More

    ಲಾಭದಾಯಕ ಬೆಲೆ ನಿಗದಿ ಕಾಯ್ದೆ ಜಾರಿಗೊಳಿಸಿ

    ಸಿರವಾರ: ಬೆಳೆಗಳಿಗೆ ಲಾಭದಾಯಕ ಬೆಲೆ ನಿಗದಿ ಕಾಯ್ದೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ ತಹಸೀಲ್ ಕಚೇರಿ ಸಿಬ್ಬಂದಿ ಫಕ್ರುದ್ದಿನ್‌ಗೆ ಮನವಿ ಸಲ್ಲಿಸಿತು.

    ಭಾರತ ದೇಶ ಕೃಷಿ ಪ್ರಧಾನವಾಗಿದ್ದು, ಶೇ.75-80 ಜನ ಕೃಷಿಯನ್ನೇ ಜೀವನದ ವೃತ್ತಿಯಾಗಿಸಿಕೊಂಡಿದ್ದಾರೆ. 2020-21 ಜಿಡಿಪಿಯಲ್ಲಿ (ಉ.ಆ.ಕ) ಶೇ.20 ಆದಾಯ ಕೃಷಿಯ ಮೂಲ. ದೇಶ ಕೃಷಿ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದೆ. ಹಸಿರು ಕ್ರಾಂತಿಯಿಂದ ಇಂದು ವಿಶ್ವದಲ್ಲಿ ಅತಿ ಹೆಚ್ಚು ಅಕ್ಕಿ, ಗೋಧಿ, ಹತ್ತಿ, ಕಬ್ಬು, ಶೇಂಗಾ ಬೆಳೆಗಳಲ್ಲಿ 2ನೇ ಸ್ಥಾನದಲ್ಲಿದ್ದು, ವಿಶ್ವದ ಶೇ.30 ದ್ವಿದಳ ಧಾನ್ಯ ಭಾರತ ದೇಶದಲ್ಲಿ ಉತ್ಪಾದಿಸಲಾಗುತ್ತಿದೆ.

    2020-21ರಲ್ಲಿ 206.65 ಮಿಲಿಯನ್ ಟನ್ ಆಹಾರ ಧಾನ್ಯಗಳ ಉತ್ಪಾದನೆ ಆಗಿದೆ. ಆದರೆ ಕೃಷಿ ಕ್ಷೇತ್ರದಲ್ಲಿ ತೊಡಗಿರುವ ರೈತರ ಜೀವನ ಮಟ್ಟ ಶೋಚನೀಯ ಸ್ಥಿತಿಯಲ್ಲಿದೆ. ತಾವು ಬೆಳೆದ ಬೆಳೆಗಳಿಗೆ ವೈಜ್ಞಾನಿಕ, ಲಾಭದಾಯಕ ಬೆಲೆ ದೊರೆಯದೇ ಆರ್ಥಿಕ ನಷ್ಟದಿಂದ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ದಾರಿ ಹಿಡೆದಿದ್ದಾರೆ. ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ ನಿಗದಿ ಕಾಯ್ದೆ ಜಾರಿಯಾದರೆ ಮಾತ್ರ ರೈತ ಸಂತೃಪ್ತಿಯಿಂದ ಕೃಷಿ ಮಾಡಲು ಸಾಧ್ಯ ಎಂದು ರಾಷ್ಟ್ರಪತಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

    ತಾಲೂಕು ಅಧ್ಯಕ್ಷ ಕೆ.ವೇದವ್ಯಾಸ ಖಾಜನಗೌಡ, ಮಾಜಿ ಸೈನಿಕ ವಿಜಯೇಂದ್ರ, ಅಮೃತ ಕಾಲತಿಪ್ಪಿ, ವೈಷ್ಣವಿ, ಶಿವಶರಣಗೌಡ ಬೆಳವಿನೂರು, ಮಂಜುನಾಥ ನಾಯಕ, ಸುರೇಂದ್ರ ಉಡುಪಿ, ಎನ್.ಮಲ್ಲಪ್ಪ, ಹನುಮಂತ ಹಟ್ಟಿ, ಶಿವರಾಜ ಹಟ್ಟಿ, ಸಾಬಣ್ಣ ನಾಯಕ, ಹನುಮಂತ ಗಲಗ, ಶ್ಯಾಮ್‌ಸುಂದರ್, ಕಮಲ್ ನಾಯಕ ಸಿಂಗಡದಿನ್ನಿ, ರಮೇಶ ದೊರೆ, ಯಂಕಣ್ಣ ನಾಯಕ ಗಣದಿನ್ನಿ, ವೆಂಕಟೇಶ, ಕುಮಾರಸ್ವಾಮಿ ಸಿರವಾರ, ಬಸವರಾಜ ಚಾಗಿ, ಶರಣ ನಾಯಕ ಸಿರವಾರ, ಮಲ್ಲಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts