More

    ಬೇಡುವ ಗುಣಕ್ಕಿಂತ ನೀಡುವ ಗುಣ ದೊಡ್ಡದು, ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸಲಹೆ

    ಸಿರಿಗೇರಿ: ಉತ್ತಮ ಸಂಸ್ಕಾರ ನೀಡಿದರೆ ಮಾತ್ರ ಮಕ್ಕಳಲ್ಲಿ ಬೇಡುವ ಗುಣದ ಬದಲು, ನೀಡುವ ಗುಣ ಬೆಳೆಯಲಿದೆ ಎಂದು ದಿಂಗಾಲೇಶ್ವರ ಸಂಸ್ಥಾನ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಸಮೀಪದ ಸಿದ್ದರಾಂಪುರದಲ್ಲಿ ಕದಳೀವನ ಸಿದ್ದೇಶ್ವರ ತಾತನವರ 17ನೇ ಪುಣ್ಯಸ್ಮರಣೆಯ ಅಂಗವಾಗಿ ಭಾನುವಾರ ಜರುಗಿದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಮಕ್ಕಳಿಗಾಗಿ ಆಸ್ತಿ ಮಾಡುವುದು ಬೇಡ. ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ನೀಡಿ ಅವರನ್ನೇ ದೊಡ್ಡ ಆಸ್ತಿಯನ್ನಾಗಿ ಮಾಡಿ ಎಂದು ಸಲಹೆ ನೀಡಿದರು.

    ಕದಳೀವನ ಸಿದ್ದೇಶ್ವರ ತಾತನವರ ಮಠ ಶಿಕ್ಷಣ ಮತ್ತು ಸಂಸ್ಕಾರ ನೀಡುವ ಕಾಯಕದಲ್ಲಿ ಮುಂಚೂಣಿಯಲ್ಲಿದೆ. ನೊಂದ ಭಕ್ತರ ಜೀವನಕ್ಕೆ ಬೆಳಕು ನೀಡುತ್ತಿದೆ ಎಂದರು.
    ಕದಳೀವನ ಸಿದ್ದೇಶ್ವರ ಮಠದ ಶ್ರೀ ಚಿದಾನಂದ ತಾತ ಮಾತನಾಡಿ, ದಿಂಗಾಲೇಶ್ವರ ಸಂಸ್ಥಾನ ಮಠವನ್ನು ಭಾವೈಕ್ಯ ಕೇಂದ್ರವನ್ನಾಗಿ ಬೆಳೆಸಿದ ದಿಂಗಾಲೇಶ್ವರ ಶ್ರೀಗಳು ನಮ್ಮ ಮಠಕ್ಕೆ ಬಂದಿರುವುದು ಈ ಭಾಗದ ಜನರ ಭಾಗ್ಯವೇ ಸರಿ ಎಂದು ಹೇಳಿದರು.

    ಕದಳೀವನ ಸಿದ್ದೇಶ್ವರ ತಾತನವರ ಉತ್ಸವ ಮೂರ್ತಿ ಮತ್ತು ದಿಂಗಾಲೇಶ್ವರ ಶ್ರೀಗಳನ್ನು ಅಲಂಕೃತ ವಾಹನದಲ್ಲಿ ಕೂರಿಸಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಡೊಳ್ಳು, ಕಳಸ, ಪೂರ್ಣಕುಂಭ, ವೀರಗಾಸೆ, ಸಮಾಳ ಸೇರಿ ಇತರ ಕಲಾತಂಡಗಳು ಉತ್ಸವದ ಮೆರುಗು ಹೆಚ್ಚಿಸಿದವು. ದಿಂಗಾಲೇಶ್ವರ ಶ್ರೀಗಳಿಗೆ ಹಲಕುಂದಿ ಗ್ರಾಮದ ಹಂಪಮ್ಮ, ತಿಮ್ಮಾರೆಡ್ಡಿ ಮತ್ತು ಕುಟುಂಬ ಹಾಗೂ ಕಾಯಕಯೋಗಿ ಚಿದಾನಂದ ತಾತನವರಿಗೆ ಗರ್ಜಿಗನೂರಿನ ವಿಮಲಮ್ಮ ನಾಗೇಶ್ ಗೌಡ, ಜಯಮ್ಮ, ನಾಗರಾಜ ಗೌಡ ಕುಟುಂಬದವರು 12ನೇ ತಲಾಭಾರ ಸೇವೆ ನೆರವೇರಿಸಿದರು.

    ತೆಕ್ಕಲಕೋಟೆ ಕಂಬಾಳಿ ಮಠದ ವೀರಭದ್ರೇಶ್ವರ ತಾತ, ಶೀಶೈಲ ವೀರಭದ್ರ ಶಿವಾಚಾರ್ಯ, ಬುಕ್ಕಸಾಗರದ ಕರಿಸಿದ್ದೇಶ್ವರ ಶಿವಾಚಾರ್ಯ, ಹಳೇಕೋಟೆಯ ಸಿದ್ದಬಸವ ಶ್ರೀ, ಸಿರುಗುಪ್ಪದ ಬಸವಭೂಷಣ ಶ್ರೀ, ಕೊಕ್ಕರಚೇಡಿನ ಶರಣಮ್ಮತಾಯಿ, ಕೊಂಚಿಗೇರಿ ಶಿವಪ್ಪತಾತ, ಕುಡದರಹಾಳಿನ ಶಿವಕುಮಾರ ತಾತ, ಕ್ಯಾದಿಗೆಹಾಳು ಗಂಗಾಧರ ತಾತ, ಸುಳುವಾಯಿಯ ಮಲ್ಲಯ್ಯ ತಾತ, ಬಾದನಹಟ್ಟಿ ಕರಿಬಸವ ಶರಣರಿದ್ದರು. ವಂದವಾಗಲಿ ಪಂಪಯ್ಯಸ್ವಾಮಿ, ಮಹಾಬಲೇಶ್ವರ ಗೌಡ, ಟಿ.ಎಚ್.ಶೇಕ್ಷಾವಲಿ, ಕೆ.ಭೀಮೇಶ್, ಎಚ್.ಶೇಖರಯ್ಯ ಸ್ವಾಮಿ, ಎಚ್.ಹುಲಿಗೇಶ, ನಾಗರಾಜ, ಕೆ.ಮಾರೆಣ್ಣ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts