More

    ಬಯಲಾಟದಿಂದ ಸಾಮಾಜಿಕ ಜೀವನ ದರ್ಶನ

    ಸಿರಿಗೇರಿ: ಶ್ರೀ ನಾಗನಾಥೇಶ್ವರ ರಥೋತ್ಸವ, ಯುಗಾದಿ ಜಾನಪದ ಸಂಭ್ರಮ ನಿಮಿತ್ತ ನಾಗನಾಥೇಶ್ವರ ದೇವಸ್ಥಾನದ ಮುಂಭಾಗ ಮಂಗಳವಾರ ಹೆಜ್ಜೆ ಗೆಜ್ಜೆ ಕಲಾ ಟ್ರಸ್ಟ್‌ನಿಂದ ರತಿ ಕಲ್ಯಾಣ ಬಯಲಾಟ ಜರುಗಿತು.

    ಬಿಜೆಪಿ ಯುವ ಮೋರ್ಚಾ ನಾಯಕ ಎಂ.ಎಸ್. ಸಿದ್ದಪ್ಪ ಮಾತನಾಡಿ, ಬಯಲಾಟ ಮತ್ತು ನಾಟಕಗಳನ್ನು ಪ್ರತಿಯೊಬ್ಬರೂ ವೀಕ್ಷಿಸಬೇಕು. ಅದರಲ್ಲಿ ಅಡಗಿರುವ ಮಹತ್ವ ಅರಿತರೆ ಸಾಮಾಜಿ ಜೀವನ ದರ್ಶನವಾಗುತ್ತದೆ. ಕಲಾವಿದರ ಶ್ರಮದಿಂದ ಸಮಾಜ ಉತ್ತಮ ಮಾರ್ಗದತ್ತ ಹೋಗುತ್ತದೆ ಎಂದರು.

    ಕೆಆರ್‌ಪಿಪಿ ಯುವ ನಾಯಕ ಟಿ.ಧರಪ್ಪನಯಕ ಮಾತನಾಡಿ, ರತಿ ಕಲ್ಯಾಣದಲ್ಲಿನ ಪ್ರತಿ ಸನ್ನವೇಶಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕು. ಇದರಿಂದ ಸಮೃದ್ಧ ಮಳೆ ಬೆಳೆ ಆಗಿ ರೈತರ ಬದುಕು ಹಸನಾಗುತ್ತದೆ ಎಂದರು.

    ಪ್ರಮುಖರಾದ ಅಂಬರೀಷಗೌಡ, ಪೂಜಾರಿ ಸಿದ್ದಯ್ಯ, ಡ್ರೈವರ್ ಹುಲುಗಪ್ಪ, ಹಾಗಲೂರು ಮಲ್ಲನಗೌಡ, ಅಡಿವೆಯ್ಯ ಸ್ವಾಮಿ, ಬಕಾಡೆ ಈರಯ್ಯ, ಬಿ.ಕಟ್ಟೇಗೌಡ ಮಲ್ಲಯ್ಯ, ಮ್ಯಾನೇಜರ್ ರಾರಾವಿ ವೆಂಕಟೇಶ್, ಭಜಂತ್ರಿ ರಮೇಶ್, ನಾಗರಾಜ್ ಗೌಡ, ಲಕ್ಷ್ಮಣ್ ಭಂಡಾರಿ, ವಿ.ಮುದಿಯಪ್ಪ, ದಾನಪ್ಪ, ಶಿವಪ್ಪ, ಹಳ್ಳಿ ಮಾರೇಶ, ಹಳ್ಳಿಮರದ ರುದ್ರಪ್ಪ, ಆಟೋ ತಿಮ್ಮಯ್ಯ, ಕಲ್ಗುಡಿ ಮುದಿಯಪ್ಪ, ಬಯಲಾಟ ಕಲಾವಿದರಾದ ಎಚ್. ತಿಪ್ಪೇಸ್ವಾಮಿ, ಭೀಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts