More

    6.95 ಲಕ್ಷ ರೂ. ಉಳಿತಾಯ ಬಜೆಟ್

    ಸಿರಗುಪ್ಪ: ಪಪಂ ಆಡಳಿತವನ್ನು ನಾಗರಿಕ ಸ್ನೇಹಿಯಾಗಿಸುವ ಉದ್ದೇಶದಿಂದ ಸದರಿ ಆಯ-ವ್ಯಯವನ್ನು ಸಿದ್ದಪಡಿಸುವ ಪೂರ್ವದಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ಸಲಹೆ, ಅಭಿಪ್ರಾಯ ಪಡೆಯಲಾಗಿದೆ ಪಪಂ ಅಧ್ಯಕ್ಷೆ ಎಚ್.ಕೆ.ನೀಲಮ್ಮ ತಿಳಿಸಿದರು.

    ತಾಲೂಕಿನ ತೆಕ್ಕಲಕೋಟೆಯ ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಜೆಟ್ ಮಂಡನೆ ಸಭೆಯಲ್ಲಿ ಮಾತನಾಡಿದರು. ಸ್ಥಳೀಯ ನಾಗರಿಕ ಸಮಸ್ಯೆಗಳನ್ನು ಸ್ಥಳೀಯ ಹಂತದಲ್ಲೇ ಪರಿಹರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಸಂವಿಧಾನದಡಿ ಸ್ಥಳೀಯ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಎಂದರು.

    ಬಜೆಟ್ ಮಂಡಿಸಿದ ಮುಖ್ಯಾಧಿಕಾರಿ ಡಿ.ಬಿ. ಈರಣ್ಣ , 2023-24ನೇ ಸಾಲಿನ ಅಂದಾಜು 18,19,75,000 ರೂ. ಆದಾಯದಲ್ಲಿ ಪಟ್ಟಣದ ಅಭಿವೃದ್ಧಿಗೆ 18,12,80,000 ರೂ. ವ್ಯಯವಾಗಿ 6.95 ಲಕ್ಷ ರೂ. ಉಳಿತಾಯವಾಗಲಿದೆ ಎಂದು ತಿಳಿಸಿದರು.

    ಸದಸ್ಯ ಸಿದ್ದೇಶ್ವರ ಮಾತನಾಡಿ, ಕಳೆದ ಬಾರಿಯ ಬಜೆಟ್‌ನಲ್ಲಿಟ್ಟಿದ್ದ ಹಣದಿಂದ ಅಭಿವೃದ್ಧಿ ಆಗದಿರುವ ಬಗ್ಗೆ ಅಸಮಾಧಾನವಿದ್ದು, ಸಾರ್ವಜನಿಕರಿಗೆ ಉಪಯೋಗವಾಗುವಂತೆ ಕಾಮಗಾರಿ ಕೈಗೊಳ್ಳಬೇಕು. ಗ್ರಾಮದ ಕಾಡಸಿದ್ದೇಶ್ವರ ಜಾತ್ರೆ ಬರುವ ಭಕ್ತರಿಗೆ ಕುಡಿವ ನೀರು, ಬೀದಿದೀಪ, ಸೂಕ್ತ ಚರಂಡಿ ವ್ಯವಸ್ಥೆ ಕೈಗೊಳ್ಳಬೇಕೆಂದು ತಿಳಿಸಿದರು.

    ಉಪಾಧ್ಯಕ್ಷ ವಿ.ದ್ಯಾವಣ್ಣ, ಸದಸ್ಯರಾದ ಕೆ.ಲಕ್ಷ್ಮೀ, ಎಂ.ರುದ್ರಮ್ಮ, ಹುಸೇನಪ್ಪ, ಮಂಜುನಾಥ, ರಾಘವೇಂದ್ರ, ಎಸ್.ಆನಂದ, ನಸುರುದ್ದೀನ್, ಎಸ್.ಸಿದ್ದಯ್ಯ, ಪರಸಣ್ಣ, ಅಧಿಕಾರಿಗಳಾದ ಶೋಭಾ, ಮಹೇಶ, ಖಾದರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts