More

    ಲಾರ್ಡ್ಸ್‌ನಲ್ಲಿ ಕಪಿಲ್ ದೇವ್ ದಾಖಲೆ ಮುರಿದ ಮೊಹಮದ್ ಸಿರಾಜ್

    ಲಂಡನ್: ಭಾರತ ತಂಡ ಲಾರ್ಡ್ಸ್ ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಸಾಧಿಸಿದ ಐತಿಹಾಸಿಕ ಗೆಲುವಿನಲ್ಲಿ ವೇಗಿ ಮೊಹಮದ್ ಸಿರಾಜ್ ಮಹತ್ವದ ಪಾತ್ರ ನಿರ್ವಹಿಸಿದರು. ಈ ವೇಳೆ ಅವರು, ಕಳೆದ 39 ವರ್ಷಗಳಿಂದ ಭಾರತೀಯ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರ ಹೆಸರಿನಲ್ಲಿದ್ದ ಅಪರೂಪದ ದಾಖಲೆಯೊಂದನ್ನು ಮುರಿದರು.

    27 ವರ್ಷದ ಮೊಹಮದ್ ಸಿರಾಜ್ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಒಟ್ಟು 126 ರನ್ ವೆಚ್ಚದಲ್ಲಿ 8 ವಿಕೆಟ್ ಕಬಳಿಸಿದರು. ಈ ಮೂಲಕ ಅವರು ತಾವು ಹುಟ್ಟುವುದಕ್ಕೂ ಮೊದಲೇ ಆಲ್ರೌಂಡರ್ ಕಪಿಲ್ ದೇವ್ ನಿರ್ಮಿಸಿದ್ದ ಭಾರತೀಯ ದಾಖಲೆಯನ್ನು ಅಳಿಸಿ ಹಾಕಿದರು.

    ಇದನ್ನೂ ಓದಿ: ಪಾಕ್ ವಿರುದ್ಧ 1 ವಿಕೆಟ್ ಜಯ, ಟೆಸ್ಟ್ ಕ್ರಿಕೆಟ್‌ನಲ್ಲಿ ಅಮೋಘ ದಾಖಲೆ ಬರೆದ ವೆಸ್ಟ್ ಇಂಡೀಸ್

    ಕಪಿಲ್ ದೇವ್ 1982ರಲ್ಲಿ ಆಂಗ್ಲರ ವಿರುದ್ಧ 168 ರನ್‌ಗೆ 8 ವಿಕೆಟ್ ಕಬಳಿಸಿದ್ದು, ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತದ ಬೌಲರ್‌ನ ಅತ್ಯುತ್ತಮ ನಿರ್ವಹಣೆ ಎನಿಸಿತ್ತು. ಸಿರಾಜ್ ಈಗ ಆ ದಾಖಲೆಯನ್ನು ಮುರಿದು ಲಾರ್ಡ್ಸ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್ ಎನಿಸಿದ್ದಾರೆ. ಸಿರಾಜ್ ಮೊದಲ ಇನಿಂಗ್ಸ್‌ನಲ್ಲಿ 94 ರನ್‌ಗೆ 4 ವಿಕೆಟ್ ಕಬಳಿಸಿದ್ದರೆ, 2ನೇ ಇನಿಂಗ್ಸ್‌ನಲ್ಲಿ 32 ರನ್‌ಗೆ 4 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಆದರೆ ಎರಡೂ ಸಲ 5 ವಿಕೆಟ್ ಗೊಂಚಲು ತಪ್ಪಿದ್ದರಿಂದ ಲಾರ್ಡ್ಸ್ ಮೈದಾನದ ಆನರ್ಸ್‌ ಬೋರ್ಡ್ಸ್‌ನಲ್ಲಿ ಅವರ ಹೆಸರು ದಾಖಲಾಗುವುದು ತಪ್ಪಿಹೋಯಿತು.

    ಭಾರತಕ್ಕೆ 89ರ ಅದೃಷ್ಟ!
    ಹಾಲಿ ವರ್ಷದ ಆರಂಭದಲ್ಲಿ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ರಿಷಭ್ ಪಂತ್ ಸಿಡಿಸಿದ ಅಜೇಯ 89 ರನ್ ಭಾರತಕ್ಕೆ 328 ರನ್ ಗುರಿ ಬೆನ್ನಟ್ಟಿ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಗೆಲುವು ದಾಖಲಿಸಲು ನೆರವಾಗಿತ್ತು. ಇಂಗ್ಲೆಂಡ್‌ನಲ್ಲೂ ಭಾರತಕ್ಕೆ 89 ಸಂಖ್ಯೆ ಅದೃಷ್ಟ ತಂದಿರುವುದು ವಿಶೇಷ. ಲಾರ್ಡ್ಸ್‌ನಲ್ಲಿ ಸೋಮವಾರ ಮೊಹಮದ್ ಶಮಿ-ಜಸ್‌ಪ್ರೀತ್ ಬುಮ್ರಾ ಆಡಿದ ಅಜೇಯ 89 ರನ್ ಜತೆಯಾಟ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿತು.

    ಮೋದಿಗೆ ಒಲಿಂಪಿಯನ್‌ಗಳಿಂದ ವಿವಿಧ ಉಡುಗೊರೆ, ಏನೇನು ಕೊಟ್ಟರು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts