More

    ಟೀಮ್ ಇಂಡಿಯಾ ವೇಗಿ ಸಿರಾಜ್‌ಗೆ ಬ್ರಿಸ್ಬೇನ್‌ನಲ್ಲೂ ಪ್ರೇಕ್ಷಕರಿಂದ ನಿಂದನೆ

    ಬ್ರಿಸ್ಬೇನ್: ಸಿಡ್ನಿಯಲ್ಲಿ ಜನಾಂಗೀಯ ನಿಂದನೆಗೆ ಗುರಿಯಾಗಿದ್ದ ಟೀಮ್ ಇಂಡಿಯಾ ವೇಗಿ ಮೊಹಮದ್ ಸಿರಾಜ್‌ಗೆ ಬ್ರಿಸ್ಬೇನ್‌ನಲ್ಲೂ ಆತಿಥೇಯ ಪ್ರೇಕ್ಷಕರಿಂದ ನಿಂದನೆ ಎದುರಾಗಿದೆ. ಕೆಲ ಪ್ರೇಕ್ಷಕರು ಸಿರಾಜ್‌ರನ್ನು ‘ಗ್ರಬ್’ (ಕೀಟ) ಎಂದು ನಿಂದಿಸಿದ್ದಾರೆ ಎಂದು ಆಸೀಸ್ ಪತ್ರಿಕೆ ವರದಿ ಮಾಡಿದೆ.

    ಸಿಡ್ನಿಯಲ್ಲಿ ಸಿರಾಜ್‌ಗೆ ಜನಾಂಗೀಯ ನಿಂದನೆ ಮಾಡಿದ್ದಕ್ಕೆ 6 ಪ್ರೇಕ್ಷಕರನ್ನು ಬಂಧಿಸಲಾಗಿತ್ತು. ಪ್ರಕರಣದ ಸಂಬಂಧ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಭಾರತ ತಂಡದ ಕ್ಷಮೆಯಾಚಿಸಿತ್ತು. ಇದರ ನಡುವೆಯೂ ಆತಿಥೇಯ ಪ್ರೇಕ್ಷಕರು ಪಾಠ ಕಲಿತಿಲ್ಲ.

    ಇದನ್ನೂ ಓದಿ: ದೇಶೀಯ ಟಿ20ಯಲ್ಲಿ ಮಿಂಚುತ್ತಿದ್ದಾರೆ ಕೇದಾರ್ ಜಾಧವ್, ಸಿಎಸ್‌ಕೆ ಫ್ಯಾನ್ಸ್ ಏನಂದರು ಗೊತ್ತೇ?

    ಗಾಬಾ ಮೈದಾನದಲ್ಲೂ ಕೆಲ ಪ್ರೇಕ್ಷಕರು ಸಿರಾಜ್‌ರನ್ನೇ ಗುರಿಯಾಗಿಸಿ ನಿಂದಿಸಿದರು. ವಾಷಿಂಗ್ಟನ್ ಸುಂದರ್ ಕೂಡ ನಿಂದನೆಗೆ ಗುರಿಯಾದರು ಎಂದು ಕೇಟ್ ಹೆಸರಿನ ಪ್ರೇಕ್ಷಕ ಪತ್ರಿಕೆಗೆ ತಿಳಿಸಿದ್ದಾರೆ. ಸಿಡ್ನಿಯಲ್ಲಿ ಪ್ರೇಕ್ಷಕರ ನಿಂದನೆಯಿಂದಾಗಿ 4ನೇ ದಿನದಾಟದಲ್ಲಿ 10 ನಿಮಿಷಗಳ ಆಟಕ್ಕೂ ಅಡಚಣೆ ಎದುರಾಗಿತ್ತು. ಈ ಸಂಬಂಧ ಬಿಸಿಸಿಐ, ಐಸಿಸಿ ಮ್ಯಾಚ್ ರೆಫ್ರಿಗೂ ದೂರು ಸಲ್ಲಿಸಿತ್ತು. ಐಸಿಸಿ ಕೂಡ ಘಟನೆಯನ್ನು ಖಂಡಿಸಿತ್ತು.

    ಕನ್ನಡಿಗ ರಾಬಿನ್ ಉತ್ತಪ್ಪ ಭರ್ಜರಿ ಬ್ಯಾಟಿಂಗ್, ಕೇರಳಕ್ಕೆ ಹ್ಯಾಟ್ರಿಕ್ ಗೆಲುವು

    ತೆಂಡುಲ್ಕರ್ ಪುತ್ರ ಅರ್ಜುನ್ ಮುಂಬೈ ಪರ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ

    VIDEO: ಚೆಂಡು ಎಸೆಯುವ ಭರದಲ್ಲಿ ಪೃಥ್ವಿ ಷಾ ಮಾಡಿದ ಎಡವಟ್ಟೇನು ಗೊತ್ತಾ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts