುನ, ಜಾಜಿ ರಾಮಣ್ಣ, ಜಾಜಿ ಚನ್ನಬಸವ, ಗೋಮರ್ಸಿ ಈರಪ್ಪ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts